ಬೆಂಗಳೂರು: ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ರಾಜ್ಯದಲ್ಲಿನ 6025 ಗ್ರಾಮ ಪಂಚಾಯತಿಗಳಲ್ಲಿ ಜೂನ್ 2020ರಲ್ಲಿ ವಿವಿಧ ದಿನಾಂಕಗಳಲ್ಲಿ ಅವಧಿ ಮುಕ್ತಾಯವಾಗುತ್ತಲಿವೆ. ಆಗಸ್ಟ್ 2020ರ ಮಾಹೆಯವರೆಗೆ ಸುಮಾರು 5800 ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಲಿದೆ. ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತಿಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಮತದಾರರ ಪಟ್ಟಿಯನ್ನು ತಯಾರಿಸಲು ಸೂಚನೆಗಳನ್ನು ನೀಡಲಾಗಿತ್ತು. ಈ ಹಂತದಲ್ಲಿ ದೇಶಾದ್ಯಂತ ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಮಾಡಿದ್ದರಿಂದ, ಮತದಾರರ ಪಟ್ಟಿಯ ತಯಾರಿಕೆ ಪ್ರಕ್ರಿಯೇಯನ್ನು ಹಾಗೂ ಇತರೆ ಚುನಾವಣಾ ಸಿದ್ಧತೆಗಳನ್ನು ಸ್ಥಗಿತಗೊಳಸಲಾಯಿತು. ಅಲ್ಲದೆ ಸರ್ಕಾರವು ಇತ್ತಿಚೆಗೆ ದಿನಾಂಕ: 31-03-2020ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ಕ್ಕೆ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರಡಿಸಿದೆ.

ಹೀಗಾಗಿ ಹೊಸದಾಗಿ ಕರ್ನಾಟಕ ಪಂಚಾಯತರಾಜ್ ಅಧಿನಿಯಮಗಳು 1998 ರಂತೆ ಕ್ಷೇತ್ರಗಳ ಮೀಸಲು ಸ್ಥಾನಗಳನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡಿ ನಿಗದಿಪಡಿಸಬೇಕಾಗಿರುತ್ತದೆ. ಈ ಮದ್ಯೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಕಚೇರಿ ಅಧಿಕಾರಿ ಸಿಬ್ಬಂಧಿಗಳು ಕೋವಿಡ್19 ನಿಯಂತ್ರಣದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ.

ಪ್ರಸ್ತುತ ಮತದಾರರ ಪಟ್ಟಿಯನ್ನು ತಯಾರಿಸಿ, ಹೊಸ ತಿದ್ದುಪಡಿಯಂತೆ ಮೀಸಲಾತಿ ನಿಗದಿಪಡಿಸಿ, ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವದರಿಂದ ಕೋವಿಡ್19 ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಮರು ಇ-ಮೇಲ್ ನಲ್ಲಿ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

7 comments
  1. ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲಿ ಘೋಷಣೆ ಮಾಡಿ ಗ್ರಾಮ ಪಂಚಾಯಿತಿ ಚುನಾವಣೆ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಮಾತ್ರ ಮತಗಳನ್ನು ಚಲಾಯಿಸಿ ಎಂದು ಹೇಳಬೇಕು ಮತದಾರರಿಗೆ ಮನೆಮನೆಗೆ ತೆರಳಿ ಹೇಳಬೇಕು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಒಂದು ದಿನ ಮಾತ್ರ ಪ್ರಚಾರ ಮಾಡಬೇಕೆಂದು ಷರತ್ತುಗಳನ್ನು ಹಾಕಿ

  2. ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಈಗಿರುವ ಸದಸ್ಯರನ್ನು ಮುಂದು ವರಸಿದರೆ ಭಾರೀ ಭ್ರಷ್ಟಾಚಾರ ನಡೆಯಲು ದಾರಿ ಮಾಡಿಕೊಟ್ಟಂತೆ. ಈಗ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದರೆ, ಆಡಳಿತಾಧಿಕಾರಿ ನೇಮಕ ಮಾಡಲಿ..

