ವಾಷಿಂಗ್‌ಟನ್‌: ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿಂದು ಚೀನಾ ವಿರುದ್ಧ ಅಮೇರಿಕಾ ಅಧ್ಯಕ್ಷ ಡೀನಾಲ್ಡ್ ಟ್ರಂಪ್ ಹರಿಹಾಯ್ದರು. ಕೊರೋನಾ ವೈರಸ್ ಇಷ್ಟೊಂದು ವ್ಯಾಪಕವಾಗಿ ಹರಡುವ ಮುನ್ನವೇ ಅದನ್ನು ನಿಯಂತ್ರಿಸಬಹುದಿತ್ತು. ಚೀನಾದ ನಿಷ್ಕಾಳಜಿಯೇ ಕೊರೋನಾ ಸೋಂಕು ವ್ಯಾಪಕವಾಗಲು ಕಾರಣ ಹೀಗಾಗಿ ನಮಗೆ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಚೀನಾ ದೇಶವನ್ನು ಆಗ್ರಹಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.

ವಿಶ್ವದ ದೊಡ್ಡಣ್ಣ ಖ್ಯಾತಿ ಪಡೆದ ಅಮೇರಿಕಾದಲ್ಲೂ ಸಹ ಕೊರೋನಾ ತನ್ನ ಅಟ್ಟಹಾಸ ಮೆರೆದಿದೆ. ಅಮೆರಿಕದಲ್ಲಿ ಇದುವರೆಗೂ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 55000 ಸಂಖ್ಯೆ ತಲುಪಿದೆ. ಇದರಿಂದಾಗಿ ಜಗತ್ತಿನಲ್ಲಿಯೇ ಕೊರೊನಾದಿಂದ ಅಮೇರಿಕಾ ಹೆಚ್ಚು ಸಮಸ್ಯೆ ಎದುರಿಸುವಂತಾಗಿದೆ. ಇದರ ಪರಿಣಾಮ ಆರ್ಥಿಕತೆಯ ಮೇಲೂ ಬಿದ್ದಿದೆ. ಇದರಿಂದಾಗಿ ಈ ನಿರ್ಧಾರ ಪ್ರಕಟಿಸಿದ ಟ್ರಂಪ್ ಅಮೇರಿಕಾದಲ್ಲಾದ ಹಾನಿಯನ್ನು ಅಂತಿಮಗೊಳಿಸಿಲ್ಲ. ಆದರೆ ಜರ್ಮನ್ ಗಿಂತ ಹೆಚ್ಚಿನ ಹಾನಿಯಾಗಿದ್ದು, ಅದಕ್ಕಿಂತ ಹೆಚ್ಚಿನ ಪರಿಹಾರ ಕೇಳಲಿದ್ದೇವೆ ಎಂದರು.

ಇತ್ತಿಚೆಗಷ್ಟೆ ಕೊರೋನಾ ಸೋಂಕಿನಿಂದ ಜರ್ನನ್ ದೇಶಕ್ಕೆ ಆಗಿರುವ ಹಾನಿಗಾಗಿ 165 ಬಿಲಿಯನ್ ಡಾಲರ್ ಪರಿಹಾರ ನೀಡುವಂತೆ ಜರ್ಮನ್ ದೇಶ, ಚೀನಾವನ್ನು ಆಗ್ರಹಿಸಿತ್ತು. ಇದರ ಬೆನ್ನಲ್ಲೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಕೂಡ ಅಮೇರಿಕಾದಲ್ಲಾದ ಹಾನಿಯನ್ನು ಚೀನಾ ತುಂಬಿಕೊಡಬೇಕು ಎಂದು ನೀಡಿದ ಹೇಳಿಕೆ ಮಹತ್ವ ಬಂದಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆಯತ್ತ ಎಚ್.ವಿಶ್ವನಾಥ್ ಚಿತ್ತ..?

ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ

ಶಿಕ್ಷಕರಿಗೂ ಬೇಕು ವರ್ಕ್ ಪ್ರಮ್ ಹೋಮ್

ಬೆಂಗಳೂರು: ಈಗಾಗಲೇ ದಿನದಿಂದ ದಿನಕ್ಕೆ ದೇಶದಲ್ಲಷ್ಟೆ ಅಲ್ಲದೇ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.…

24 ಗಂಟೆಗಳಲ್ಲಿ ರಾಜ್ಯದಲ್ಲಿ 37 ಕೋವಿಡ್ ಪಾಸಿಟಿವ್

ಮೇ 03 ಸಂಜೆ 5 ರಿಂದ ಮೇ 04 ಸಂಜೆ 5ರ ವರೆಗೆ 37 ಹೊಸ ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ.

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.