ಗದಗ: ಬಣವಿಗೆ ಸಿಡಿಲು ಬಡಿದ ಪರಿಣಾಮ ಮೂರು ಬಣವಿಗಳು ಸಂಪೂರ್ಣ ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಯಲ್ಲಪ್ಪ ತಳವಾರ ಅವರಿಗೆ ಸೇರಿದ ಬಣವಿ ಸಿಡಿಲಿಗೆ ಆಹುತಿಯಾಗಿವೆ. ಶೇಂಗಾ,ಬತ್ತ,ಜೋಳದ ಮೂರು ಬಣವಿಗಳು ಅಂದಾಜು 80,000 ಮೌಲ್ಯದ್ದಾಗಿವೆ. ದನಕರುಗಳಿಗಾಗಿ ತನ್ನ ಜಮೀನಿನಲ್ಲಿ ಸಂಗ್ರಹಿಸಿಟ್ಟ ಮೇವಿನ ಬಣವಿಗೆ ಬೆಂಕಿ ಬಿದ್ದದ್ದು ರೈತನನ್ನು ಸಂಕಷ್ಟಕ್ಕೀಡು ಮಾಡಿದೆ. ವರ್ಷ ಪೂರ್ತಿ ದನಕರುಗಳಿಗೆ ಏನು ಮಾಡಬೇಕು. ಬರದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿ ಮೇವು ಖರೀದಿ ಕೂಡ ರೈತನಿಗೆ ಅಸಾಧ್ಯವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಗಾದ ಹಾನಿಗೆ ಪರಿಹಾರ ನೀಡಲು ರೈತ ಯಲ್ಲಪ್ಪ ತಳವಾರ ಒತ್ತಾಯಿಸಿದ್ದಾರೆ.

1 comment
  1. ನಿಮ್ಮ ಎಲ್ಲಾ ಸುದ್ದಿಗಳೂ ಉತ್ತಮವಾಗಿ ಪ್ರಸಾರವಾಗುತ್ತಿವೆ ಸರ್…. ಹೀಗೇ ಸಾಗಲಿ….
    ಇನ್ನಷ್ಟು ಸಾಧಿಸಲಿ…..
    ಶುಭವಾಗಲಿ….

Leave a Reply

Your email address will not be published. Required fields are marked *

You May Also Like

ಭಾರತ ಸ್ಕೌಟ್ಸ್ ಮತ್ತು ಗೈಡ್

ಉತ್ತರಪ್ರಭ ಸುದ್ದಿ ಗದಗ: ಮಾನ್ಯ ಶ್ರೀ ಪಿ ಜಿ ಆರ್ ಸಿಂದ್ಯಾ, ಮುಖ್ಯ ಆಯುಕ್ತರು ಭಾರತ…

ಜೈಲಿನ ಸಿಬ್ಬಂದಿಗೂ ಅಂಟಿಕೊಂಡ ಕೊರೊನಾ!

ನವದೆಹಲಿ: ಇಲ್ಲಿಯ ರೋಹಿಣಿ ಜೈಲಿನ ಕೈದಿಯಲ್ಲಿ ಮತ್ತೆ ಕೊರೊನಾ ಸೋಂಕು ಕಂಡು ಬಂದಿದೆ. ಒಬ್ಬ ವ್ಯಕ್ತಿಯಲ್ಲಿ…

ಸ್ವರಾಜ್ಯಕ್ಕೆ ಮುಕ್ಕಾಲು ನೂರು: 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ ‘ಕನ್ನಡ ತೇರು’ ಕಾರ್ಯಕ್ರಮ

ಉತ್ತರಪ್ರಭಗದಗ: ಯುವ ಬ್ರಿಗೆಡ್ ಕರ್ನಾಟಕ ಹಾಗೂ ಗದಗ ತಂಡದ ಸಹಯೋಗದೊಂದಿಗೆ 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ…

ರೋಣ ಮತಕ್ಷೆತ್ರದ ಒಂದನೆ ಸುತ್ತಿನ ಅಂಚೆ ಮತ ಎಣಿಕೆ…!

ಉತ್ತರಪ್ರಭ ಸುದ್ದಿ ಗದಗ:ಇಂದು ವಿಧಾನಸಭಾ ಚುನಾವಣೆಯ ಮತ ಎಣಕೆ ಶುರುವಾಗಿದ್ದು, ರೋಣ ಮತಕ್ಷೇತ್ರದ ಮೊದಲನೆ ಸುತ್ತು…