ಹಾವೇರಿ: ಜಮೀನು ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೆರಿ ಜಿಲ್ಲೆಯಲ್ಲಿ ನಡೆದಿದೆ. ಮರಿಯಪ್ಪ ಭೂಮಣ್ಣವರ ಕೊಲೆಯಾದ ವ್ಯಕ್ತಿ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ರಾಮಪ್ಪ ನಾಗಪ್ಪ ಭೂಮಳ್ಳೇರ ಎಂಬುವವನಿಂದ ಕೃತ್ಯ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಜಮೀನು ಒತ್ತುವರಿಯಾಗಿದೆ ಎಂದು ಪಕ್ಕದ ಹೊಲದ ಮಾಲೀಕ ರಾಮಪ್ಪ ಭೂಮಳ್ಳೆರ ಖ್ಯಾತೆ ತೆಗೆದಿದ್ದನೆನ್ನಲಾಗಿದೆ. ಸಂಗಡಿಗರೊಂದಿಗೆ ಸೇರಿ ಮರಿಯಪ್ಪನಿಗೆ ಥಳಿಸಿ ಜಮೀನಿಗೆ ಉಪಯೋಗಿಸುವ ಕೀಟನಾಶಕ ಕುಡಿಸಿ ಕೊಲೆಗೆ ಯತ್ನಿಸಿದ್ದಾರೆ. ಅಸ್ವಸ್ಥನಾಗಿದ್ದ ಮರಿಯಪ್ಪನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮರಿಯಪ್ಪ ಮೃತಪಟ್ಟಿದ್ದಾರೆ. ಮರಿಯಪ್ಪನ‌ ಕೊಲೆಗಾರರನ್ನು ಕೂಡಲೇ ಬಂಧಿಸುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಕೊಲೆಗಾರರನ್ನು ಬಂಧಿಸುವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರ ಪಟ್ಟು ಹಿಡಿದರು. ಮೃತದೇಹವನ್ನು ಮನೆಯಲ್ಲಿಟ್ಟು ಕುಟುಂಬಸ್ಥರು ಧರಣಿ ಮಾಡಿದರು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಶೌರ್ಯ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ: ಸಿಎಂ ಘೋಷಣೆ

vijaya diwas

ಎಮ್ ಇಸ್ ಎಸ್ ಮತ್ತು ಶಿವಸೇನೆ ನಿಷೇಧಿಸಲು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ಆಗ್ರಹ

ಲಕ್ಷ್ಮೇಶ್ವರ:ನಾಡಧ್ವಜ ಸುಟ್ಟು ಅಪಮಾನ ಮಾಡಿದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ…

ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆರ ಮನವಿ

ಮುಖ್ಯವಾಗಿ ಜಿಲ್ಲೆಯಲ್ಲಿನ ಆಯಾ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ರಾಜ್ಯಮಟ್ಟದಲ್ಲಿನ ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿಯಿಂದ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಗಡಿಬಿಡಿಯ ಲಾಕ್ ಡೌನ್ ಜಾರಿ: ಗಲಿಬಿಲಿಯಲ್ಲಿ ಉತ್ಪಾದನಾ ಫ್ಯಾಕ್ಟರಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.