ಗದಗ: ಜಿಲ್ಲೆಯಲ್ಲಿ ಮತ್ತೆ ಐದು ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಎರಡು ಕೇಸ್ ಕಂಟೈನಮೆಂಟ್ ಝೂನ್ ಹಾಗೂ ಎರಡು ಕೇಸ್ ಪಿ-913 ಸಂಪರ್ಕ ಹಾಗೂ ಇನ್ನೊಂದು ತಮಿಳುನಾಡಿನ ಚೆನೈ ಪ್ರವಾಸದಿಂದ ಸೊಂಕು ತಗುಲಿದೆ.
ತಮಿಳುನಾಡಿನ ಚೆನೈ ಪ್ರವಾಸದಿಂದ 30 ವರ್ಷದ ಪಿ- 1178 ಸೊಂಕು ತಗುಲಿದೆ.
ಗದಗ ಗಂಜಿ ಬಸವೇಶ್ವರ ಕಂಟೈನಮೆಂಟ್ ಝೂನ್ ಪ್ರದೇಶದ ನಿವಾಸಿಗಾಳಾದ, 32 ವರ್ಷದ ಪಿ-1181 ಹಾಗೂ 12 ವರ್ಷದ ಬಾಲಕ
ಪಿ-1182 ಸೊಂಕು ದೃಢಪಟ್ಟಿದೆ.
65 ವರ್ಷದ ಪಿ- 913 ಸಂಪರ್ಕದಿಂದ 33 ವರ್ಷದ ಪಿ-1179 ಹಾಗೂ 58 ವರ್ಷದ ಪಿ-1180 ವ್ಯಕ್ತಿಗಳಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಮುಖ್ಯವಾಗಿ ಗದಗ ನಗರದಲ್ಲಿ ಮಾತ್ರ ಈವರೆಗೆ ಕಂಡು ಬಂದ ಸೊಂಕು ಇದೀಗ ತಾಲೂಕು ಕೇಂದ್ರಗಳಿಗೂ ವ್ಯಾಪಿಸಿದ್ದು ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17 ಕ್ಕೆ ಏರಿಕೆಯಾದಂತಾಗಿದೆ.