ಶಿಮ್ಲಾ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನ್ನು ವಿಸ್ತರಿಸಲಾಗಿದೆ.
ಈ ಕುರಿತು ಅಲ್ಲಿನ ಸಿಎಂ ಜೈ ರಾಮ್ ಠಾಕೂರ್ ಹೇಳಿದ್ದಾರೆ. ಜೂನ್‌ 30ರವರೆಗೂ 12 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದೆ ಎಂದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 214 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 63 ಸೋಂಕಿತರು ಗುಣಮುಖರಾಗಿದ್ದರೆ, ಐದು ಜನ ಸಾವನ್ನಪ್ಪಿದ್ದಾರೆ. ಹಮ್ರೀಪುರ್‌ ಜಿಲ್ಲೆಯಲ್ಲಿ ಹಿಮಾಚಲ ಪ್ರದೇಶದ ನಾಲ್ಕನೇ ಒಂದು ಭಾಗದಷ್ಟು ಸೋಂಕಿತರು ಪತ್ತೆಯಾಗಿದ್ದಾರೆ.
ಮೇ. 31ರ ವರೆಗೆ ದೇಶವ್ಯಾಪಿ ಲಾಕ್‌ಡೌನ್‌ ಜಾರಿಯಲ್ಲಿದೆ. ಮಾ. 25 ರಿಂದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್‌ಡೌನ್‌ ಈಗಾಗಲೇ 3 ಬಾರಿ ವಿಸ್ತರಣೆಯಾಗಿದ್ದು, ಈ 31ಕ್ಕೆ ಸಂಪೂರ್ಣ ಲಾಕ್‌ಡೌನ್‌ ಅಂತ್ಯಗೊಳಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You May Also Like

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ರಾಜ್ಯದಲ್ಲಿಂದು 20 ಕೊರೋನಾ ಪಾಸಿಟಿವ್ ಪತ್ತೆ

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 20 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ.

ಕರ್ನಾಟಕದಲ್ಲಿ ಕಿಕ್ಕಿರಿಯುತ್ತಿದೆ ಸೋಂಕು!: ಇಂದು 5030 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 5030 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ಗದಗ ಜಿಪಂ ಅಧ್ಯಕ್ಷರಾಗಿ ರಾಜೂಗೌಡ ಪಾಟೀಲ್ ಅವಿರೋಧ ಆಯ್ಕೆ

ಗದಗ: ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾಗಿ ರಾಜೂಗೌಡ ಕೆಂಚನಗೌಡ್ರ (ಪಾಟೀಲ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿ.ಪಂ.…