ಬೆಂಗಳೂರು: ಇಂದು ಕೂಡ ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆದಿದೆ. ಈ ಮೂಲಕ ರಾಜ್ಯದಲ್ಲಿ ಇಂದು 100 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 2281 ಒಟ್ಟು ಸೋಂಕಿತ ಪ್ರಕರಣಗಳಲ್ಲಿ 1514 ಕೊರೋನಾ ಸೋಂಕಿತ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 17 ಕೇಸ್ ಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿವೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ 722 ಕೇಸ್ ಗುಣಮುಖವಾದಂತಾಗಿದೆ. ಇಂದಿನ ವರದಿ ಪ್ರಕಾರ ಸೋಂಕಿನಿಂದ ರಾಜ್ಯದಲ್ಲಿ ಮೃತಪಟ್ಟಿಲ್ಲ. ಆದರೆ ಈವರೆಗೆ ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 44 ಇದೆ. ಜೊತೆಗೆ ಕೊವಿಡ್ ಸೋಂಕಿನ ಅನ್ಯ ಕಾರಣದಿಂದ ಮೃತಪಟ್ಟವರ ಸಂಖ್ಯೆ 02 ಇದೆ. ಇಂದಿನ ಸೋಂಕಿತರ ಸಂಕಿ ಸಂಖ್ಯೆಗಳನ್ನು ನೋಡೊದಾಗ ಚಿತ್ರದುರ್ಗ, ಬೀದರ್, ಯಾದಗಿರಿ, ಬೆಳಗಾವಿ, ಹಾಸನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಪತ್ತೆ..!

ಕೋಲಾರ – 02

ಯಾದಗಿರಿ – 14

ದಕ್ಷಿಣ ಕನ್ನಡ – 03

ಬಾಗಲಕೋಟೆ -01

ವಿಜಯಪುರ -05

ದಾವಣಗೆರೆ -11

ಬೀದರ್ -10

ಹಾಸನ – 13

ಉಡುಪಿ -03

ಚಿಕ್ಕಬಳ್ಳಾಪುರ -01

ಚಿತ್ರದುರ್ಗ -20

ಕೊಪ್ಪಳ -01

ಬಳ್ಳಾರಿ -01

ಬೆಂಗಳುರು -02

ಬೆಳಗಾವಿ -13

Leave a Reply

Your email address will not be published. Required fields are marked *

You May Also Like

ಸುಕ್ಷೇತ್ರ ಯಲಗುರೇಶ ಕಾರ್ತಿಕೋತ್ಸವ

ಆಲಮಟ್ಟಿ : ಸಮೀಪದ ಸುಕ್ಷೇತ್ರ ಯಲಗುರ ಗ್ರಾಮದ ಜಾಗೃತದೇವ ಹನುಮ ಯಲಗುರೇಶನ ಕಾರ್ತಿಕೋತ್ಸವ ಶನಿವಾರ ಜರುಗಲಿದೆ.…

ಮುಳ್ಳಿನ ಮೇಲೆ ಬಟ್ಟೆ ಹಾಕಿ ತಪ್ಪು ಮಾಡಿದೆ – ಕುಮಾರಸ್ವಾಮಿ!

ರಾಮನಗರ : ನಾನು ಮುಳ್ಳಿನ ಮೇಲೆ ಬಟ್ಟೆ ಹಾಕಿ ದೊಡ್ಡ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಅಸ್ವಸ್ಥ

ಗ್ರಾಮ ಪಂಚಾಯತ್ ಚುನಾವಣೆಯ‌ ಮತ ಎಣಿಕೆ ಹಿನ್ನೆಲೆ ಇಂದು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಅಭ್ಯರ್ಥಿ ಅಸ್ವಸ್ಥಗೊಮಡ ಘಟನೆ ಹಾವೇರಿಯಲ್ಲಿ ನಡೆದಿದೆ.

ವಾಲಿಬಾಲ್ ಪಂದ್ಯಾಟ : ಹಳಕಟ್ಟಿ ಶಾಲೆ ಬಾಲಕಿಯರ ತಂಡ ಸಾಧನೆ

ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ  2022-23…