ಉಡುಪಿ: ಹೊರರಾಜ್ಯಗಳಿಂದ ಬಂದಿರುವ ವಲಸಿಗರ ಕಾರಣದಿಂದ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಂತಹ ವಲಸಿಗರ ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಪ್ರದೇಶವನ್ನು ಲಾಕ್ಡೌನ್ ಅಥವಾ ಸೀಲ್ಡೌನ್ ಮಾಡುವ ಬದಲಿಗೆ ಸೋಂಕಿತ/ಶಂಕಿತ ವ್ಯಕ್ತಿಗಳ ಮನೆಗಳನ್ನು ಸೀಲ್ಡೌನ್ ಮಾಡುವುದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದಲ್ಲದೆ, ಇತರ ಚಟುವಟಿಕೆಗಳಿಗೂ ಅವಕಾಶವಾಗುತ್ತದೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಸೀಲ್ಡೌನ್ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೋವಿಡ್ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಮುಂಬಯಿಯಿಂದ ವಲಸೆ ಬಂದಿರುವವರ ಕಾರಣದಿಂದಾಗಿ ಉಡುಪಿಯಲ್ಲಿ ಸೋಂಕು ಹೆಚ್ಚಾಗಿದ್ದು, ಮಂಗಳವಾರ ಒಂದೇ ದಿನ 150 ಪ್ರಕರಣಗಳು ದಾಖಲಾಗಿವೆ. ನಾಗರಿಕರು ಆತಂಕಪಡುವುದು ಬೇಡ. ಸರ್ಕಾರದ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ವಲಸೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.
ಉಡುಪಿಯಲ್ಲಿ ಮತ್ತೊಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯ
ಉಡುಪಿಯಲ್ಲಿ ಈಗಾಗಲೇ ಒಂದು ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಪ್ರಯೋಗಾಲಯ ಸ್ಥಾಪಿಸುವುದಾಗಿ ಸಚಿವರು ಹೇಳಿದರು.
ಕೆಲವು ದಿನಗಳ ಹಿಂದೆ ಹಸಿರುವಲಯದಲ್ಲಿದ್ದ ಉಡುಪಿ ಜಿಲ್ಲೆ ಇಂದು ಬೆಂಗಳೂರನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯನ್ನು ಮತ್ತೆ ಹಸಿರು ವಲಯಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕು ಎಂದರು.
ಕೊರೋನ ಸಾಮಾಜಿಕ ಪಿಡುಗು ಅಲ್ಲ
ಕೊರೋನ ಸೋಂಕಿತರನ್ನು ಕಳಂಕಿತರಂದು ಕಾಣುವುದು ಸರಿಯಲ್ಲ. ಇದು ಸಾಮಾಜಿಕ ಪಿಡುಗಲ್ಲ. ಇದಕ್ಕಿಂತಲೂ ಹಿಂದೆ ಅಪಾಯಕರಿ ವೈರಸ್ ಗಳು ದಾಳಿಮಾಡಿವೆ. ಆದರೆ ಕೊನೆಯಲ್ಲಿ ಗೆಲುವು ನಮ್ಮದೇ ಆಗಿರುತ್ತದೆ. ನಿನ್ನೆ ಹುಬ್ಬಳ್ಳಿಯಲ್ಲಿ ಕೊರೋನ ಸೋಂಕಿತ ವ್ಯಕ್ತಿಯನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಗುಣಪಡಿಸಲಾಗಿದೆ. ಲಸಿಕೆ ಕಂಡುಹಿಡಿಯುವವರೆಗೆ ಕೊರೋನಾಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಾರ್ ರೂಂ, ಡ್ಯಾಶ್ ಬೋರ್ಡ್, ಟೆಲಿ ಐಸಿಯು ನಂತಹ ಉಪಕ್ರಮಗಳಿಂದ ಚಿಕಿತ್ಸೆಗೆ ಅನುಕೂಲವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರ ಕೊರೋನ ನಿಯಂತ್ರಿಸಲು ಕರ್ನಾಟಕದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಅಗತ್ಯ ನೆರವುಗಳನ್ನು ನೀಡುತ್ತಿದೆ ಎಂದರು.
ಮಂಗಳೂರು ಏರ್ಪೋರ್ಟಿಗೆ ಮಾರ್ಗಸೂಚಿಗಳು
ದೇಶದ ಇತರೆ ಭಾಗಗಳಿಂದ ಮಂಗಳೂರಿಗೆ ವಿಮಾನ ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅನ್ವಯವಾಗುವ ನಿಯಮಗಳು ಮಂಗಳೂರು ವಿಮಾನ ನಿಲ್ದಾಣಕ್ಕೂ ಅನ್ವಯವಾಗಲಿವೆ ಎಂದು ಇದೇ ವೇಳೆ ಸುಧಾಕರ್ ತಿಳಿಸಿದರು.
ಈ ಕುರಿತಂತೆ ಶೀಘ್ರದಲ್ಲೇ ಆದೇಶವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಐಸಿಎಂಆರ್ ಮಾರ್ಗಸೂಚಿಗಳನ್ನು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗುವುದು. ಇದರ ಅನ್ವಯ ಪ್ರಯಾಣಿಕರು ಎರಡು ದಿನಗಳಷ್ಟೇ ಹಳೆಯದಾದ ಕೋವಿಡ್ ನೆಗೆಟೀವ್ ವರದಿಯನ್ನು ಏರ್ಪೋರ್ಟಿನಲ್ಲಿ ತೋರಿಸಬೇಕಾಗುವುದು. ನೆಗೆಟೀವ್ ಎಂದು ಖಚಿತವಾದರಷ್ಟೇ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You May Also Like

78 ವರ್ಷದ ಅಜ್ಜ ಮದುವೆಯಾಗಿದ್ದು 17 ವರ್ಷದ ಹುಡುಗಿಯನ್ನು!! ಮುಂದೆ ನಡೆದಿದ್ದೇನು?

ಜಕಾರ್ತಾ : 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಚಿತ್ರಕಲಾ, ಜಾನಪದ ವಿವಿ ಸಿಬ್ಬಂದಿ ವೇತನಕ್ಕೆ 11.60 ಲಕ್ಷ ಬಿಡುಗಡೆ: ವಿಪ ಸದಸ್ಯ ಸಂಕನೂರ

ರಾಜ್ಯದಲ್ಲಿ ಅಡ್ಹಾಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಚಿತ್ರಕಲಾ ಮಹಾವಿದ್ಯಾಲಯದ ಹಾಗೂ ಜಾನಪದ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿಗಳಿಗೆ 2020-21ನೇ ಸಾಲಿನಲ್ಲಿ ನೀಡಬೇಕಾದಂತಹ ಬಾಕಿ ವೇತನಕ್ಕಾಗಿ ಆರ್ಥಿಕ ಇಲಾಖೆ 11 ಕೋಟಿ 60 ಲಕ್ಷ ಹಣ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ತ ಸದಸ್ಯ ಎಸ್.ವ್ಹಿ.ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ ಸಭೆಯಲ್ಲಿ ನೀಡಿದ ಸೂಚನೆಗಳು

ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲೆಗಳ ವಿವಿಧ ಅಧಿಕಾರಿಗಳು, ಎಸ್ ಪಿಗಳ ಜೊತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಹಳೆ ವಿದ್ಯಾರ್ಥಿಯಿಂದ ಸರಕಾರಿ ಶಾಲೆಗೆ ಆರ್ಥಿಕ ಸಹಾಯ

ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.