ನವದೆಹಲಿ: ಶೇಂಗಾ ಚಿಕ್ಕಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶೇಂಗಾ ಚಿಕ್ಕಿ ರುಚಿಯ ಜೊತೆಗೆ ಪೌಷ್ಟಿಕವೂ ಹೌದು. ಅಂತಹ ಶೇಂಗಾ ಚಿಕ್ಕಿಗೀಗ ಜಿಐ ಮಾನ್ಯತೆ ದೊರೆತಿದೆ. ಇದರಿಂದ ಶೇಂಗಾ ಚಿಕ್ಕಿ ಅಂದರೆ ಕಡಲೆ ಮಿಠಾಯಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ. ಜಿಐ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಅಂತ ಅರ್ಥ. ಒಂದು ಪ್ರದೇಶದಲ್ಲಿನ ಖಾದ್ಯದ ಬೇಡಿಕೆ ಹಾಗೂ ಜನಪ್ರೀಯತೆಯನ್ನು ಪರಿಗಣಿಸಿ ಜಿಯೋಗ್ರಫಿಕಲ್ ಇಂಡಿಕೇಷನ್ ಜಿಐ ಟ್ಯಾಗ್ ನೀಡುತ್ತದೆ. ಕಂಟ್ರೋಲರ್ ಆಫ್ ಜನರಲ್ ಪೇಟೆಂಟ್ ಇಲಾಖೆಯಿಂದ ನೀಡಲ್ಪಡುವ ಒಂದು ಹಿರಿಮೆಯಾಗಿದೆ. ಇದು ದೇಶಿಯ ಮಾನ್ಯತೆ ದೊರೆಕಿಸಿ ಕೊಡುವುದಾಗಿದೆ.
ಈಗಾಗಲೇ ಜಿಐ ಟ್ಯಾಗ್ ಮಾನ್ಯತೆ ತಮಿಳುನಾಡಿಗೆ ಲಭಿಸಲಿದೆ. ತಮಿಳನಾಡಿಗೆ ಈ ಹಿಂದೆಯೂ ಕೂಡ ತಿರುನಲ್ವೆಲ್ಲಿ ಹಲ್ವಾ ಎಂದು ನಾಮಕರಣ ಮಾಡಿ ಜಿಐ ಟ್ಯಾಗ್ ನೀಡಲಾಗಿದೆ. ಸ್ರಿವಿಲ್ಲಪುತ್ತೂರ್ ಪಾಲ್ಕೋವಾ, ಪಳನಿ ಪಂಚಾಮೃದಂ, ಮಣ್ಣಪ್ಪಾರೈ ಮುರುಕ್ಕು, ಅಂಬೂರ್ ಬಿರಿಯಾನಿ ಮುಂತಾದವುಗಳಿಗೂ GI ಟ್ಯಾಗ್ ನೀಡಲಾಗಿದೆ. ಇದೀಗ ಈ ಸಾಲಿಗೆ ಕಡಲೆ ಮಿಠಾಯಿ ಕೂಡ ಸೇರ್ಪಡೆಯಾಗಿದೆ.
ಶೇಂಗಾ ಚಿಕ್ಕಿಯ ಮೂಲ
ಶೇಂಗಾ ಚಿಕ್ಕಿಗೆ ಕಡಲೇ ಮಿಠಾಯಿ, ಕೋವಿಲ್ ಪಟ್ಟಿ, ಕಡಲೈ ಮಿಠಾಯ್ ಎಂದು ಆಯಾ ಪ್ರದೇಶದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಎಂಬಲ್ಲಿ ಇದನ್ನ ದೊಡ್ಡಮಟ್ಟದಲ್ಲಿ ಉತ್ಪಾದಿಸಲಾಗುತ್ತಿದ್ದು ಶೇಂಗಾ ಚಿಕ್ಕಿಯ ಮೂಲ ಇಲ್ಲಿಯೇ ಎಂದು ಹೇಳಲಾಗುತ್ತಿದೆ. ಕೋವಿಲ್ ಪಟ್ಟಿಯಲ್ಲಿ ಇದು ದೊಡ್ಡ ಉದ್ಯಮವಾಗಿದೆ.