ಶಕುಂತಲಾ ದೇವಿ ಆದ ಹಾಟ್ ಬೆಡಗಿ ವಿದ್ಯಾಬಾಲನ್!

ಮುಂಬಯಿ: ಬಾಲಿವುಡ್‌ ಹಾಟ್ ಬೆಡಗಿ ವಿದ್ಯಾ ಬಾಲನ್ ಅವರ ಚಿತ್ರ ಶಕುಂತಲಾ ದೇವಿ ಒಟಿಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಕೊರೊನಾ ವೈರಸ್‌ನಿಂದಾಗಿ ದೇಶವು ಲಾಕ್‌ಡೌನ್ ಆಗಿದೆ. ಈ ಅವಧಿಯಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ವಿದ್ಯಾ ಬಾಲನ್ ಅವರ ಚಿತ್ರ ಶಕುಂತಲಾ ದೇವಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ವಿದ್ಯಾ ಅವರ ಚಿತ್ರ ಮೇ 8 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್‌ನದಿಂದಾಗಿ ಚಿತ್ರದ ಬಿಡುಗಡೆ ಸ್ಥಗಿತಗೊಂಡಿದೆ.

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ವಿದ್ಯಾ ಮಾಹಿತಿ ಹಂಚಿಕೊಂಡಿದ್ದಾರೆ. ಶಕುಂತಲಾ ದೇವಿಯನ್ನು ಶೀಘ್ರದಲ್ಲಿಯೇ ಕುಟುಂಬದೊಂದಿಗೆ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು ಎಂದು ಘೋಷಿಸಲು ಸಂತೋಷವಾಗಿದೆ. ಇಂತಹ ಊಹಿಸಲಾಗದ ಸಮಯದಲ್ಲಿ ನಾವು ನಿಮ್ಮನ್ನು ರಂಜಿಸಲು ಸಮರ್ಥರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ತಿಳಿಸಿದ್ದಾರೆ.

ಶಂಕುತಲಾ ದೇವಿ ಖ್ಯಾತ ಗಣಿತಕಾರರು. ಶಕುಂತಲಾ ದೇವಿ ಅವರ ಜೀವನ ಚರಿತ್ರೆಯಾಗಿದ್ದು, ಅವರ ಅದ್ಭುತ ಪ್ರತಿಭೆಯಿಂದ ಜಗತ್ತು ಬೆರಗುಗೊಂಡಿದೆ. ಗಣಿತದ ಸಂಕೀರ್ಣ ಲೆಕ್ಕಾಚಾರಗಳನ್ನು ಅವರು ಕೆಲವು ಸೆಕೆಂಡುಗಳಲ್ಲಿ ಕರಗತ ಮಾಡಿಕೊಂಡಿದ್ದರು. ಚಿತ್ರವನ್ನು ಅನು ಮೆನನ್ ನಿರ್ದೇಶಿಸಿದ್ದಾರೆ.

Exit mobile version