ಕೋಲಾರ: ರೈತ ಹೋರಾಟಗಾರರನ್ನು ರಾಸ್ಕಲ್ ಎಂದು ಜರಿದ ಸಚಿವ ಮಾಧುಸ್ವಾಮಿ ಅವರ ವರ್ತನೆ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ರೈತ ಸಂಘಟನೆ ಮಹಿಳಾ ಕಾರ್ಯಕರ್ತರಿಗೆ ಅವಮಾನವಾಗಿದೆ ಎಂಬ ಅಸಮಾಧಾನ ಕೇಳಿ ಬಂದಿದೆ. ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ.

ಕೆರೆಕಟ್ಟೆ ಒಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಬಂದ ವೇಳೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ನಾನು ಭಾರಿ ಕೆಟ್ಟ ಮನುಷ್ಯ ಬಾಯಿ ಮುಚ್ಚು ರಾಸ್ಕಲ್ ಎಂದು ಆವಾಜ್ ಹಾಕಿದ್ದಾರೆ. ಸಚಿವರ ಈ ಘರ್ಜನೆಗೆ ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾಧ್ಯಕ್ಷೆ ನಳಿನಿ ವಿರೋಧ ಪಡಿಸಿದರಾದರೂ ಮಧ್ಯ ಪ್ರವೇಶ ರೈತ ಸಂಘಟನೆ ಕಾರ್ಯಕರ್ತೆಯನ್ನು ಪೊಲೀಸರು ಹೊರಗಡೆ ಕಳುಹಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜಿಪಂ, ತಾಪಂ ಸೇರಿ ರಾಜ್ಯದಲ್ಲಿ ಎಲ್ಲ ಚುನಾವಣೆ ಮುಂದೂಡಿಕೆ

ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ರಾಜ್ಯ ಸರ್ಕಾರ ಸೋಮವಾರ ನಡೆದ ಸಂಪುಟ ಸಭೆಯಲ್ಲಿ 14 ದಿನಗಳ ಕಾಲ ಜನತಾ ಕರ್ಪ್ಯೂಗೆ ನಿರ್ಧರಿಸಿದೆ.

ದಾರಾವಾಹಿ ಶೂಟಿಂಗ್ ಗೆ ಸರ್ಕಾರದ ಅನುಮತಿ

ಲಾಕ್ ಡೌನ್ ಬಿಸಿ ದಾರಾವಾಹಿಗಳಿಗೂ ತಟ್ಟಿದ್ದರಿಂದ ಶೂಟಿಂಗ್ ಗೆ ಅವಕಾಶವಿರಲಿಲ್ಲ. ಇದರಿಂದಾಗಿ ಮನೆಮಂದಿಯಲ್ಲಿ ಮನೆ ಹಿಡಿದ ಮೇಲೆ ಮಹಿಳೆಯರಿಗೆ ತುಸು ಕೆಲಸದ ಹೊರೆ ಜಾಸ್ತಿಯಾಗಿತ್ತು. ಈ ಕಾರಣದಿಂದ ದಾರಾವಾಹಿಗಳನ್ನು ಬಹುತೇಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದಾರಾವಾಹಿ ಒಳಾಂಗಣ ಚಿತ್ರಿಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ವಾರಾಂತ್ಯ ಕಪ್ಯೂ೯ಗೆ ಉತ್ತಮ ಸ್ಪಂದನೆ : ನಿಡಗುಂದಿ ಸ್ತಬ್ಧ- ಆಲಮಟ್ಟಿ ಗಾಡ್೯ನಗಳು ಬೀಕೋ

ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ…

ಹೆಚ್ಚಿದ ಕೊರೊನಾ ಆತಂಕ – ವಿದ್ಯಾಗಮಕ್ಕೆ

ಬೆಂಗಳೂರು : ಹಲವು ತೊಂದರೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯಾಗಮಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ.