ಗ್ರಾಮ ಪಂಚಾಯತಿ ಚುನಾವಣೆ: ಅಭಿಪ್ರಾಯ ಸಲ್ಲಿಕೆಗೆ ಚುನಾವಣಾ ಆಯೋಗ ನಿರ್ದೇಶನ

ಬೆಂಗಳೂರು: ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ರಾಜ್ಯದಲ್ಲಿನ 6025 ಗ್ರಾಮ ಪಂಚಾಯತಿಗಳಲ್ಲಿ ಜೂನ್ 2020ರಲ್ಲಿ ವಿವಿಧ ದಿನಾಂಕಗಳಲ್ಲಿ ಅವಧಿ ಮುಕ್ತಾಯವಾಗುತ್ತಲಿವೆ. ಆಗಸ್ಟ್ 2020ರ ಮಾಹೆಯವರೆಗೆ ಸುಮಾರು 5800 ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಲಿದೆ. ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತಿಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಮತದಾರರ ಪಟ್ಟಿಯನ್ನು ತಯಾರಿಸಲು ಸೂಚನೆಗಳನ್ನು ನೀಡಲಾಗಿತ್ತು. ಈ ಹಂತದಲ್ಲಿ ದೇಶಾದ್ಯಂತ ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಮಾಡಿದ್ದರಿಂದ, ಮತದಾರರ ಪಟ್ಟಿಯ ತಯಾರಿಕೆ ಪ್ರಕ್ರಿಯೇಯನ್ನು ಹಾಗೂ ಇತರೆ ಚುನಾವಣಾ ಸಿದ್ಧತೆಗಳನ್ನು ಸ್ಥಗಿತಗೊಳಸಲಾಯಿತು. ಅಲ್ಲದೆ ಸರ್ಕಾರವು ಇತ್ತಿಚೆಗೆ ದಿನಾಂಕ: 31-03-2020ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ಕ್ಕೆ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರಡಿಸಿದೆ.

ಹೀಗಾಗಿ ಹೊಸದಾಗಿ ಕರ್ನಾಟಕ ಪಂಚಾಯತರಾಜ್ ಅಧಿನಿಯಮಗಳು 1998 ರಂತೆ ಕ್ಷೇತ್ರಗಳ ಮೀಸಲು ಸ್ಥಾನಗಳನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡಿ ನಿಗದಿಪಡಿಸಬೇಕಾಗಿರುತ್ತದೆ. ಈ ಮದ್ಯೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಕಚೇರಿ ಅಧಿಕಾರಿ ಸಿಬ್ಬಂಧಿಗಳು ಕೋವಿಡ್19 ನಿಯಂತ್ರಣದ ಕಾರ್ಯದಲ್ಲಿ ತೊಡಗಿಕೊಂಡಿರುವುದು ಆಯೋಗದ ಗಮನಕ್ಕೆ ಬಂದಿರುತ್ತದೆ.

ಪ್ರಸ್ತುತ ಮತದಾರರ ಪಟ್ಟಿಯನ್ನು ತಯಾರಿಸಿ, ಹೊಸ ತಿದ್ದುಪಡಿಯಂತೆ ಮೀಸಲಾತಿ ನಿಗದಿಪಡಿಸಿ, ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವದರಿಂದ ಕೋವಿಡ್19 ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಮರು ಇ-ಮೇಲ್ ನಲ್ಲಿ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

Exit mobile version