ಗದಗ: ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ. ಕ್ಷೇತ್ರ ವಿಂಗಡನೆಯ ನೆಪದಲ್ಲಿ ಅದೆಷ್ಟೋ ಗ್ರಾಮಗಳು ಇಂಥ ಅನ್ಯಾಯಕ್ಕೊಳಗಾಗಿವೆ. ಇರುವುದು ಒಂದು ತಾಲೂಕು. ವಿಧಾನ ಸಭಾ ಕ್ಷೇತ್ರ ಮತ್ತೊಂದು. ಇದು ಗ್ರಾಮದ ಅಭಿವೃದ್ಧಿಗೆ ಎಷ್ಟು ಪೂರಕ? ಎಂಬುದು ಸರ್ಕಾರ ಯೋಚಿಸಬೇಕಿದೆ. ಇದಕ್ಕೆ ಗದಗ ತಾಲೂಕಿನ ಎಚ್.ಎಸ್.ವೆಂಕಟಾಪೂರ ಗ್ರಾಮ ತಾಜಾ ಉದಾಹರಣೆಯಾಗಿದೆ.

ಬೆಳಹೊಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮ ಮೂಲತಃ ಕೆರೆ ನೀರು ಆಶ್ರಯಿತ ಗ್ರಾಮವಾಗಿತ್ತು. ನಂತರದ ದಿನಗಳಲ್ಲಿ ಕೊಳವೆ ಬಾವಿ ಮೂಲಕ ನೀರು ಒದಗಿಸಲಾಗುತ್ತಿದೆ. ಮುಖ್ಯವಾಗಿ 10ಕ್ಕೂ ಅಧಿಕ ವರ್ಷಗಳಿಂದ ಈ ಗ್ರಾಮಕ್ಕೆ ನೀರಿನ ಸಮಸ್ಯೆ ವಿಪರೀತವಾಗಿದೆ. ಕಳೆದ ಅವಧಿಯ ಸಿದ್ದರಾಮಯ್ಯ ಸರ್ಕಾರದ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ಮೇಲ್ಮಟ್ಟದ ಜಲಮೂಲಗಳಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಲ್ಲಿ ಈ ಗ್ರಾಮಕ್ಕೆ ತುಂಗಭದ್ರ ನೀರು ಒದಗಿಸಲಾಯಿತು. ತುಂಗಭದ್ರ ನದಿಯಿಂದ ಎಚ್.ಎಸ್.ವೆಂಕಟಾಪೂರ ಗ್ರಾಮಕ್ಕೆ ಪೈಪ್ ಲೈನ್ ಅಳವಡಿಸಲಾಯಿತು. ಇನ್ನೇನು ನಮ್ಮ ನೀರಿನ ಬವಣೆ ನೀಗಿತು ಎಂದು ಭಾವಿಸಿದ ಜನರ ನಿರೀಕ್ಷೆ ಕೆಲ ದಿನಗಳಲ್ಲಿಯೇ ಹುಡಿಯಾಯಿತು.

ತಪ್ಪಲೇ ಇಲ್ಲ ನೀರಿಗಾಗಿ ಗೋಳಾಟ..

ಈ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ನರಗುಂದ ಕ್ಷೇತ್ರದ ಆಗಿನ ಶಾಸಕ ಬಿ.ಆರ್.ಯಾವಗಲ್ ನಂತರ ಇತ್ತಿಚಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಆಗಿನ ಶಾಸಕ ಹಾಗೂ ಈಗಿನ ಸಚಿವ ಸಿ.ಸಿ.ಪಾಟೀಲ್ ಸೇರಿ ಈ ಯೋಜನೆಗೆ ಈಗಾಗಲೇ 20 ಲಕ್ಷಕ್ಕೂ ಅಧಿಕ ಅನುದಾನ ತಂದಿದ್ದಾರೆ. ಲಕ್ಷಲಕ್ಷ ಅನುದಾನ ಬಳಕೆಯಾದರೂ ಈ ಗ್ರಾಮಸ್ಥರಿಗೆ ನೀರಿನ ಭಾಗ್ಯ ದೊರೆಯಲಿಲ್ಲ. ತುಂಗಭದ್ರ ನದಿ ನೀರಿನ ಯೋಜನೆಯಿಂದ ಎರಡು ಟ್ಯಾಂಕರ್ ಗಳನ್ನು ನಿರ್ಮಿಸಲಾಗಿದೆ. ಇದರಿಂದ ಊರಿನ ಒಂದು ಭಾಗಕ್ಕೆ ಮಾತ್ರ ನೀರು ಲಭಿಸುತ್ತಿದೆ. ಇನ್ನುಳಿದ ಭಾಗಗಳಲ್ಲಿ ನಲ್ಲಿಯಲ್ಲಿ ನೀರು ಸಿಗುತ್ತಿಲ್ಲ. ಈ ಗ್ರಾಮಸ್ಥರಿಗೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಅಥವಾ ಕೆರೆ ಇವುಗಳೇ ಕುಡಿಯುವ ನೀರಿನ ಮೂಲವಾಗಿವೆ. ಇನ್ನು ನೀರಿಗಾಗಿ ಒಂದೊಂದು ಸಂದರ್ಭದಲ್ಲಿ ಐದಾರು ಕಿಲೋಮೀಟರ್ ಅಲೆದ ಉದಾಹರಣೆಗಳೂ ಇವೆ. ಆದರೆ ತುಂಗಭದ್ರ ನದಿ ನೀರಿನ ಯೋಜನೆಯಿಂದಾದರೂ ತಮ್ಮ ಬವಣೆ ನೀಗಬಹುದು ಎಂದು ಕೊಂಡರೆ ಅದರಿಂದಲೂ ಗೋಳು ತಪ್ಪಲಿಲ್ಲ. ಅಂದಾಜು 300 ಕ್ಕೂ ಹೆಚ್ಚು ಮನೆಗಳ ನಲ್ಲಿಗಳಿಗೆ ನೀರೇ ಬರುತ್ತಿಲ್ಲ. ಪಂಚಾಯತಿ ಪೈಪ್ ಲೈನ್ ಮಾಡಿ ಫಲಾನುಭವಿಗಳಿಂದ ವಂತಿಗೆ ಪಡೆದು ಮನೆಗಳಿಗೆ ನಳ ಅಳವಡಿಸಿದ್ರು ಎರಡು ವರ್ಷಗಳಿಂದ ನೀರು ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಸಾರ್ವಜನಿಕ ನಲ್ಲಿಯಲ್ಲಿ ನೀರು..

