ನವದೆಹಲಿ: ಲಾಕ್ ಡೌನ್ ಹಿನ್ನೆಲೆ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಇದೀಗ ನಾಳೆಯಿಂದ ರೈಲು ಸಂಚಾರ ಆರಂಭವಾಗಲಿದ್ದು, ರೈಲು ಸಂಚಾರಕ್ಕೆ ರೈಲ್ವೇ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಈ ಕೆಳಗಿನಂತಿವೆ.

ರೈಲ್ವೇ ಇಲಾಖೆ ವಿಧಿಸಿದ ಷರತ್ತುಗಳು

1, ರೈಲುಗಳಿಗೆ ಸಾಮಾನ್ಯ ಬೋಗಿಗಳಿರುವುದಿಲ್ಲ.

2, ನಿಲ್ದಾಣದಲ್ಲಿರುವ ಟಿಕೆಟ್‌ ಕೌಂಟರ್‌ ಗಳನ್ನು ತೆರೆಯಲಾಗಿರುವುದಿಲ್ಲ.

3, ಎಲ್ಲಾ ರೈಲು ಬೋಗಿಗಳು ಕೂಡ ಹವಾನಿಯಂತ್ರಿತವಾಗಿರುತ್ತದೆ ಮತ್ತು ನಿಯಮಿತ ನಿಲ್ದಾಣದಲ್ಲಷ್ಟೇ ನಿಲುಗಡೆ ಇದೆ.

4, ಕರೋನಾ ಲಕ್ಷಣರಹಿತ ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ.

5, ರೈಲು ಏರುವ ನಿಲ್ದಾಣದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ.

6, ಎಲ್ಲಾ ರೈಲುಗಳು ನವ ದೆಹಲಿಯಿಂದ ಹೊರಟು ದಿಬ್ರುಘಾ, ಅಗರ್ತಲ, ಹೌರ, ಪಾಟ್ನ, ಬಿಸ್ಲಾಪುರ್‌, ರಾಂಚಿ, ಭುಬನೇಶ್ವರ್‌, ಸಿಖಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾವ್ನ್‌, ಮುಂಬೈ ಸೆಂಟ್ರಲ್‌, ಅಹಮದಾಬಾದ್‌ ಮತ್ತು ಜಮ್ಮು ತಾವಿ ಸೇರಿ ದೇಶದ ಪ್ರಮುಖ 15 ನಗರಗಳಿಗೆ ತಲುಪಲಿದೆ.

7, ಪ್ರಯಾಣಿಕರಿಗಷ್ಟೇ ನಿಲ್ದಾಣದೊಳಕ್ಕೆ ಪ್ರವೇಶ.

8, ಪ್ರಯಾಣಿಕರು ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹತ್ತುವ ಮತ್ತು ಇಳಿಯುವ ನಿಲ್ದಾಣದಲ್ಲಿ ಹಾಗೂ ಕೋಚ್‌ಗಳಲ್ಲಿ ಸ್ಯಾನಿಟೈಸರ್‌ ನೀಡಲಾಗುತ್ತದೆ. ಕಡ್ಡಾಯವಾಗಿ ಬಳಸಬೇಕು.

9, ತತ್ಕಾಲ್‌ ಟಿಕೆಟ್‌ ಪಡೆದ ಪ್ರಯಾಣಿಕರಿಗೆ ಅವಕಾಶವಿಲ್ಲ.

10, ರೈಲಿನಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಅದಕ್ಕೆ ಹೆಚ್ಚುವರಿ ಹಣ ನೀಡಬೇಕಿದೆ.

11, ಇಪ್ಪತ್ನಾಲ್ಕು ಗಂಟೆಗೂ ಮುಂಚಿತವಾಗಿಯೇ ಟಿಕೆಟ್‌ ಕ್ಯಾನ್ಸಲ್‌ ಮಾಡಿಕೊಳ್ಳಲು ಅವಕಾಶ.

12, ಯಾವುದೇ ಆರ್‌ಎಸಿ ಅಥವಾ ವೈಟಿಂಗ್‌ ಲಿಸ್ಟ್‌ ಟಿಕೆಟ್‌ ನೀಡಲಾಗುವುದಿಲ್ಲ.

13, ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಲ್ಲಿ ಶೇ.50ರಷ್ಟು ಮಾತ್ರ ಮರುಪಾವತಿ ಮಾಡಲಾಗುವುದು.

14, ಪ್ರಯಾಣದ ವೇಳೆ ಎಲ್ಲಾ ಪ್ರಯಾಣಿಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

Leave a Reply

Your email address will not be published. Required fields are marked *

You May Also Like

ಶಿಕ್ಷಕರಿಗೆ-ಪಾಲಕರಿಗೆ ದಂಗುಬಡಿಸಿದ ಈ ಪೋರಿ

ಕೋವಿಡ್ ಸೋಮಕಿನಿಂದ ಆನ್ಲೈನ್ ಕ್ಲಾಸ್ಗಳು ಹಾಗೂ ವರ್ಕ್ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಆದರೆ, ಇಲ್ಲೊಬ್ಬಳು ಬಾಲಕಿ ಶಿಕ್ಷಕರನ್ನು ಮತ್ತು ಪೋಷಕರನ್ನು ಮೂರ್ಖನ್ನಾಗಿ ಮಾಡಿದ್ದಾಳೆ.

ದೇಶದಲ್ಲಿ ಒಂದೇ ದಿನ 7,466 ಹೊಸ ಕೊರೊನಾ ಪ್ರಕರಣ: 175 ಸಾವು

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 7,466 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ…

ಲಾರಿ ಬೈಕ್ ಅಪಘಾತ ವ್ಯಕ್ತಿ ಸಾವು ಅಪಘಾತಕ್ಕೆ ಪೋಲಿಸ್ ಪೆದೆ ಕಾರಣ, ಗ್ರಾಮಸ್ಥರ ಆರೋಪ

ಮುಳಗುಂದ : ಲಕ್ಷ್ಮೇಶ್ವರ ಕಡೆಯಿಂದ ಮುಳಗುಂದಕ್ಕೆ ಬರುತ್ತಿದ್ದ ಮರಳು ತುಂಬಿದ್ದ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ…