ಚಿಕ್ಕಮಗಳೂರು: ಸರ್ಕಾರ ಎಷ್ಟೇ ಭರವಸೆ ನೀಡಿದರೂ ರೈತರ ಬವಣೆ ಮಾತ್ರ ನೀಗುತ್ತಿಲ್ಲ. ರೈತರೊಬ್ಬರು ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆಯನ್ನು ಟ್ಯಾಕ್ಟರ್ ನಿಂದ ನಾಶ ಮಾಡಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ನಾಗೇನಹಳ್ಳಿ ಅಗ್ರಹಾರ ತಾಂಡಾದಲ್ಲಿ ಕಿರಣ್ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಎಲೆಕೋಸನ್ನು ಬೆಳೆದಿದ್ದರು. ಎರಡು ಎಕರೆ ಎಲೆಕೋಸನ್ನು ಬೆಳೆಯಲು ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದರು. ಆದರೆ, ಫಸಲು ಕೂಡ ಉತ್ತಮವಾಗಿತ್ತು. ಎರಡರಿಂದ ಮೂರು ಲಕ್ಷ ಲಾಭದ ನಿರೀಕ್ಷೆ ರೈತನದ್ದಾಗಿತ್ತು. ಆದರೆ ಬೆಳೆ ಕೊಳ್ಳಲು ಯಾರೂ ಮುಂದೆ ಬರದೆ, ದಿನದಿಂದ ದಿನಕ್ಕೆ ಬೆಳೆ ಹಾಳಾಗಿರುವುದನ್ನು ಕಂಡು ಮನನೊಂದ ರೈತ ಕಿರಣ್ ಎರಡು ಎಕರೆಗೂ ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ್ದಾರೆ.

ಕೊರೊನಾ ಆತಂಕದಿಂದ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡುವ ಮೊದಲು ಹಾಗೂ ಲಾಕ್ಡೌನ್ ವೇಳೆಯಲ್ಲೂ ಎಲೆಕೋಸಿಗೆ ಉತ್ತಮ ಬೆಲೆ ಇತ್ತು. ಆದರೆ ಲಾಕ್ಡೌ ನ್ ಹಿನ್ನೆಲೆ ಬೆಳೆ ಖರೀದಿಸೋಕೆ ಮಧ್ಯವರ್ತಿಗಳು ಬರಲಿಲ್ಲ. ಬೇರೆ ಯಾರೂ ಖರೀದಿಗೆ ಮುಂದಾಗಿಲ್ಲ. ಇದರಿಂದ ಮನನೊಂದ ರೈತ ಎರಡು ಎಕರೆ ಎಲೆಕೋಸಿಗೂ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಜೊತೆಗೆ ಊರಿನ ಕುರಿ-ಮೇಕೆ, ದನ-ಕರುಗಳನ್ನು ಹೊಲದಲ್ಲೇ ಮೇಯಲು ಬಿಟ್ಟು, ಎಲೆಕೋಸನ್ನು ಕತ್ತರಿಸಿ ಹೊಲದಲ್ಲಿಯೇ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ಬಳಿ ಟ್ರ್ಯಾಕ್ಟರ್ ಪಲ್ಟಿ: ಸ್ಥಳದಲ್ಲಿಯೇ ಇಬ್ಬರ ಸಾವು

ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಜನ ಗಾಯ‌ಗೊಂಡ ಘಟನೆ ಲಕ್ಷೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ.

ಕೋಟೆ ನಾಡಿನಲ್ಲಿ ತುಂತುರು ಮಳೆ

ಗಜೇಂದ್ರಗಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಜೇಂದ್ರಗಡದಲ್ಲಿ ತುಂತುರು ಮಳೆ ಸುರಿಯಿತು. ಗಜೇಂದ್ರಗಡದಲ್ಲಿ ಬೆಳಿಗ್ಗೆಯಿಂದಲೇ ದಟ್ಟನೆಯ…

ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ : ಅರಣ್ಯ ಸಚಿವ ಆನಂದ್ ಸಿಂಗ್

ಕಾಡಂಚಿನ ಗ್ರಾಮಗಳಲ್ಲಿ ಪದೆ ಪದೇ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.

ಹಂತ ಹಂತವಾಗಿ ವಿದ್ಯುತ್ ಬಿಲ್ಲ ಕಟ್ಟಲು ಅವಕಾಶ ಕಲ್ಪಿಸಿ

ಗದಗ: ಜೂನ್ ನಿಂದ ಜುಲೈ ವರೆಗೆ ವಿದ್ಯುತ್ ಬಿಲ್‌ಗಳನ್ನು 3 ತಿಂಗಳ ನಂತರ ಹಂತ ಹಂತವಾಗಿ ಪಾವತಿಸಿಕೊಳ್ಳಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಸಯ್ಯ ನಂದಿಕೋಲಮಠ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.