ಮನೆಗಳಿಗೆ ಅಳವಡಿಸಿರುವ ನಳಗಳಲ್ಲಿ ನೀರು ಬಾರದ ಕಾರಣ ಗ್ರಾಮ ಪಂಚಾಯತಿ ಒಂದೆರೆಡು ಕಡೆ ಸಾರ್ವಜನಿಕ ನಳ ಕೂರಿಸಿವೆ. ಈ ನಲ್ಲಿಗಳಿಂದ ಜನರು ನೀರು ಪಡೆಯಬೇಕಾಗಿದೆ. ನಳ ಬಂದರೆ ಸಾಕು ಸರತಿಯಲ್ಲಿ ನಿಂತು ಜನ ಸುಸ್ತಾಗುಂತಾಗಿದೆ. ಮನೆಗಳಿಗೆ ನಲ್ಲಿ ತೆಗೆದುಕೊಂಡ್ರು ತಮಗೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಲಿಲ್ಲ ಎಂದು ನಿತ್ಯ ಗೊಣಗುವುದು ಮಾತ್ರ ತಪ್ಪಿಲ್ಲ.

ಯೋಜನೆಯ ಅವೈಜ್ಞಾನಿಕತೆ

ತುಂಗಭದ್ರ ನದಿ ನೀರಿನಿಂದ ಅಳವಡಿಸಲಾದ ಪೈಪ್ ಲೈನ್ ಅವೈಜ್ಞಾನಿಕ ಕ್ರಮವೇ ಈ ಸಮಸ್ಯೆಗೆ ಕಾರಣವಾಗಿದೆ. ಗ್ರಾಮದಲ್ಲಿ ಅಳವಡಿಸಿದ ಪೈಪ್ ಲೈನ್ ವ್ಯವಸ್ಥೆ ನಿಸರ್ಗಕ್ಕೆ ವಿರುದ್ಧವಾಗಿದೆ. ಏರು ಪ್ರದೇಶದಲ್ಲಿ ಪೈಪ್ ಹಾಕಿರುವುದು ಕೂಡ ಈ ಮಸ್ಯೆಗೆ ಕಾರಣ. ಎರಡು ವರ್ಷದಿಂದ ಸಮಸ್ಯೆ ಅನುಭವಿಸುತ್ತಿದ್ದವೆ. ವಂತಿಗೆ ತುಂಬಿ ನಳಗಳನ್ನು ಅಳವಡಿಸಿಕೊಂಡಿದ್ದೇವೆ. ನೀರಿನ ಕರವೂ ತುಂಬುತ್ತೇವೆ. ಆದರೆ ನಮಗೆ ನೀರು ಮಾತ್ರ ಇಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಾಕಾಗಿದೆ. ನಮ್ಮ ಈ ಸಮಸ್ಯೆಗೆ ಪರಿಹಾರ ಇಲ್ಲವೇ? ಗದಗ ತಾಲೂಕು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಗ್ರಾಮ ಕಟ್ಟಕಡೆಯದಾಗಿದೆ. ಈ ಕಾರಣದಿಂದ ನಮ್ಮೂರಿನ ಮೇಲೆ ಮಲತಾಯಿ ಧೋರಣೆಯೇ? ಎಂದು ಜನ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಬೆಳಹೊಡ ಗ್ರಾಮ ಪಂಚಾಯತಿ ಪಿಡಿಓ ಉತ್ತರಪ್ರಭಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಗ್ರಾಮದ ಆಶ್ರಯ ಕಾಲೋನಿಯ ಮನೆಗಳಿಗೆ ನಳಗಳ ಮೂಲಕವೇ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ ಕೆಲವು ಮನೆಗಳಿಗೆ ಮಾತ್ರ ಸಮಸ್ಯೆಯಾಗಿದೆ. ಈ ಸಮಸ್ಯೆಯ ಕಾರಣ ಗ್ರಾಮದಲ್ಲಿ ಮೂರು ಕಡೆ ಸಾರ್ವಜನಿಕ ನಳದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಗ್ರಾಮದ ನಾಲ್ಕೈದು ಕಿಲೋಮೀಟರ್ ದೂರದವರೆಗೆ ಮೂರು ಬಾರಿ ಕೊಳವೆ ಬಾವಿ ಕೊರೆಸಲಾಗಿದೆ. ಆದರೂ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಗ್ರಾಮಸ್ಥರು ಕೂಡ ನಮಗೆ ಸಹಕಾರ ನೀಡುವ ಅವಶ್ಯಕತೆ ಇದೆ ಎಂದರು.

