ದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಲಾಕ್ ಡೌನ್ ಕಾರಣದಿಂದ ದೇಶದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದರು.

ಈ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ, 1 ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ 80 ಕೋಟಿ ಕುಟುಂಬಗಳಿಗೆ ಜನರಿಗೆ ಇದರ ಲಾಭವಾಗಲಿದೆ ಎಂದರು.

ಕೊರೋನಾ ಸೋಂಕನ್ನು ಜನ ಹಗುರಾಗಿ ಪರಿಗಣಿಸಬಾರದು. ಅನ್ಲಾಕ್ ಘೋಷಣೆಯ ನಂತರ ಜನ ವೈಯಕ್ತಿಕವಾಗಿ ನಿರ್ಲಕ್ಷ್ಯದಿಂದಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.

ಲಾಕ್‌ಡೌನ್‌ ಪರಿಣಾಮಗಳನ್ನು ಜನ ಎದುರಿಸುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಇರುತ್ತದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ವಿರಾಮ ಇರುತ್ತದೆ ಎಂದರು.

ಅಲ್ಲದೇ, ಜುಲೈ 15ಕ್ಕೆ ಗುರುಪೂರ್ಣಿಮೆ, ನಂತರ ಶ್ರಾವಣ, ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15, ರಾಖಿ ಹಬ್ಬ, ದಸರಾ ದೀಪಾವಳಿಯಂತಹ ಹಬ್ಬಗಳು ಸಾಲಾಗಿ ಬರುತ್ತಿವೆ. ಈ ಸಂದರ್ಭದಲ್ಲಿ ಅಗತ್ಯ ಮತ್ತು ಖರ್ಚುಗಳು ಹೆಚ್ಚುತ್ತವೆ ಎಂದರು.

ಜೊತೆಗೆ, ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಯೋಜನೆ ನವೆಂಬರ್‌ವರೆಗೆ ಮುಂದುವರಿಯಲಿದೆ. ಇದಕ್ಕಾಗಿ 90 ಸಾವಿರ ಕೋಟಿಗಿಂತ ಹೆಚ್ಚು ಖರ್ಚಾಗಲಿದೆ. ಕಳೆದ ಮೂರು ತಿಂಗಳ ವೆಚ್ಚವನ್ನು ಸೇರಿಸಿದರೆ ಒಂದೂವರೆ ಲಕ್ಷ ಕೋಟಿ ರೂ. ವ್ಯಯಿಸಿದಂತಾಗಲಿದೆ ಎಂದು ಬೊಕ್ಕಸದ ಹೊರೆಯ ಕುರಿತು ಪ್ರಸ್ತಾಪಿಸಿದರು.

ದೇಶದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಿರುವುದರಿಂದ ಸಮಸ್ತ ವಿಶ್ವವೇ ಹುಬ್ಬೇರಿಸುವಂತಾಗಿದೆ. ಅಮೆರಿಕದ ಪೂರ್ಣ ಜನರಿಗಿಂತ ಎರಡೂವರೆ ಪಟ್ಟು, ಬ್ರಿಟನ್ ಜನಸಂಖ್ಯೆಗಿಂತ 12 ಪಟ್ಟು ಮತ್ತು ಯೂರೋಪಿಯನ್‌ ದೇಶದ ಜನಸಂಖ್ಯೆಯ ದುಪ್ಪಟ್ಟು ಜನರಿಗೆ ಉಚಿತ ರೇಷನ್ ನೀಡಲಾಗಿದೆ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಯನ್ನು ಎದುರಿಸುವ ಶಕ್ತಿ ಹೆಚ್ಚಾಗುತ್ತದೆ ಎಂದರು.

ದೇಶಾದ್ಯಂತ ‘ಒಂದು ದೇಶ ಒಂದು ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಬಡವರಿಗೆ ದೊಡ್ಡ ಲಾಭವಾಗುತ್ತದೆ. ಉದ್ಯೋಗ ಹುಡುಕಿ ಇತರ ಸ್ಥಳಗಳಿಗೆ ವಲಸೆ ಹೋಗುವವರಿಗೆ ನೆರವು ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಜೊತೆಗೆ, ಕಳೆದ ಮೂರು ತಿಂಗಳ ಅವಧಿಯಲ್ಲಿ 9 ಕೋಟಿ ರೈತರ ಖಾತೆಗೆ 18 ಸಾವಿರ ಕೋಟಿ ರೂ. ನೇರ ನಗೆದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ. ಸರ್ಕಾರ ಇದಕ್ಕಾಗಿ 15 ಸಾವಿರ ಕೋಟಿ ರೂ. ವ್ಯಯಿಸಿದೆ. ಸರ್ಕಾರದ ಈ ಸಾಧನೆಯ ಶ್ರೇಯಸ್ಸು ಶ್ರಮಿಕ ಕೃಷಿಕರು ಮತ್ತು ಪ್ರಾಮಾಣಿಕ ತೆರಿಗೆ ಪಾವತಿಸುವ ಎರಡು ವರ್ಗದವರಿಗೆ ಸೇರುತ್ತದೆ. ಇವರಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಂದಿನ ವರ್ಷಗಳಲ್ಲಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತೇವೆ. ಬಡವರು, ಅವಕಾಶ ವಂಚಿತರನ್ನು ಸಶಕ್ತರನ್ನಾಗಿಸಲು ನಿರಂತರ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತೇವೆ. ಸ್ವಾವಲಂಬಿ ಭಾರತಕ್ಕಾಗಿ ದಿನರಾತ್ರಿ ದುಡಿಯುತ್ತೇವೆ. ಸ್ಥಳೀಯರಿಗೆ ಧ್ವನಿಯಾಗುತ್ತೇವೆ ಎಂದರು.

