ಬೆಂಗಳೂರು: ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ  ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.

ಗೋವಿಂದಪ್ಪ ಅವರು ಆರ್ ಬಿಐ ನಿವೃತ್ತ ನೌಕರನಾಗಿದ್ದು, ಮಗ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆ – ತಾಯಿಯನ್ನು ಕೊಲೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ನವೀನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕರೆಂಟ್ ಬಳಕೆ ಬಗ್ಗೆ ಜನಜಾಗೃತಿ- ಸೌರಶಕ್ತಿ ಬಳಕೆಗೆ ಮುಂದಾಗಿ

ಆಲಮಟ್ಟಿ : ಇಡೀ ಪ್ರಪಂಚದ ಉಸಿರೇ ಕರೆಂಟ್ ಇಂಧನಗಳ ಮೇಲೆ ನಿಂತಿದೆ.ಆ ದಿಸೆಯಲ್ಲಿ ವಿದ್ಯುತ್ತಿನ ಹಿತಮಿತ…

ಗದಗ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೇ ಜಯಂತಿಯ ಆಚರಣೆ

ಗದಗ:PPG SC/ST ವಸತಿ ನಿಲಯ ಗದಗದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ…

ಜೂನ್ 15 ರಿಂದ ಶೈಕ್ಷಣಿಕ ವರ್ಷ ಆರಂಭ

ಬೆಂಗಳೂರು: ಶಾಲೆಗಳಿಗೆ ರಜೆ ಮುಗಿದು ಇನ್ನೇನು ಶಾಲೆಗಳು ಆರಂಭವಾಗುವಷ್ಟರಲ್ಲಿ ಮತ್ತೆ ಸರ್ಕಾರ ಜೂನ್ 14 ರವರೆಗೆ ಬೇಸಿಗೆ ರಜೆ ವಿಸ್ತರಿಸಿದೆ. ಆದರೆ ಜೂನ್ 15 ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇನ್ನು,ಪ್ರಾಥಮಿಕ ಶಾಲೆಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಗರ್ಭಿಣಿಯರನ್ನು ಬಿಸಿಲಿನಲ್ಲಿಯೇ ಕಾದು ಕುಳಿತುಕೊಳ್ಳುವಂತೆ ಮಾಡಿದ ಆಸ್ಪತ್ರೆ ಸಿಬ್ಬಂದಿ!

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದ ಗರ್ಭಿಣಿಯರು ಕಾದು ಕಾದು ಸುಸ್ತಾದ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.