ಗ್ರಾಮ ಪಂಚಾಯತಿ ಪಿಡಿಓ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿರಬಹುದು ಆದರೆ ಮೇಲಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಗಂಭೀರತೆ ಅರ್ಥವಾಗುತ್ತಿಲ್ಲವೇ? ಅಥವಾ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಕ್ಷೇತ್ರದಲ್ಲಿ ಬರುವ ಎಚ್.ಎಸ್.ವೆಂಕಟಾಪೂರದ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲವೇ? ಒಂದು ವೇಳೆ ಮಾಹಿತಿ ಇದ್ದರೂ ಕಡೆಯ ಗ್ರಾಮ ಎನ್ನುವ ತಾತ್ಸಾರವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ವಿದ್ಯಾರ್ಥಿ ಆತ್ಮಹತ್ಯೆ

ಉತ್ತರಪ್ರಭ ನರೇಗಲ್:‌ ಪಟ್ಟಣದ ಹುಚ್ಚೀರೇಶ್ವರ ನಗರದ ವಿದ್ಯಾರ್ಥಿ ಕಾರ್ತಿಕ ವೀರಪ್ಪ ಹಳ್ಳಿಕೇರಿ(24) ನೇಣು ಬಿಗಿದುಕೊಂಡು ಆತ್ಮಹತ್ಯೆ…

ರಾಜಧಾನಿಯಲ್ಲಿ ಮತ್ತೆ ಇಬ್ಬರು ಗರ್ಭಿಣಿಯರಲ್ಲಿ ಕಂಡು ಬಂದ ಮಹಾಮಾರಿ!

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮತ್ತೆ ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ಕಂಡು ಬಂದಿದೆ.

ಬುಲೆಟ್ ಕೊಟ್ರ ತಾಳಿ ಕಟ್ತಿನಿ ಅಂತ ಪಟ್ಟು ಹಿಡಿದ ವರನಿಗೆ ಏನಾತು ನೋಡ್ರಿ.

ಉತ್ತರಪ್ರದೇಶ್: ಪ್ರತಿಯೊಬ್ಬ ಹೆಣ್ ಮಕ್ಕಳು ಮನ್ಯಾಗ್ ತಂದಿ-ತಾಯಿ ಸಾಲಾಸೂಲಾ ಮಾಡಿ ಮದ್ವಿ ಮಾಡಿ, ಅಳಿಯಾ ಕೇಳೋವಷ್ಟು ವರದಕ್ಷಿಣೆ ಕೊಟ್ಟು ಮಗಳನ್ ಗಂನ್ ಮನಿಗೆ ಕಳಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿ ಹೋಗುತ್ತ. ಷ್ ಅಪ್ಪಾ ಅಂತ ಮಗಳ್ ಮದ್ವಿ ಆದ್ರ ಸಾಕು ತಂದಿ-ತಾಯಿ ನಿಟ್ಟುಸಿರು ಬಿಡ್ತಾರಾ? ಆದರೆ ಇಲ್ಲೊಬ್ಬ ಹುಡುಗಿ ವರದಕ್ಷಣಿ ಅಂತ ನಂಗ್ ಬುಲೇಟ್ ಬೇಕಾಬೇಕು ಅಂತ ಪಟ್ಟು ಹಿಡಿದ ವರನಿಗೆ ತಕ್ಕ ಪಾಠಾ ಕಲಿಸ್ಯಾಳ.

ಇನ್ಮುಂದೆ ಮಾವು ಬೆಳೆದ ರೈತನೇ ಬೆಲೆ ನಿಗದಿ ಮಾಡ್ತಾನೆ

ಬೆಂಗಳೂರು: ಬೆಳೆಗಾರನೇ ಬೆಲೆ ನಿಗದಿಮಾಡುತ್ತಾನೆ. ಇತಿಹಾಸದಲ್ಲೆ ಮೊದಲಬಾರಿಗೆ ಇಂತಹ ಅವಕಾಶ ರೈತರಿಗೆ ಒದಗಿಸಲಾಗಿದೆ. ಈ ಹಿಂದೆ…