ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ. ಸೆಲೆಬ್ರಿಟಿಗಳ ಸೌಂದರ್ಯ ವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ತಮ್ಮ ಬ್ರಾಂಡ್ ಗಳನ್ನು ಯೋಜಿತ ಮಾರುಕಟ್ಟೆಗೆ ಪರಿಚಯಿಸುವ ಕೆಲಸವನ್ನು ಸಲ್ಮಾನ್ ಖಾನ್ ಕೆಲವು ದಿನಗಳಿಂದ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಆರೋಗ್ಯಕರ ಜೀವನಶೈಲಿಯ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಇದಕ್ಕೂ ಮುನ್ನ ಅವರು ಯಶಸ್ವಿ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇದೀಗ FRSH ಅಡಿಯಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಮೊಟ್ಟಮೊದಲ ಉತ್ಪನ್ನವಾಗಿ ಬಿಡುಗಡೆ ಮಾಡಿದ್ದಾರೆ. ಇದು ಸದ್ಯಕ್ಕೆ ದೈನಂದಿನ ಅಗತ್ಯ ವಸ್ತುವಾಗಿ ಬದಲಾಗಿದೆ.  

FRSH ಬ್ರಾಂಡ್ ಅನ್ನು ಕಳೆದ ಕೆಲವು ವರ್ಷಗಳಿಂದ ಪರಿಣತರ ತಂಡ ರೂಪಿಸಿದೆ. ಇದೀಗ ಎಲ್ಲ ಪ್ರಯೋಗಗಳ ನಂತರ ಕೆಲವು ತಿಂಗಳುಗಳ ಅಂತರದಲ್ಲಿ ಮಾರುಕಟ್ಟೆಗೆ ಈ ಬ್ರಾಂಡ್ ಗಳು ಬಿಡುಗಡೆಯಾಗಲು ವೇದಿಕೆ ಸಿದ್ಧವಾಗಿದೆ. ಇವು ಸೌಂದರ್ಯ ವರ್ಧಕಗಳಾಗಿದ್ದು, ಕೆಲವೇ ದಿನಗಳಲ್ಲಿ ಜನರ ಕೈ ಸೇರಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ನೀಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಇದರ ಭಾಗವಾಗಿ FRSH ಕಾರ್ಯರೂಪಕ್ಕೆ ಬರುತ್ತಿದೆ. ಇದರ ಅಡಿಯಲ್ಲಿ ಮೊದಲ ಉತ್ಪನ್ನವಾಗಿ ಸ್ಯಾನಿಟೈಜರ್ಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಸ್.ಪಿ.ಬಿ. ಜನ್ಮದಿನ: ಟ್ವೀಟರ್ ನಲ್ಲಿ ಶುಭಾಶಯಗಳ ಸುರಿಮಳೆ

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40,000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿರುವ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.

ಗದಗ ಜಿಲ್ಲೆಯಲ್ಲಿಂದು 9 ಪಾಸಿಟಿವ್ ಎಲ್ಲೆಲ್ಲಿ..?

ಗದಗ: ಗದಗ ಜಿಲ್ಲೆಯಲ್ಲಿ ಮಂಗಳವಾರ ದಿ. 14 ರಂದು 9 ಜನರಿಗೆ ಕೊವಿಡ್-19 ಸೋಂಕು ದೃಢ…

ಬೆಳ್ಳಿ ತೆರೆಯ ಕಾರ್ಮಿಕರಿಗೆ ವಿಶೇಷ ಕೊಡುಗೆ!

ಬೆಳ್ಳೆ ತೆರೆಯ ಹಿಂದೆ ದುಡಿದಿರುವ ಎಲ್ಲ ಕಾರ್ಮಿಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರಾಬರ್ಟ್ ಚಿತ್ರ ತಂಡ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.

ಕೊರೊನಾ ವೈರಸ್ ತನಿಖೆಗೆ ಒಪ್ಪಿಗೆ ಸೂಚಿಸಿತೆ ಚೀನಾ?

ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆಗೆ ಚೀನಾ ಒಪ್ಪಿಕೊಂಡಿದೆಯೇ? ಎಂಬ ಪ್ರಶ್ನೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಿವೋ ಲಿಜಿಯಾನ್ ಪ್ರತಿಕ್ರಿಯಿಸಿದ್ದಾರೆ.