ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.
ಲಾಕಡೌನ್ ಕಾರಣದಿಂದ ಈಗಾಗಲೇ ಈ ಎಲ್ಲಾ ಕಾಲೇಜುಗಳು ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಿವೆ ಆದರೆ ಆನ್ ಲೈನ್ ತರಗತಿಗಳಲ್ಲಿ ಮಾಡುವ ಪಾಠ ಕೆಲವೊಬ್ಬರಿಗೆ ತಿಳಿಯುದಿಲ್ಲ. ಹಾಗೂ ಕೆಲವು ವಿದ್ಯಾರ್ಥಿಗಳ ಹತ್ತಿರ ಸ್ಮಾರ್ಟ ಫೋನಗಳಿಲ್ಲ. ಒಂದು ವೇಳೆ ಫೋನ್ ಇದ್ದರೂ ಕೂಡ ಹಳ್ಳಿಗಳಲ್ಲಿ ನೆಟ್ವರ್ಕ ಸಮಸ್ಯೆ ಇದರಿಂದ VTU ಪರೀಕ್ಷೆ ನಡೆಸಿದರೆ ಅಲ್ಲಿ ನಾವು ಪೇಲಾಗುವುದು ಖಚಿತ ಇದೆ. ಇದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲಾ. ಹೀಗಾಗಿ ವಿಶ್ವವಿದ್ಯಾಲಯ ಮೌಲ್ಯಮಾಪನವಿಲ್ಲದೆ ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂಬುದು ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ವಿಟಿಯು ವೇಳಾಪಟ್ಟಿ ಪ್ರಕಾರ ಜೂನ್ ತಿಂಗಳಲ್ಲಿ ಪರೀಕ್ಷೆ ಆರಂಭವಾಗಿ ಜುಲೈನಲ್ಲಿ ಫಲಿತಾಂಶ ಪ್ರಕಟಿಸುವುದಾಗಿದೆ. ಇಂಜನೀಯರಿಗ್ ಕಾಲೇಜಿನ ಪ್ರಾದ್ಯಾಪಕರು ಹೇಳುವ ಪ್ರಕಾರ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಜೊತೆಗೆ ಹೊಂದಾಣಿಯಾಗಲು ಪ್ರಯತ್ನಿಸುತ್ತಿದ್ದು ಇದರಿಂದ ಕೆಲವು ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಲು ಕಷ್ಟಕರವಾಗುತ್ತಿದೆ.
ಎಲ್ಲ ನಿರ್ಧಾರಗಳು ಸರ್ಕಾರಕ್ಕೆ ಬಿಟ್ಟದ್ದು ಮತ್ತು ಇದು ನಮ್ಮ ಒಂದೇ ವಿಶ್ವವಿದ್ಯಾಲದ ಸಮಸ್ಯೆ ಅಲ್ಲ. ಇನ್ನು ಅನೇಕ ವಿವಿಗಳಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಯುಜಿಸಿ ಇದರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಜೊತೆಗೆ ನಮಗೂ ಕೂಡ ವಿದ್ಯಾರ್ಥಿಗಳಿಗಿರುವ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಪ್ರತಿಶತಃ ಶೇ.೭೦ ರಷ್ಟು ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಿಗೆ ಹಾಜರಾಗಿರುವುದು ತಿಳಿದು ಬಂದಿದೆ. ಕಲಿಕೆಯೂ ಕೇವಲ ಆನ್ ಲೈನ್ ತರಗತಿಗಳಲ್ಲಿ ಹೇಳಿದರೆ ಸಾಲದು. ಕಾಲೇಜು ಪುನಃ ಆರಂಭವಾದ ಮೇಲೆ ತರಗತಿಯಲ್ಲಿ ಈ ವಿಷಯಗಳ ಬಗ್ಗೆ ಪುನರಾವಲೋಕನ ತರಗತಿಗಳನ್ನು ತೆಗೆದುಕೊಳ್ಳಲಾಗುವುದು. ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.

4 comments
Leave a Reply

Your email address will not be published. Required fields are marked *

You May Also Like

ಜಕ್ಕಲಿ ಗ್ರಾ. ಪಂ. ಯಲ್ಲಿ ಕಮಿಷನ್‌ ಆರೋಪ : ಗುತ್ತಿಗೆದಾರನ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ

ಜಕ್ಕಲಿ ಗ್ರಾ. ಪಂ. ಯಲ್ಲಿ ಕಮಿಷನ್‌ ಆರೋಪ : ಗುತ್ತಿಗೆದಾರನ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ…

ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಫುಲ್ ಗರಂ

ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.

ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ: ಡಿಸಿಎಂ ಕಾರಜೋಳ

ಗದಗ: ಪೂರ್ಣಾವಧಿಗೆ ಬಿ.ಎಸ್.ಯಡಿಯೂರಪ್ಪ ಅವ್ರೇ ಸಿಎಂ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಡಿಸಿಎಂ…

ಮನಸ್ಸೆಂಬ ಮಾಯೆಯೂ ಮತ್ತು ಸಮಾಜ ವಿರೋಧಿ ಸೀಲೂ…!!!

ಯಾರೋ ಒಬ್ಬರು ಚೈನ್ ಸ್ಮೋಕರ್ ಒಬ್ಬನನ್ನು ಕೇಳಿದರಂತೆ…, ಏನ್ರೀ ಅಷ್ಟೊಂದು ಸಿಗರೇಟ್ ಸೇದತೀರಾ ಅಂತ? ಅದಕ್ಕೆ ಆ ಚೈನ್ ಸ್ಮೋಕರ್ ಹೇಳಿದ್ದು..