ಗದಗ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಎಷ್ಟೆ ಕಷ್ಟ ಬಂದ್ರು ಬಲ್ದೋಟ ಹುನ್ನಾರ ಫಲಿಸಲು ಬಿಡುವುದಿಲ್ಲ ಎಂದು ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಹೇಳಿದರು.
ಕಪ್ಪತ್ತಗುಡ್ಡದ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಅವರು, ಜೈವಿಕ ಸಂಪನ್ಮೂಲ ರಕ್ಷಣೆಯ ಕಾರ್ಯ ದೊಡ್ಡ ಮಟ್ಟದಲ್ಲಾಗಬೇಕಾಗಿದೆ.
ಹೀಗಾಗಿ ಇದೀಗ ಕಪ್ಪತ್ತಗುಡ್ಡಕ್ಕೆ ಆಪತ್ತು ಬರುವ ಆತಂಕ ಎದುರಾಗಿದ್ದು ತಾತ್ವಿಕ ಹಂತದೆಡೆಗೆ ಹೋಗಬೇಕಾದ್ರೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ‌.
ಸಂದರ್ಭ ಬಂದರೆ ಹೋರಾಟಕ್ಕೆ ಅಣಿಯಾಗುವ ನಿಟ್ಟಿನಲ್ಲಿ ನಾವು ಪುನಶ್ವೇತನಗೊಳ್ಳಬೇಕಿದೆ.
ಪಟ್ಟಬದ್ಧ ಹಿತಾಸಕ್ತರು ಪಕೃತಿ ಮಾತೆ ಮೇಲೆ ಮಾಡ್ತಿರೋ ಅಪರಾಧಕ್ಕೆ ತಕ್ಕ ಉತ್ತರ ನೀಡಬೇಕಿದೆ.
ಇತಿಹಾಸ ನಮಗೆ ಪಾಠ ಕಲಿಸುತ್ತದೆ. ಹೀಗಾಗಿ ಇಂದು ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಇತಿಹಾಸ ಅರಿತು ನಾವು ಮುಂದಾಗಬೇಕಿದೆ ಎಂದರು.
ಯಾವುದೇ ಸರ್ಕಾರ ಬಂದರೂ ಒತ್ತಡ ಹೇರಿ ಸಮಯ ಸಾಧನೆಗೆ ಬಲ್ದೋಟ ಮುಂದಾಗುತ್ತದೆ.
ಇದೀಗ ಮತ್ತೆ ಗಣಿಗಾರಿಕೆಗೆ ಹುನ್ನಾರ ಆರಂಭಿಸಿದೆ ಎನ್ನಲಾಗಿದ್ದು ಪ್ರಕೃತಿ ಮಾತೆಯ ಸ್ವಾತಂತ್ರ ಕಾಪಾಡಲು ಸತತ ಜಾಗೃತರಾಗಿರಬೇಕಾಗಿದೆ ಎಂದರು.

ಜನರನ್ನು ಮನೆಯಲ್ಲಿರಿಸಿ ಹುನ್ನಾರ

ಇದೇ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ,
ಜನರು ಕೊರೋನಾ ಆತಂಕದಲ್ಲಿರುವಾಗ ಜನರನ್ನು ಮನೆಯಲ್ಲಿರಿಸಿ ಕಪ್ಪತ್ತಗುಡ್ಡ ಕಬಳಿಸಲು ಬಲ್ದೋಟಾ ಮುಂದಾಗಿದೆ. ಇದಕ್ಕೆ ಸರ್ಕಾರ ಪೂರಕವಾಗಿ ವರ್ತಿಸುತ್ತಿದೆಯಾ? ಎನ್ನುವ ಸಂದೇಹ ಮೂಡಿದೆ.
ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ನಾವು ಬಿಡುವುದಿಲ್ಲ.
ಬೆಂಗಳೂರಿನಲ್ಲಿ ಸಭೆ ನಡೆದಾಗಲೇ ಇತ್ತ ಗದಗ ಜಿಲ್ಲೆಯಲ್ಲಿ ಉದ್ದೇಶಿತ ಕೈಗಾರಿಕಾ ಸ್ಥಳಕ್ಕೆ ಬಲ್ದೋಟಾ ಕಂಪನಿ ಅಧಿಕಾರಿಗಳು ಭೇಟಿ ನೀಡಲು ಕಾರಣವೇನು?
ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅನ್ಯಾಯವಾದಾಗ ಕಪ್ಪತ್ತಗುಡ್ಡದ ಹೋರಾಟದ ಪರವಾಗಿ ಬಂದವರೆ ಈಗ ಅಧಿಕಾರದಲ್ಲಿದ್ದಾರೆ. ಆದರೆ ಇದೀಗ ಅವರೆ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಅವಕಾಶ ಮಾಡಿಕೊಡುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.
ಈ ವೇಳೆ ತೋಂಟದ ಸಿದ್ಧರಾಮ ಶ್ರೀಗಳು, ಅಮರೇಶ್ ಅಂಗಡಿ, ಎಮ್.ಸಿ.ಐಲಿ, ಚಂದ್ರಕಾಂತ ಚೌವ್ಹಾಣ್, ಕರ್ಲಟ್ಟಿ, ಎನ್.ಟಿ.ಪೂಜಾರ, ದಾನಪ್ಪ ತಡಸದ, ಚಟ್ಟಿ ವಕೀಲರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಮನುಕುಲದ ಏಳಿಗೆಗಾಗಿ ಶ್ರಮಿಸಿದ ಸಂತ ಸೇವಾಲಾಲರು

ಶಿರಹಟ್ಟಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಬೆಂಗಳೂರು, ತಾಲೂಕ ಘಟಕ ಶಿರಹಟ್ಟಿ ಹಾಗೂ ಬಂಜಾರ…

ಮೋದಿ ಸರ್ಕಾರಕ್ಕೆ 2ನೇ ವರ್ಷದ ಸಂಭ್ರಮ: ಶುಭ ಕೋರಿದ ಯಡಿಯೂರಪ್ಪ

ಬೆಂಗಳೂರು: ತ್ರಿವಳಿ ತಲಾಖ್, 370ವಿಧಿ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ವೇದಿಕೆ, ಸುಧಾರಣಾ…

ಕರ್ನಾಟಕದಲ್ಲಿ ಕಿಕ್ಕಿರಿಯುತ್ತಿದೆ ಸೋಂಕು!: ಇಂದು 5030 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 5030 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ನಗರ ಸಭೆ ಚುನಾವಣೆ: 27 ಮತ್ತು 18  ನೇ ವಾರ್ಡಿನಲ್ಲಿ ಕಾಂಗ್ರೇಸ್ಗೆ ಜಯ  7 ಮತ್ತು 12 ವಾರ್ಡನಲ್ಲ ಬಿಜೆಪಿ

ನಗರ ಸಭೆ ಚುನಾವಣೆ: 27 ಮತ್ತು 18  ನೇ ವಾರ್ಡಿನಲ್ಲಿ ಕಾಂಗ್ರೇಸ್ಗೆ ಜಯ  7 ಮತ್ತು…