ಲಕ್ಷ್ಮೇಶ್ವರ:ನಾಡಧ್ವಜ ಸುಟ್ಟು ಅಪಮಾನ ಮಾಡಿದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಎಂ.ಇ.ಎಸ್.ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಆರೋಪಿಗಳನ್ನು ಕೊಡಲೇ ತಕ್ಕ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ತಾಲೂಕ ಅಧ್ಯಕ್ಷ ಹನುಮಂತಪ್ಪ ಶರಸೂರಿ ಬೆಳಗಾವಿ ಜಿಲ್ಲೆ ಅನಗೋಳ ಗ್ರಾಮದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿದ ಹಾಗೂ ನಾಡದ್ವಜವನ್ನು ಸುಟ್ಟು ದುರಹಂಕಾರದಿಂದ ಮೆರೆಯುತ್ತಿರುವ ಎಂ.ಇ.ಎಸ್.ಕಾರ್ಯಕರ್ತರು ಹಾಗೂ ಶಿವಸೇನೆಯ ಕಾರ್ಯಕರ್ತರು ಕರ್ನಾಟಕ ರಾಜ್ಯಕ್ಕೆ ಮಾಡಿದ ಘೋರ ಅಪಮಾನವಾಗಿದ್ದು ,ಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ ಪದೇ ಪದೇ ಬೆಳಗಾವಿ ಮಹಾರಾಷ್ಟ್ರಕ್ಕೆ ಸಂಬಂಧಪಟ್ಟ ಕೆಲವು ಕಿಡಿಗೇಡಿಗಳು ಕರ್ನಾಟಕ ರಾಜ್ಯದ ವಿರುದ್ಧ ಅನೇಕ ಬಾರಿ ಅಪಮಾನ ಮಾಡುತ್ತಿರುವ ದುಷ್ಠ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಮಹೇಶ ಮುಳಗುಂದ, ಹನುಮಂತು ಕೊನಿಸಾಗರ ,ಅಶೋಕ ಬಸಾಪೂರ ,ಅಬ್ಬು ಬೆಟಗೇರಿ ,ಮಲ್ಲಿಕ ಮುಳಗುಂದ, ಹಾಲಪ್ಪ ನಾಗಣ್ಣವರ, ಸಮೀರ ಸಿದ್ದಿ ಸಚಿನ ನೀಲಪ್ಪಗೌಢರ, ಹೊನ್ನಪ್ಪ ಭಜಕ್ಕನವರ, ಮುತ್ತುರಾಜ ಪೂಜಾರ ಮತ್ತು ಅಜಯ ಬಳಗಾನೂರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ಗ್ರಾಮ ಪಂಚಾಯತಿಯ ಯುವಕರ ಗಮನಕ್ಕೆ;

ಉತ್ತರಪ್ರಭ ಸುದ್ದಿಗದಗ: 2022-23 ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದರ0ತೆ ಸ್ವಾಮಿ ವಿವೇಕಾನಂದ…

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ರಾಜ್ಯದಲ್ಲಿಂದು 20 ಕೊರೋನಾ ಪಾಸಿಟಿವ್ ಪತ್ತೆ

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 20 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ.

ಗದಗನಲ್ಲಿ ಬೆಂಕಿಗೆ ಆಹುತಿಯಾದ ಸ್ಕೂಟಿ ಪ್ಲೇಜರ್

ನಗರದ ಗಂಗಾಪೂರ ಪೇಟೆಯ ವೀರನಾರಾಯಣ ದೇವಸ್ಥಾನ ಬಳಿ ನಿಲ್ಲಿಸಿದ ಸ್ಕೂಟಿ ಪ್ಲೇಜರ್ ಆಕಸ್ಮಿಕ ಬೆಂಕಿಗೆ ಹೊತ್ತು ಉರಿಯಿತು.