ಕೋಲಾರ: ರೈತ ಹೋರಾಟಗಾರರನ್ನು ರಾಸ್ಕಲ್ ಎಂದು ಜರಿದ ಸಚಿವ ಮಾಧುಸ್ವಾಮಿ ಅವರ ವರ್ತನೆ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ರೈತ ಸಂಘಟನೆ ಮಹಿಳಾ ಕಾರ್ಯಕರ್ತರಿಗೆ ಅವಮಾನವಾಗಿದೆ ಎಂಬ ಅಸಮಾಧಾನ ಕೇಳಿ ಬಂದಿದೆ. ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ.

ಕೆರೆಕಟ್ಟೆ ಒಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಬಂದ ವೇಳೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ನಾನು ಭಾರಿ ಕೆಟ್ಟ ಮನುಷ್ಯ ಬಾಯಿ ಮುಚ್ಚು ರಾಸ್ಕಲ್ ಎಂದು ಆವಾಜ್ ಹಾಕಿದ್ದಾರೆ. ಸಚಿವರ ಈ ಘರ್ಜನೆಗೆ ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾಧ್ಯಕ್ಷೆ ನಳಿನಿ ವಿರೋಧ ಪಡಿಸಿದರಾದರೂ ಮಧ್ಯ ಪ್ರವೇಶ ರೈತ ಸಂಘಟನೆ ಕಾರ್ಯಕರ್ತೆಯನ್ನು ಪೊಲೀಸರು ಹೊರಗಡೆ ಕಳುಹಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಶಾಂತಿಯಿಂದ ಹೋಳಿ ಆಚರಿಸಿ

ಯಾರಿಗೂ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು. ಹಬ್ಬದ ನೆಪದಲ್ಲಿ, ಸಾವರ್ಜನಿಕ ಸ್ಥಳಗಳಲ್ಲಿ ಅಶ್ಲೀಲ ಬರಹಗಳನ್ನು ಬರೆಯುವುದು, ಶಾಲಾ ಕಾಲೇಜುಗಳ ಗೋಡೆಗಳಿಗೆ ಬಣ್ಣ ಎರೆಚುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದರೆ ಅಂತಹವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು.

ಶಾಲೆ ತೆರೆಯದಂತೆ ಪೋಷಕರು, ಶಿಕ್ಷಕರ ಒತ್ತಾಯ!

ದೆಹಲಿಯಲ್ಲಿ ಕೊರೊನಾ ಆತಂಕ ಮೂಡಿಸಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳನ್ನೇ ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ: ಸಚಿವ ಶೆಟ್ಟರ್

ವಿಧಾನ ಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಲು ಎರಡು ಕಡೆ ಬಹುಮತ ಅಗತ್ಯ. ಪರಿಷತ್‌ನ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.