ಮಸ್ಕಿ: ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.

ರಾಯಚೂರು ಜಿಲ್ಲೆಯ ಮಸ್ಕಿಯ ಅಟೋ ಚಾಲಕ ಸಿದ್ದು ಮುರಾರಿ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಉಚಿತವಾಗಿ ಆಟೋ ಜೊತೆಗೆ ತಾವು ಕೂಡ ತೊಡಗಿಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಈಗಾಗಲೇ ಕಳೆದ ಎರಡು ತಿಂಗಳಿಂದ ವಾಹನ ಸಂಚಾರ ಬಂದ್ ಆಗಿದ್ದರಿಂದ ಅಟೋ ಚಾಲಕರಂತೂ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ.

ಚಾಲಕರಿಗೆ ಕೆಲಸ ಇಲ್ಲದೇ ಪರಿತಪಿಸಿದ್ದನ್ನು ಎಲ್ಲೆಡೆ ಕಂಡಿದ್ದೇವೆ. ಆದರೆ ಸಿದ್ದು ಮುರಾರಿ ಅವರು ಕೊರೊನಾ ವೈರಸ್ ಜಾಗೃತಿ ಅಭಿಯಾನಕ್ಕೆ ಉಚಿತ ಆಟೋ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೋವಿಡ್-19 ನಿಂದಾಗಿ ಭಾರತ ದೇಶಕ್ಕೆಬಡಜನರ, ನಿರ್ಗತಿಕರ ಹಾಗೂ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆಟೋಗಳಿಗೆ ಕೆಲಸ ಇಲ್ಲದೆ ಕೈಕಟ್ಟಿಕೊಂಡು ಬಹುತೇಕ ಆಟೋ ಚಾಲಕರು ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಇದು ಅವರಿಗೆ ಅನಿವಾರ್ಯವೂ ಆಗಿದೆ. ದುಡಿಮೆಯೇ ಇಲ್ಲದೇ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ಬಹುತೇಕ ಅಟೋ ದುಡಿಮೆಯನ್ನು ನಂಬಿಕೊಂಡವರು ಅಸಹಾಯಕರಾಗಿದ್ದಾರೆ. ಆದರೆ ಸಿದ್ದು ಮಾತ್ರ ತನ್ನ ಸಂಕಷ್ಟ ಹಾಗೂ ನೋವು ನುಂಗಿ ಕೊರೋನಾದ ಈ ಸಂಕಷ್ಟದಲ್ಲಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಅಟೋ ಚಾಲಕ ಸಿದ್ದು ಮುರಾರಿ

ಕೂಲಿ ಕೆಲಸ ಇಲ್ಲದೇ ಕಳೆದ ಒಂದು ತಿಂಗಳಿನಿಂದ ಆಟೋ ಚಾಲಕರು ಒದ್ದಾಡುವಂತಾಗಿದೆ. ಇವರ ಸಂಕಷ್ಟವನ್ನು ಕಂಡು ಸರಕಾರವೇ ಆಟೋ ಚಾಲಕರಿಗೆ ಪರಿಹಾರ ನೀಡಲು ಮುಂದಾಗಿದೆ. ಇಂತಹ ವೇಳೆಯಲ್ಲಿ ಮಸ್ಕಿಯ ಆಟೋ ಚಾಲಕ ಸಿದ್ದು ಮುರಾರಿ ಅವರು ಕೊಂಚ ಭಿನ್ನ. ಇಲ್ಲಿನ ಅಭಿನಂದನ ಶಿಕ್ಷಣ ಸಂಸ್ಥೆಯವರು ಹಮ್ಮಿಕೊಂಡಿದ್ದ ಮಾಸ್ಕ್ ವಿತರಣೆ ಹಾಗೂ ಕೊರೊನಾ ಜಾಗೃತಿ ಅಭಿಯಾನಕ್ಕೆ ತನ್ನ ಆಟೋವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಚಿತವಾಗಿ ಆಟೋ ಸೇವೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯ ಪ್ರಶಂಸೆಗೆ ಪಾತ್ರರಾಗಿದೆ.

Leave a Reply

Your email address will not be published. Required fields are marked *

You May Also Like

ಪ್ರೇರಣಾದಾಯಕ ನಡಿಗೆ ಸ್ಪೂತಿ೯ಯಡೆಗೆ…!!!

ಹೀಗೊಂದು ಆಯಾಸಯಿಲ್ಲದ ಹೆಜ್ಜೆ ಗುರುತು ಸಂಚಲನ… ಉತ್ತರಪ್ರಭ ಆಲಮಟ್ಟಿ: ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ…

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿದೆ ಆತಂಕ!

ಬೆಂಗಳೂರು: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹಲವು ದೇಶಗಳಲ್ಲಂತೂ ಇದರ ನಾಗಾಲೋಟ…

ಹುಬ್ಬಳ್ಳಿ: 165 ಜನ ವೈದ್ಯಕೀಯ ಸಿಬ್ಬಂದಿಗೆ ಮೆತ್ತಿಕೊಂಡ ಸೋಂಕು!

ಹುಬ್ಬಳ್ಳಿ : ಕೊರೊನಾ ಅಟ್ಟಹಾಸದ ಮಧ್ಯೆ ವೈದ್ಯಕೀಯ ಸಿಬ್ಬಂದಿಗೆ ಮಹಾಮಾರಿಯ ಭಯ ಇನ್ನಷ್ಟು ಹೆಚ್ಚಾಗುತ್ತಿದೆ.