ಬೆಂಗಳೂರು: ಚಂದನವನದ ಬೆಡಗಿ, ಡಿಂಪಲ್ ರಾಣಿ ರಚಿತಾ ರಾಮ್ ಮತ್ತೊಂದು ಲುಕ್ ಗೆ ಸಜ್ಜಾಗಿದ್ದಾರೆ.
ಈ ಬುಲ್ ಬುಲ್ ಸದ್ಯ ಲಿಲ್ಲಿ ಆಗಲು ಹೊರಟಿದ್ದಾರೆ. ನಿರ್ದೇಶಕ ವಿಜಯ್ ಗೌಡ ಅವರೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಲಿಲ್ಲಿ ಆಗಲು ಡಿಂಪಲ್ ಬೆಡಗಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ನಿರ್ದೇಶಕ ರಾಜ್ ಫಿಲ್ಮ್ಸ್ ಮತ್ತು ಬೌನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಿಲ್ಲಿಯನ್ನು ನಾಗರಾಜ್ ಮತ್ತು ಸುಬ್ರಮಣಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯ್ ಅವರು ಕಥೆ, ಚಿತ್ರಕಥೆ ರಚಿಸಿದ್ದಾರೆ. ಯುವ ಪೀಳಿಗೆಯ ತಲ್ಲಣವನ್ನು ಹೊತ್ತು ಈ ಚಿತ್ರ ಬರಲಿದೆ. ಅದರೊಂದಿಗೆ ಸಾಮಾಜಿಕ ಸಮಸ್ಯೆಗಳು ಮತ್ತು ಮಕ್ಕಳ ನಿರ್ಲಕ್ಷ್ಯ ಮತ್ತು ಮಕ್ಕಳ ಮೇಲೆ ತಂತ್ರಜ್ಞಾನದ ಪರಿಣಾಮದ ಬಗ್ಗೆ ಬೆಳಕು ಚೆಲ್ಲಲು ಲಿಲ್ಲಿ ಹೊರಟಿದ್ದಾರೆ. ಅಲ್ಲದೇ, ಈ ಚಿತ್ರ ಮಹಿಳಾ ಪ್ರಧಾನವಾಗಿದೆ.
ಲಿಲ್ಲಿ ಆಸಕ್ತಿದಾಯಕ ಪಾತ್ರವಾಗಿದ್ದು, ಎನ್‌ಆರ್‌ಐ ಮನಶ್ಶಾಸ್ತ್ರಜ್ಞ ಡಾ. ಮಹಿ ಪಾತ್ರದಲ್ಲಿ ರಚಿತಾ ಕಾಣಿಸಲಿದ್ದಾರೆ. ನಟಿಸಲಿದ್ದಾರೆ.ಇದು ಒಂದು ಆಸಕ್ತಿದಾಯಕ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಮಹಿಳಾ ಕೇಂದ್ರಿತ ಚಿತ್ರವೊಂದರಲ್ಲಿ ರಚಿತಾ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.