  3. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೊಗ ವತಿಯಿಂದ ತೊಗೊಂಡುತಿರುವ ನಿರ್ಣಯಕ್ಕೆ ನನ್ನ ಒಂದು ಸಲಹೆ ಅಭ್ಯರ್ಥಿಗಳ ಕನಿಷ್ಠ ಶಿಕ್ಷಣವನ್ನು ಜಾರಿಗೆ ಗೊಳಿಸಬೆಕು

  4. ಚುನಾವಣಿ ನಡಸಿ ಇಲ್ಲದಿದ್ದರೆ ಆಡಳಿತಾಧಿಕಾರಿ ನೇಮಿಸಿ ಅತವಾ 14 ಹಣಕಾಸು ವಾಪಸ್ಸು ತೆಗೆದುಕೊಂಡರೆ ಚುನಾವಣೆ ನಡೆಸಲು ನಿಮಗೆ ಎಷ್ಟು ಹಣ ಬೇಕು ಅಷ್ಟು ಹಣ ಇದೆ

  5. For all the Village panchayaths, appoint the Administration official immediately. So the development works of the village will continue and the common people will be benefited.

  6. ಈರಯ್ಯ ಮ ಪಾಟೀಲ ಸದಸ್ಯರು ಗ್ರಾ ಪಂ ಕಡಕೋಳ, ತಾ/ಶಿರಹಟಿ, ಜಿ/ಗದಗ says:

    ಚುಣಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕನಿಷ್ಟ ಮಾಧ್ಯಮಿಕ ಶಿಕ್ಷಣವನ್ನು ಹೊಂದಿರಬೇಕು ಎಂಬ ನಿಯಮವನ್ನು ಜಾರಿಗೆ ತರಬೇಕು ಅಧ್ಯಕ್ಷರಾಗಲು ಕನಿಷ್ಠ s s l c ಪಾಸ್ ಆಗಿರಬೇಕು ಎಂದು ಕಡ್ಡಾಯವಾದ ನಿಯಮಗಳನ್ನು ಜಾರಿಗೆ ತರಬೇಕು ಚುನಾವಣೆ ನಡೆಸುವ ವರೆಗೆ ಆಡಳಿತ ಅಧಿಕಾರಗಳನ್ನು ನೇಮಕ ಮಾಡಿ ನಾಮನಿರ್ದೇಶನ ಮಂಡಳಿಯನ್ನು ರಚಿಸ ಬಾರದು

Leave a Reply

Your email address will not be published. Required fields are marked *

You May Also Like

ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಡಿಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಶಿರಹಟ್ಟಿ ತಹಶೀಲ್ದಾರ್..!

ಈಗಾಗಲೇ ನಿಮ್ಮ ಉತ್ತರಪ್ರಭ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡಗಳ ಕುರಿತು ಹಾಗೂ ಅಧಿಕಾರಿಗಳ ನಡೆ ಕುರಿತು 6 ಸರಣಿ ಲೇಖನವನ್ನು ಪ್ರಕಟಿಸಿದೆ.

ಮಡದಿ ಮಾಂಗಲ್ಯ ಸರ ಮಾರಿ ಕುಡಿದ ಆತ ಮಾಡಿದ್ದೇನು?

ಚಿಕ್ಕಬಳ್ಳಾಪುರ: ಕುಡಿದ ಮತ್ತಿನಲ್ಲಿದ್ದ ಪಾಪಿ ಪತಿಯೊಬ್ಬ ಮಡದಿಯನ್ನೇ ಕೊಲೆ ಮಾಡಿರುವ ಘಟನೆ ಚೇಳೂರು ಪೊಲೀಸ್‌ ಠಾಣೆ…

ಮಾಜಿ ಪಿಎಂ ದೇವೇಗೌಡರಿಗೆ ಪ್ರಶಂಸಾ ಪತ್ರ ಕಳುಹಿಸಿದ ಹಾಲಿ ಪಿಎಂ

ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಪಿಎಂ ಕೇರ್ ಹಾಗೂ ಕರ್ನಾಟಕ, ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇವೇಗೌಡ ಅವರನ್ನು ಪ್ರಶಂಶಿಸಿ ಪತ್ರ ಬರೆದಿದ್ದಾರೆ.

ಇಂದು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿರುವ ಸಿಎಂ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.