ಗದಗ: ವಿಷಪ್ರಾಶನದಿಂದ 62 ಕುರಿಗಳ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರೇಗಲ್ ನ ಸುಣಗಾರ ಕೆರೆ ಬಳಿ ನಡೆದಿದೆ. ಬಳ್ಳಾರಿ ಜಿಲ್ಲೆಯಿಂದ ಕುರಿಗಳಿಗೆ ಆಹಾರ ಅರಸಿ ಕುರಿಗಾಯಿಗಳು ಬಂದಿದ್ದರು. ಆದರೆ ಜೋಳದ ಚಿಗುರು ತಿಂದು ಸಾವನ್ನಪ್ಪಿವೆ ಎನ್ನಲಾಗಿದೆ.

ಕುರಿಗಾಯಿಗಳಾದ ಸಿದ್ದಪ್ಪ ಪೂಜಾರಿ, ದೇವರಾಜ್ ಪೂಜಾರಿ, ದೇವರಾಜ್ ಪೂಜಾರಿ, ಅಜಿತ್ ಪೂಜಾರಿ ಎಂಬುವವರಿಗೆ ಸೇರಿದ 62 ಕುರಿಗಳು ಸಾವನ್ನಪ್ಪಿವೆ.
ಕುರಿಗಳ ಸಾವಿನಿಂದ ಕುರಿಗಾಯಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ಕಣ್ಣೆದುರಿಗೆ ಕುರಿ ಸಾಯುವುದನ್ನು ನೋಡಿ ಕುರಿಗಾಯಿಗಳು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ‌. ಕುರಿಗಳ ಸಾವಿಗೆ ಕಾರಣವಾದ ಜೋಳದ ಚಿಗುರು ಬಾಗಲಕೋಟೆ ಪಶು ಜೈವಿಕ ಸಂಸ್ಥೆಗೆ ರವಾನಿಸಲಾಗಿದೆ.
ಕೊರೋನಾ ಸಂಕಷ್ಟದಲ್ಲಿ ಕುರಿಗಳ ಸಾವಿನಿಂದ ಕುರಿಗಾರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಕುರಿಗಳನ್ನು ಕಳೆದುಕೊಂಡ ಕುರಿಗಾಯಿಗಳು ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಅಂತಿಮವಾಗಿ ಚುನಾವಣಾ ಕಣದಲ್ಲುಳಿದ ಅಭ್ಯರ್ಥಿಗಳ ಹಾಗೂ ಚಿಹ್ನೆ ಹಂಚಿಕೆ ವಾರ್ಡವಾರು ವಿವರ

ಗದಗ :ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ  ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಇಂತಿದೆ: ವಾರ್ಡ…

ನೆಕೆಡ್ ಚಿತ್ರ 27ರಂದು ತೆರೆಗೆ ಬರಲಿದೆ: ಮಾದಕ ಫೋಟೋ ಹಂಚಿಕೊಂಡ RGV

ಮುಂಬೈ: ಬಾಲಿವುಡ್ ನ ಪ್ರತಿಭಾವಂತ ಮತ್ತು ಅನೇಕ ಕಾರಣಗಳಿಂದ ವಿವಾದದ ಸುಳಿಗೆ ಸಿಲುಕುವ ನಿರ್ದೇಶಕ ರಾಮ್…

ಡೋಣಿ ಅವಾಂತರ – ನಡುಗಡ್ಡೆಯಲ್ಲಿಯೇ ಕೈಯಲ್ಲಿ ಜೀವ ಹಿಡಿದು ನಿಂತಿರುವ ಜನ!

ವಿಜಯಪುರ : ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜನರ ಬದುಕು ಅಕ್ಷರಶಃ ಬೀದಿಗೆ ಬಂದು ನಿಂತಿದೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷ ಜನವರಿ 9 ರಿಂದ…