ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಒಟ್ಟಾರೆ 959 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5 ರ ಮಾಹಿತಿಯಂತೆ ಒಟ್ಟಾರೆ 33 ಜನ ಸಾವನ್ನಪ್ಪಿದ್ದು, 451 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. ಉಳಿದ 464 ಪ್ರಕರಣಗಳಲ್ಲಿ ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. 10 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ.  

ನೆನ್ನೆಯ ಸಂಜೆ 5ಕ್ಕೆ ಹೋಲಿಸಿದಲ್ಲಿ ಇಂದು ಒಟ್ಟಾರೆ‌ 34 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ರಾಜ್ಯಾದ್ಯಂತ ಒಟ್ಟು 20700 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 121178 ಮಾದರಿಗಳ ಪೈಕಿ 959 ಮಾದರಿಗಳು ಖಚಿತಗೊಂಡಿವೆ.

ದೇಶೀಯ‌ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಗರ್ಭಿಣಿ ಸ್ತ್ರೀಯರು 10 ವರ್ಷದ ಒಳಗಿನ ಮತ್ತು ಎಂಭತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹಾಗೂ ಮಾರಣಾಂತಿಕ‌ ಖಾಯಿಲೆಯಿಂದ ಬಳಲುತ್ತಿರುವವರೆಗೆ ಹೋಮ್ ಕ್ವಾರೈಂಟೈನ್ ಅವಕಾಶ ಕಲ್ಪಿಸಲಾಗಿದೆ ಎಂದು ಸಂಜೆ ಬಿಡುಗಡೆಯಾದ ಹೆಲ್ಥ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಕುಂದ್ರಳ್ಳಿ ವಿದ್ಯಾರ್ಥಿಗಳು ಶಾಲಿಗ್ಹೋಗಾಕ್ 3ಕಿಮಿ ನಡಿಬೇಕಂತ!

ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದಾದ ನಂತರ ಇತ್ತಿಚೆಗಷ್ಟೆ ಶಾಲೆಗಳು ಆರಂಭಿಸಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ ಬಸ್ ಸೌಲಭ್ಯ ಕೊರತೆ.

ಅಡುಗೆ ಅನಿಲದ ಬೆಲೆ ಏರಿಕೆ, ಬಡವರ ಮೇಲೆ ಕೇಂದ್ರದ ಗಧಾಪ್ರಹಾರ: ಎಂ.ಎಸ್.ಹಡಪದ ಆಕ್ರೋಶ

ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಏಕಾಏಕಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರನ್ನು ತತ್ತರಿಸುವಂತೆ ಮಾಡುತ್ತಿದೆ. ಕೇಂದ್ರದ ಆಡಳಿತ ಬಡವರ ಮೇಲಿನ ಗಧಾಪ್ರಹಾರದ ಆಡಳಿತವಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.