ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಸಿಳಿದರು.
ಕೊರೊನಾ ಸೋಂಕಿಗೆ ಹೊಸ ಚಿಕಿತ್ಸೆಯಾಗಿರುವ ಪ್ಲಾಸ್ಮಾಥೆರಪಿ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೊಂದು ಹೊಸ ಚಿಕಿತ್ಸೆಯಾಗಿದೆ. ಕೊರೊನ ಪಾಸಿಟಿವ್ ಆಗಿ ಅದರಿಂದ ಗುಣಮುಖರಾಗಿರುವವರಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಕೊರೊನ ಸೋಂಕಿರುವ ವ್ಯಕ್ತಿಗೆ ಚಿಕಿತ್ಸೆ ಮಾಡುವ ವಿಧಾನ ಇದಾಗಿದೆ.

ಬೆಂಗಳೂರಿನ 5 ಜನ ದಾನಿಗಳಿಂದ ಪ್ಲಾಸ್ಮಾ ಪಡೆದುಕೊಳ್ಳಲಾಗಿದೆ. ಈ ಚಿಕಿತ್ಸೆ ಮಾಡುವ ವೇಳೆ ಚಿಕಿತ್ಸೆಗೊಳಗಾಗುವ ರೋಗಿಯ ಒಪ್ಪಿಗೆ ಪಡೆದುಕೊಂಡು ಚಿಕಿತ್ಸೆ ಮಾಡಬೇಕಾಗಿದೆ ಎಂದು ಹೇಳಿದರು.

ಆಂದ್ರಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನ ಪಾಸಿಟಿವ್ ನೊಂದಿಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರು. ವೈದ್ಯರು ಇವರಿಗೆ ಕೊನೆಯ ಕ್ಷಣದಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಗಾಗಿ ಇವರಿಂದ ಅನುಮತಿ ಪಡೆದು ಚಿಕಿತ್ಸೆ ಕೈಗೊಂಡರು. ಚಿಕಿತ್ಸೆಯಿಂದ ಚೇತರಿಕೆಯನ್ನು ಕಂಡರು. ದುರಾದೃಷ್ಟ ವಶಾತ್ ಆ ವ್ಯಕ್ತಿ ಹೃದಯಾಘಾತದಿಂದ ಮೃತಪದ್ದಾರೆ. ಅವರು ಮೃತಪಟ್ಟಿರುವುದು ಪ್ಲಾಸ್ಮಾ ಥೆರಪಿಯ ವೈಫಲ್ಯವಲ್ಲ. ಇದು ಪ್ಲಾಸ್ಮಾ ಥೆರಪಿಯ ಸೋಲಲ್ಲ. ಪ್ಲಾಸ್ಮಾ ಥೆರಪಿಯ ಬಗ್ಗೆ ಕೆಲವು ಚಿಕಿತ್ಸೆಗಳಾದ ಬಳಿಕ ಅದರ ಮೇಲೆ ನಾವು ತೀರ್ಪುಕೊಡಬೇಕು ತಿಳಿಸಿದರು.

Leave a Reply

Your email address will not be published.

You May Also Like

ಕೋವಿಡ್ ತಪಾಸಣೆ: ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳ ವರದಿ ನೆಗೆಟಿವ್.

ಮಾದ್ಯಮ ಪ್ರತಿನಿಧಿಗಳ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿde. ಇದರಿಂದ ಮಾಧ್ಯಮ ಮಿತ್ರರು ಹಾಗೂ ಅವರ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಯುವ ಸಮಯವನ್ನು ನಟ ಸುಶಾಂತ್ ಮೊದಲೇ ನಿರ್ಧರಿಸಿದ್ದರೆ?

ಬೆಂಗಳೂರು: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವರ…

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.