ನವದೆಹಲಿ: ಶೇಂಗಾ ಚಿಕ್ಕಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶೇಂಗಾ ಚಿಕ್ಕಿ ರುಚಿಯ ಜೊತೆಗೆ ಪೌಷ್ಟಿಕವೂ ಹೌದು. ಅಂತಹ ಶೇಂಗಾ ಚಿಕ್ಕಿಗೀಗ ಜಿಐ ಮಾನ್ಯತೆ ದೊರೆತಿದೆ. ಇದರಿಂದ ಶೇಂಗಾ ಚಿಕ್ಕಿ ಅಂದರೆ ಕಡಲೆ ಮಿಠಾಯಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ. ಜಿಐ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಅಂತ ಅರ್ಥ. ಒಂದು ಪ್ರದೇಶದಲ್ಲಿನ ಖಾದ್ಯದ ಬೇಡಿಕೆ ಹಾಗೂ ಜನಪ್ರೀಯತೆಯನ್ನು ಪರಿಗಣಿಸಿ ಜಿಯೋಗ್ರಫಿಕಲ್ ಇಂಡಿಕೇಷನ್ ಜಿಐ ಟ್ಯಾಗ್ ನೀಡುತ್ತದೆ. ಕಂಟ್ರೋಲರ್ ಆಫ್ ಜನರಲ್ ಪೇಟೆಂಟ್ ಇಲಾಖೆಯಿಂದ ನೀಡಲ್ಪಡುವ ಒಂದು ಹಿರಿಮೆಯಾಗಿದೆ. ಇದು ದೇಶಿಯ ಮಾನ್ಯತೆ ದೊರೆಕಿಸಿ ಕೊಡುವುದಾಗಿದೆ.

ಈಗಾಗಲೇ ಜಿಐ ಟ್ಯಾಗ್ ಮಾನ್ಯತೆ ತಮಿಳುನಾಡಿಗೆ ಲಭಿಸಲಿದೆ. ತಮಿಳನಾಡಿಗೆ ಈ ಹಿಂದೆಯೂ ಕೂಡ ತಿರುನಲ್ವೆಲ್ಲಿ ಹಲ್ವಾ ಎಂದು ನಾಮಕರಣ ಮಾಡಿ ಜಿಐ ಟ್ಯಾಗ್ ನೀಡಲಾಗಿದೆ. ಸ್ರಿವಿಲ್ಲಪುತ್ತೂರ್ ಪಾಲ್ಕೋವಾ, ಪಳನಿ ಪಂಚಾಮೃದಂ, ಮಣ್ಣಪ್ಪಾರೈ ಮುರುಕ್ಕು, ಅಂಬೂರ್ ಬಿರಿಯಾನಿ ಮುಂತಾದವುಗಳಿಗೂ GI ಟ್ಯಾಗ್ ನೀಡಲಾಗಿದೆ. ಇದೀಗ ಈ ಸಾಲಿಗೆ ಕಡಲೆ ಮಿಠಾಯಿ ಕೂಡ ಸೇರ್ಪಡೆಯಾಗಿದೆ.

ಶೇಂಗಾ ಚಿಕ್ಕಿಯ ಮೂಲ

ಶೇಂಗಾ ಚಿಕ್ಕಿಗೆ ಕಡಲೇ ಮಿಠಾಯಿ, ಕೋವಿಲ್ ಪಟ್ಟಿ, ಕಡಲೈ ಮಿಠಾಯ್ ಎಂದು ಆಯಾ ಪ್ರದೇಶದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಎಂಬಲ್ಲಿ ಇದನ್ನ ದೊಡ್ಡಮಟ್ಟದಲ್ಲಿ ಉತ್ಪಾದಿಸಲಾಗುತ್ತಿದ್ದು ಶೇಂಗಾ ಚಿಕ್ಕಿಯ ಮೂಲ ಇಲ್ಲಿಯೇ ಎಂದು ಹೇಳಲಾಗುತ್ತಿದೆ. ಕೋವಿಲ್ ಪಟ್ಟಿಯಲ್ಲಿ ಇದು ದೊಡ್ಡ ಉದ್ಯಮವಾಗಿದೆ.

Leave a Reply

Your email address will not be published. Required fields are marked *

You May Also Like

ಬಿಹಾರದಲ್ಲಿ ಶುರುವಾದ ಎರಡನೇ ಹಂತದ ಮತ ಸಮರ!

ನವದೆಹಲಿ : ಬಿಹಾರದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಎರಡನೇ ಹಂತದ ಚುನಾವಣೆ ಪ್ರಾರಂಭವಾಗಿದೆ.

‘ಶಾಲೆ ಯಾವಾಗ ಆರಂಭಿಸೋಣ? ಪಾಲಕರ ಅಭಿಪ್ರಾಯ ಕೇಳಿ’: ರಾಜ್ಯಗಳಿಗೆ ಕೇಂದ್ರದ ತರಾತುರಿಯ ಸಂದೇಶ!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿಭಾಗವು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತರಾತುರಿಯಲ್ಲಿ ಒಂದು ಪತ್ರ ಕಳಿಸಿ, 3 ದಿನದಲ್ಲಿ ವಿದ್ಯಾರ್ಥಿಗಳ ಪಾಲಕರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಯಾವಾಗ ಆರಂಭಿಸಬೇಕು ಎಂದು ಸಲಹೆ ಪಡೆಯಿರಿ ಎಂದು ತಿಳಿಸಿದೆ. ಅಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್ –ಯಾವ ತಿಂಗಳಲ್ಲಿ ಶಾಲೆ ಮರು ಆರಂಭವಾದರೆ ಒಳ್ಳೆಯದು ಎಂದು ಪಾಲಕರಿಂದ ತಿಳಿದುಕೊಂಡು, ಸರ್ಕಾರದ ಅಭಿಪ್ರಾಯ ರೂಪಿಸಿ ಕೂಡಲೇ ಕೇಂದ್ರಕ್ಕೆ ಕಳಿಸಿಕೊಡಿ ಎಂದು ತಿಳಿಸಿದೆ.

ಹಣ್ಣು ಮಾರಲು ಬಂದವರಿಗೆ ಕಲ್ಲು ತಗೊಂಡು ಓಡಿಸಿ: ಹಾವೇರಿಯಲ್ಲಿ ಡಂಗೂರ

ಕೇಳ್ರಪ್ಪೋ ಕೇಳ್ರಿ……… ಆ ಊರಿಂದ ಯಾರಾದ್ರು ಹಣ್ಣು ತರಕಾರಿ ಮಾರೋರ ಬಂದ್ರ ಕಲ್ಲು ತಗೊಂಡು ಓಡಿಸುವಂತೆ ಡಂಗೂರ.

ಗದಗ: ಕಾರ್ ಅಪಘಾತ ಮೂವರು ಶಿಕ್ಷಕರಿಗೆ ಗಂಭೀರ ಗಾಯ

ಗದಗ: ಕಾರ್ ಅಪಘಾತದಲ್ಲಿ ಮೂವರು ಶಿಕ್ಷಕರು ಗಂಭೀರ ಗಾಯಗೊಂಡ ಘಟನೆ ಗದಗ ತಾಲೂಕಿನ ನರ್ಸಾಪೂರ ಗ್ರಾಮದ…