ಮುಂಬಯಿ: ಬಾಲಿವುಡ್‌ ಹಾಟ್ ಬೆಡಗಿ ವಿದ್ಯಾ ಬಾಲನ್ ಅವರ ಚಿತ್ರ ಶಕುಂತಲಾ ದೇವಿ ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಕೊರೊನಾ ವೈರಸ್‌ನಿಂದಾಗಿ ದೇಶವು ಲಾಕ್‌ಡೌನ್ ಆಗಿದೆ. ಈ ಅವಧಿಯಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ವಿದ್ಯಾ ಬಾಲನ್ ಅವರ ಚಿತ್ರ ಶಕುಂತಲಾ ದೇವಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ವಿದ್ಯಾ ಅವರ ಚಿತ್ರ ಮೇ 8 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್‌ನದಿಂದಾಗಿ ಚಿತ್ರದ ಬಿಡುಗಡೆ ಸ್ಥಗಿತಗೊಂಡಿದೆ.

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ವಿದ್ಯಾ ಮಾಹಿತಿ ಹಂಚಿಕೊಂಡಿದ್ದಾರೆ. ಶಕುಂತಲಾ ದೇವಿಯನ್ನು ಶೀಘ್ರದಲ್ಲಿಯೇ ಕುಟುಂಬದೊಂದಿಗೆ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು ಎಂದು ಘೋಷಿಸಲು ಸಂತೋಷವಾಗಿದೆ. ಇಂತಹ ಊಹಿಸಲಾಗದ ಸಮಯದಲ್ಲಿ ನಾವು ನಿಮ್ಮನ್ನು ರಂಜಿಸಲು ಸಮರ್ಥರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ತಿಳಿಸಿದ್ದಾರೆ.

ಶಂಕುತಲಾ ದೇವಿ ಖ್ಯಾತ ಗಣಿತಕಾರರು. ಶಕುಂತಲಾ ದೇವಿ ಅವರ ಜೀವನ ಚರಿತ್ರೆಯಾಗಿದ್ದು, ಅವರ ಅದ್ಭುತ ಪ್ರತಿಭೆಯಿಂದ ಜಗತ್ತು ಬೆರಗುಗೊಂಡಿದೆ. ಗಣಿತದ ಸಂಕೀರ್ಣ ಲೆಕ್ಕಾಚಾರಗಳನ್ನು ಅವರು ಕೆಲವು ಸೆಕೆಂಡುಗಳಲ್ಲಿ ಕರಗತ ಮಾಡಿಕೊಂಡಿದ್ದರು. ಚಿತ್ರವನ್ನು ಅನು ಮೆನನ್ ನಿರ್ದೇಶಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಪೊಲೀಸರಿಂದ ವರೀಷ್ಠಾಧಿಕಾರಿ ಮೇಲೆ ಹಲ್ಲೆ..!

ಕೋಲ್ಕತಾ: ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿಯೋಜನೆಯಾಗಿರುವ ಅಂದಾಜು 500 ಪೊಲೀಸ್ ಪೇದೆಗಳು ತಮ್ಮ ರೂಂ ಸ್ಯಾನಿಟೈಸ್…

ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು, ಆಸ್ಪತ್ರೆಗೆ ದಾಖಲು

ಬೆಂಗಳೂರು:  ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ, ಕಂದಾಯ ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು ತಗುಲಿದೆ.…

ಕಮಿಶನ್ ಗೆ ಒಳಗಾಗಿ ಗಣಿಗಾರಿಕೆಗೆ ಅವಕಾಶ ಬೇಡ: ತೋಂಟದ ಶ್ರೀಗಳು

ಗದಗ: ಕಪ್ಪತ್ತಗುಡ್ಡ ನಾಶವಾದರೆ ಈ ಭಾಗ ಮರಭೂಮಿಯಾಗುತ್ತದೆ. ಬಲ್ದೋಟದಂತಹ ಕಂಪನಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ.…

ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರ ಯಾವಾಗ ರಿಲೀಸ್ ಗೊತ್ತಾ?

ಹೈದರಾಬಾದ್ : ಟಾಲಿವುಡ್‌ ಬಹುಬೇಡಿಕೆಯ ನಟ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಲೈಗರ್‌ ಸೆ. 9ಕ್ಕೆ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.