ಉಡುಪಿ: ಉಡುಪಿ ಜನರಿಗೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್ನಿಲ್ಲಿ ಇರುವವರಲ್ಲಿ ಹೆಚ್ಚು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇಂದು ಕೂಡ ಬರೋಬ್ಬರಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಬಂದ 21 ಜನರಿಗೆ ಇಂದು ಒಂದೇ ದಿನ ಕೊರೊನಾ ದೃಢಪಟ್ಟಿದೆ. ತೆಲಂಗಾಣದಿಂದ ಬಂದ ಮೂವರಿಗೆ, ಕೇರಳದಿಂದ ಬಂದು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರಿಗೆ ಸೋಂಕು ಇರುವುದು ಸಾಬೀತಾಗಿದೆ. ಇಂದು ಪಾಸಿಟಿವ್ ಬಂದ ಪ್ರಕರಣಗಳ ಪೈಕಿ 15 ಮಕ್ಕಳಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕಿತರೆಲ್ಲ ಮಹಾರಾಷ್ಟ್ರದ ವಿವಿಧ ಭಾಗದವರೇ ಆಗಿದ್ದಾರೆ. ಜಿಲ್ಲೆಯಿಂದ 987 ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೇವಲ 199 ವರದಿಗಳು ಮಾತ್ರ ಜಿಲ್ಲಾಡಳಿತದ ಕೈ ಸೇರಿದೆ. ದುಬೈ ಮತ್ತು ಮಸ್ಕತ್ ನಿಂದ ವಾಪಾಸ್ಸಾದವರ ವರದಿ ಬರಲಿದ್ದು ಈಗಲೇ ಭಯ ಶುರುವಾಗಿದೆ. ಹೀಗಾಗಿ ಸುಮಾರು 700 ಜನರ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಆತಂಕ ಮನೆ ಮಾಡಿದೆ.

ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ 33 ಜನ ಮುಂಬೈನಿಂದ ಬಂದವರು, ದುಬೈ ಮತ್ತು ಯುಎಇಯಿಂದ ಬಂದ 8, ಕೇರಳದಿಂದ ಬಂದ ಇಬ್ಬರು, ತೆಲಂಗಾಣದಿಂದ ಬಂದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ಅಮೇರಿಕಾದಲ್ಲಾದ ಹಾನಿಯನ್ನು ಚೀನಾ ದೇಶವೇ ತುಂಬಿಕೊಲಿ:ಟ್ರಂಪ್ ಆಗ್ರಹ..!

ಚೀನಾದ ನಿಷ್ಕಾಳಜಿಯೇ ಕೊರೋನಾ ಸೋಂಕು ವ್ಯಾಪಕವಾಗಲು ಕಾರಣ ಹೀಗಾಗಿ ನಮಗೆ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಚೀನಾ ದೇಶವನ್ನು ಆಗ್ರಹಿಸುತ್ತೇನೆ ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಸಮಾಧಾನ ಹೊರಹಾಕಿದರು.

ಗದಗ ಜಿಲ್ಲೆಗೆ ಶೇ.40 ರಷ್ಟು ಮಳೆಯ ಕೊರತೆ!: ಬಿತ್ತನೆಯಾಗಿದ್ದು ಶೇ.47 ರಷ್ಟು ಮಾತ್ರ!

ಗದಗ: ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಉತ್ತಮ ಮಳೆಯಾಗಿದ್ದು ಇನ್ನು ಕೆಲವು ಭಾಗದಲ್ಲಿ ಮಳೆಯ ದರ್ಶನವಾಗಿಲ್ಲ. ಮಳೆ…

ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ

ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಡಿಪಿಇಪಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮವನ್ನು ಶಾಲೆಯ ಪ್ರಧಾನ ಶಿಕ್ಷಕ ಎಂ.ಟಿ.ಕಟ್ಟಿಮನಿ ಸಸಿಗಳಿಗೆ ನೀರು ಹಾಕುವ ಮೂಲಕ ಆಚರಿಸಲಾಯಿತು.

ನಾಳೆ ರಾಜ್ಯ ಬಂದ್ ಏನಿರುತ್ತೆ..? ಏನಿರಲ್ಲ..?

ಮಾರಾಟ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕೆಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಇದರೊಂದಿಗೆ ಖಾಸಗಿ ಬಸ್, ಪ್ರಯಾಣಿಕರ ವಾಹನಗಳು, ಸರ್ಕಾರಿ ಕಚೇರಿ, ಮೆಟ್ರೋ ಸೇವೆ, ಆಸ್ಪತ್ರೆ ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ರೈಲು ಸಂಚಾರ, ಹೋಟೆಲ್, ಹಣ್ಣು ತರಕಾರಿ ವ್ಯಾಪಾರ ಮೊದಲಾದವು ಇರುತ್ತವೆ.