ಜಗತ್ತಿನ ಇತರ ದೇಶಗಳ ಅಂಕಿ ಅಂಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ನಿವಾರಣೆಯ ಸ್ಥಿತಿಗತಿ ಚೆನ್ನಾಗಿದೆ. ಸಕಾಲಕ್ಕೆ ತೆಗೆದುಕೊಂಡಿರುವ ಲಾಕ್‌ಡೌನ್ ಮತ್ತಿತರ ನಿರ್ಧಾರಗಳು ಲಕ್ಷಾಂತರ ಜನರ ಜೀವಗಳನ್ನು ಉಳಿಸಿವೆ. ಆದರೆ, ಜನ ಈಗಲೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ದಿಗ್ಬಂಧನ ವಲಯಗಳಿಗೆ ಹೆಚ್ಚಿನ ಗಮನಹರಿಸಬೇಕು. ನಿಯಮ ಪಾಲಿಸದವರನ್ನು ನಿಯಂತರಿಸಿ ದಂಡ ವಿಧಿಸಬೇಕು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

ದೇಶದ ನಿಯಮಗಳು ಎಲ್ಲರಿಗೂ ಒಂದೇ. ಇದು ಪ್ರಧಾನಿಗೂ ಅನ್ವಯ. ಬಲ್ಗೇರಿಯಾ ಪ್ರಧಾನಿ ಬಾಯ್ಕೊ ಬೊರಿಸೊವ್ ಮಾಸ್ಕ್ ಧರಿಸದೆ ಜನವಸತಿ ಪ್ರದೇಶಕ್ಕೆ ಬಂದಿದ್ದರಿಂದ 13 ಸಾವಿರ ದಂಡ ವಿಧಿಸಲಾಗಿತ್ತು. ಇದು ಇತರರಿಗೆ ಮಾದರಿಯಾಗಬೇಕು. ದೇಶದ ಪ್ರಧಾನಿಯಾಗಲಿ, ಗ್ರಾಮಪಂಚಾಯಿತಿ ಅಧ್ಯಕ್ಷರಿರಲಿ ಎಲ್ಲರಿಗೂ ನಿಯಮ ಒಂದೇ ಎಂದರು.

Leave a Reply

Your email address will not be published. Required fields are marked *

You May Also Like

ಧೋನಿಗಿಂದು ಜನ್ಮದಿನ: ವಯಸ್ಸು ನಲವತ್ತು, ಹಂಗೇ ಇದೆ ಗೆಲ್ಲುವ ತಾಕತ್ತು

ನವದೆಹಲಿ: ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.…

ಮಹಿಳಾ ಮಣಿಗಳ ಅಧಿಪತ್ಯಪ್ರಾರಂಭ: ಬಿಜೆಪಿಗೆ ರಾಮನಿಂದ ಪಟ್ಟಾಭಿಷೇಕ,ಕಾನೂನು ಹೋರಾಟ -ಎಚ್ ಕೆ ಪಾಟೀಲ

ಉತ್ತರಪ್ರಭ ಸುದ್ದಿಗದಗ: ಕಾಂಗ್ರೆಸ್‌ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ದಶಕಗಳ ಬಳಿಕ ಬಿಜೆಪಿ ಪಾಲು, ಬಿಜೆಪಿಯಲ್ಲಿ ಸಂಭ್ರಮ…

ಬಿಟ್ ಕಾಯಿನ್ ಸದ್ದು: ಬಿಟ್ ಕಾಯಿನ್ ಎಂದರೇನು ? ಕ್ರಿಪ್ಟೋಕರೆನ್ಸಿಯಲ್ಲಿ ಹಲವು ವಿಧ..!

ಜನಪ್ರಿಯವಾಗಿದೆ. ಹಾಗಾದ್ರೆ ಏನಿದು ಕ್ರಿಪ್ಟೋ ಕರೆನ್ಸಿ? ಸಾಮಾನ್ಯ ಹಣಕ್ಕೂ ಇದಕ್ಕೂ ಏನು ವ್ಯತ್ಯಾಸ..? ಸಾಮಾನ್ಯ ನೋಟಿನ ಬದಲು ಕ್ರಿಪ್ಟೋ ಕರೆನ್ಸಿ ಬಳಕೆ ಮಾಡಿದರೆ ಲಾಭ ಏನು..? ಈ ಹಣಕಾಸು ವಹಿವಾಟು ಸುರಕ್ಷಿತವೇ..? ಸಾಮಾನ್ಯ ಹಣಕಾಸು ವ್ಯವಹಾರ, ಬ್ಯಾಂಕಿoಗ್ ವ್ಯವಹಾರಕ್ಕಿಂತಾ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ..? ಇದರ ಸಂಕ್ಷೀಪ್ತ ಮಾಹಿತಿ ನಿಮಗಾಗಿ

ಸಿಡಿ ಪ್ರಕರಣ : ಸತ್ಯಾಂಶ ತಿಳಿಯದೆ ಹೆಸರು ಹೇಳಬಾರದು

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ. ನಾಲ್ಕೈದು ಜನ ಸೇರಿಕೊಂಡು ಷಡ್ಯಂತ್ರ ಮಾಡಿದ್ದಾರೆ ಎಂದು ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಪ್ಪ ಹೇಳಿದ್ದಾರೆ.