ಬೆಂಗಳೂರು : ಸಹೋದರ ಎರಡನೇ ತಾಯಿ ಇದ್ದಂತೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ನಿರ್ದೇಶಕ ತರುಣ್ ಸುಧೀರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿರುವ ಅವರು, ಇಂದು ನಿರ್ದೇಶಕ ತರುಣ್ ಸುದೀರ್ ಅವರ ಹುಟ್ಟು ಹಬ್ಬ. ದರ್ಶನ್ ಅಷ್ಟೇ ಅಲ್ಲದೇ, ಅನೇಕ ನಟ, ನಟಿಯರು, ನಿರ್ದೇಶಕರು ಸಾಮಾಜಿ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ.

ನಟ ದರ್ಶನ್ ಟ್ವೀಟ್ ಮಾಡಿ ಸಹೋದರನಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ, ರಾಬರ್ಟ್ ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಬ್ಬ ಸಹೋದರ ಇನ್ನೊಬ್ಬ ತಾಯಿ ಇದ್ದಂತೆ. ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನ. ನಿಮ್ಮ ದಾಸ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.

ಜೊತೆಗೆ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ನಿರ್ದೇಶಕ ತರುಣ್ ಸುಧೀರ್ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ರಾಬರ್ಟ್ ಪೋಸ್ಟರ್ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ದರ್ಶನ್ ಮೂರು ಶೇಡ್ನಿಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಅವತಾರವೆತ್ತಿರುವ ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಷ್ಟೇ ಅಲ್ಲದೇ, ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಕೊರೊನಾ ಲಗ್ಗೆ ಇಡದಿದ್ದರೆ, ಸಿನಿಮಾ ಇಷ್ಟು ಹೊತ್ತಿಗೆ ರಿಲೀಸ್ ಆಗಬೇಕಿತ್ತು. ಈ ಚಿತ್ರದಲ್ಲಿ ದರ್ಶನ್ಗೆಸ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಹುಡುಗನಾಗಿ ಬದಲಾದ ಖ್ಯಾತ ನಟಿಯ ಸಿಕ್ಸ್ ಪ್ಯಾಕ್ ಫೋಟೋ ಶೇರ್.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಲಿಯಟ್, ಬಾಲ್ಯದಲ್ಲಿ ತನ್ನ ದೇಹದಲ್ಲಿನ ಬದಲಾವಣೆ ಗಮನಿಸಿದಾಗ ತುಂಬ ಹಿಂಸೆ ಆಗುತ್ತಿತ್ತು. ಹುಡುಗನ ಹಾಗೆ ವರ್ತಿಸುತ್ತಿದ್ದೆ. ಹಾಲಿವುಡ್ ನಲ್ಲಿ ಖ್ಯಾತಿ ಗಳಿಸುತ್ತಿದ್ದಂತೆ ವೈಯಕ್ತಿಕ ಜೀವನದಲ್ಲಿ ತುಂಬಾ ಅಪ್ ಸೆಟ್ ಆಗುತ್ತಿದ್ದೆ ಎಂದಿದ್ದಾರೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾಗಿದ್ದಾರೆ.

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ಮರ್ಯಾದೆಗೇಡು ಹತ್ಯೆ: ಮರ್ಡರ್ ಸಿನಿಮಾ ಪೋಸ್ಟರ್ ರಿಲೀಜ್ ಮಾಡಿದ RGV

ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ.…