ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್ ಸಂಚಾರ ಆರಂಭವಾಗುವ ಸಾದ್ಯತೆ ಇದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ.
ಕೆಎಸ್ ಆರ್ ಟಿಸಿ, ಎನ್ ಡಬ್ಲುಕೆಎಸ್‍ ಆರ್ ಟಿಸಿ ಹಾಗೂ ಈಶಾನ್ಯ ಸಾರಿಗೆಯ ಜೊತೆಗೆ ಬಿಎಂಟಿಸಿ ಬಸ್‍ ಗಳು ನಾಳೆಯಿಂದಲೇ ಕಾರ್ಯಾರಂಭ ವಾಗಬಹುದು ಎನ್ನಲಾಗಿದೆ. ಆದರೆ ಕೊರೋನಾ ಸೋಂಕಿನ ಕಾರಣ ಕೆಲವು ನಿಯಮಗಳನ್ನು ರೂಪಿಸಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಈ ಕುರಿತು ನಿಗಮಗಳು ಮಾರ್ಗೂಸೂಚಿಗಳನ್ನು ಸಿದ್ಧಪಡಿಸಿಕೊಂಡಿವೆ.

ಕೆಲವು ನಿಯಮಗಳು

  • ಒಂದು ಬಸ್‍ ನಲ್ಲಿ 20 ಜನರಿಗೆ ಮಾತ್ರ ಅವಕಾಶ.
  • ತ್ರಿಬಲ್‍ ಸೀಟ್‍ ನಲ್ಲಿ ಇಬ್ಬರಿಗೆ ಹಾಗೂ ಡಬಲ್ ಸೀಟ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ
  • ಬಸ್‍ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ.
  • ಅನಾರೋಗ್ಯ ಪೀಡಿತರಾಗಿದ್ದರೆ ಅಂತಹವರಿಗೆ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.
  • ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ ಹಾಗೂ ಇಳಿಸುವಂತಿಲ್ಲ.
  • ನಿಗಧಿತ ನಿಲ್ದಾಣಗಳಲ್ಲಿ ಮಾತ್ರ ಬಸ್ ಗಳನ್ನು ನಿಲ್ಲಿಸುವಂತಹದ್ದು.
  • ಕಡ್ಡಾಯವಾಗಿ ಮಾಸ್ಕ್ ಹಾಗೂ ಗ್ಲೊಸ್ ಗಳನ್ನು ಬಳಸಲು ಸೂಚನೆ
  • ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆದ್ಯತೆ. ಹಾಗೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ.
1 comment
Leave a Reply

Your email address will not be published. Required fields are marked *

You May Also Like

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

1xChoice Официальный Сайт Регистрация И Вход В Личный Кабинет 1хбет

1xBet Вход Вход В 1хбет На Официальный Сайт Через Актуальное Зеркало Под…

ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಜ್ವರದಿಂದ ಬಳಲುತ್ತಿದ್ದಾರೆ ಸಿದ್ದರಾಮಯ್ಯ: ಎರಡು ದಿನದ ಕಾರ್ಯಕ್ರಮಗಳು ರದ್ದು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಅವರು ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿ ಇರಲಿದ್ದಾರೆ.