ಆಲಮಟ್ಟಿ : ಇಡೀ ಪ್ರಪಂಚದ ಉಸಿರೇ ಕರೆಂಟ್ ಇಂಧನಗಳ ಮೇಲೆ ನಿಂತಿದೆ.ಆ ದಿಸೆಯಲ್ಲಿ ವಿದ್ಯುತ್ತಿನ ಹಿತಮಿತ ಬಳಿಕೆವಾಗಬೇಕು. ವಿದ್ಯುತ್ ಎನಜಿ೯ಯಿಂದಲೇ ದೇಶದ ಪ್ರಗತಿ, ಅಭಿವೃದ್ಧಿ ಸಾಗುತ್ತಿದೆ ಎಂದು ಧಾರವಾಡದ ಕನಾ೯ಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಅಸಿಸ್ಟೆಂಟ್ ಇಂಜನಿಯರ್ ಶ್ರೀಮತಿ ಸವಿತಾ ಮೇಟಿ ನುಡಿದರು.
ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಶನಿವಾರ ಸರಕಾರಿ ಸ್ವಾಮ್ಯದ ಕೆ.ಆರ್.ಇ.ಡಿ.ಎಲ್.ಧಾರವಾಡ ಇವರ ವತಿಯಿಂದ ಹಮ್ಮಿಕೊಂಡಿದ್ದ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.

ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ನಡೆದ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆ ಉಪನ್ಯಾಸ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ, ಚಿತ್ರಕಲಾ ಸ್ಪಧಾ೯ ವಿಜೇತರಿಗೆ ಪ್ರಶಸ್ತಿ ಪತ್ರ,ಬಹುಮಾನ ವಿತರಿಸಲಾಯಿತು.


ನವೀಕರಿಸಬಹುದಾದ ವಿದ್ಯುತ್ ಸೌರಶಕ್ತಿ,ಸಂಪನ್ಮೂಲಗಳಿಗೆ ಆದ್ಯತಾ ಭಾವ ತೋರಿ ಉತ್ತೇಜನ ನೀಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಕಲ್ಲಿದ್ದಲಿನ ವಿದ್ಯುತ್ ಶಾಖೋತ್ಪನ್ನ ಉತ್ಪಾದನಾ ಘಟಕಗಳು ಕ್ಷೀಣಿಸಲಿವೆ. ದೇಶಕ್ಕೆ ಆದಾಯ, ಸಂರಕ್ಷಣೆ ವೇದಾಧ್ಯಯನದೊಂದಿಗೆ ಪರಿಸರದ ಪರಿಮಳಕ್ಕೆ ಪೂರಕವಾಗಿರುವಂಥ ವಿದ್ಯುತ್ ಪೂರೈಕೆ ನಮಗೆಲ್ಲ ಬೇಕಾಗಿದೆ. ವಿದ್ಯುತ್ ಬಳಕೆ ಬಗ್ಗೆ ಎಚ್ಚರಿಕೆ ವಹಿಸಬೇಕು.ಅನವಶ್ಯಕವಾಗಿ ಕರೆಂಟ್ ಪೋಲಾಗದಂತೆ ಪ್ರತಿಯೊಬ್ಬರೂ ಗಮನ ಹರಿಸಬೇಕು.ನಿರ್ಲಕ್ಷಿಸಿದರೆ ವಿದ್ಯುತ್ ಮೀಟರ್ ಓಡುತ್ತಲೇ ಇರುತ್ತದೆ. ವಿನಾಕಾರಣ ಹೆಸ್ಕಾಂ ದವರಿಗೆ ಹಣ ಭರಿಸುವಂತಾಗುತ್ತದೆ ಎಂದರು.

ಆಲಮಟ್ಟಿಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಜರುಗಿದ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಧಾರವಾಡದ ಕೆ.ಆರ್.ಇ.ಡಿ.ಎಲ್.ದ ಎ.ಇ.ಶ್ರೀಮತಿ ಸವಿತಾ ಮೇಟಿ ಅವರನ್ನು ಸನ್ಮಾನಿಸಲಾಯಿತು.


ಸೋಲಾರ್ ಪ್ರೀತಿ ಹೆಚ್ಚಾಗಲಿ…! ಸೌರ ಚಾಲಿತ ಸೋಲಾರ್ ಬಳಕೆ ಬಗ್ಗೆ ಜನರಲ್ಲಿ ಹೆಚ್ಚು ಒಲವು,ಜಾಗೃತಿ ಮೂಡಬೇಕು. ವಿದ್ಯುತ್ ಸಂಪರ್ಕದ ಜೊತೆಗೆ ಮನೆಗಳ ಮೇಲೆ ಸೋಲಾರ್ ಅಳವಡಿಸಿಕೊಂಡರೆ ಅನುಕೂಲ. ಲಾಭವೂ ಕೂಡಾ. ಮನುಕುಲಕ್ಕೆ ಇಂದು ಸೋಲಾರ್ ಅತ್ಯುತ್ತಮ ಕೊಡುಗೆಯಾಗಿದೆ ಎಂದರು.
ವಿದ್ಯುತ್ ಉಳಿಕೆ,ಬಳಿಕೆ ಅನಿವಾರ್ಯ ಮತ್ತು ಅಗತ್ಯವೂ ಕೂಡಾ.ಆಥಿ೯ಕ,ಆರೋಗ್ಯ,ಪರಿಸರ ಉತ್ತವಾಗಿರಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಋತುಮಾನಗಳು ಕಠಿಣತೆಯಿಂದ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಹೆಚ್ಚುತ್ತಿರುವ ತಂತ್ರಜ್ಞಾನ, ಬದಲಾಗುತ್ತಿರುವ ಜೀವನ ಶೈಲಿಯೊಂದಿಗೆ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನಂತ ಇಂಧನಗಳ ಬಳಿಕೆ ಹೇರಳವಾಗಿದೆ. ಇವುಗಳಲ್ಲಿ ಅಧಿಕ ನವೀಕರಿಸಲಾಗದ ಇಂಧನಗಳಾಗಿವೆ. ಭವಿಷ್ಯದ ಪೀಳಿಗೆಗೆ ಇಂಧನವನ್ನು ಉಳಿಸಬೇಕಾಗಿದೆ. ನವೀಕರಿಸಬಹುದಾದ ಇಂಧನಗಳಿಗೆ ಒತ್ತು ನೀಡಿ ಬಳಿಸಬೇಕಾಗಿದೆ ಎಂದರು.
ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನವೀಕರಿಸಬಹುದಾದ ಇಂಧನಗಳಲ್ಲಿ ಸೌರಶಕ್ತಿ,ಗಾಳಿ,ನೀರು ಇವುಗಳಿಂದ ವಿದ್ಯುತ್ ಶಕ್ತಿಯನ್ನಾಗಿ ಉಪಖೋಗಿಸಿಕೊಂಡರೆ ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರದ ಉತ್ತಮ ಕೊಡುಗೆ ಕೊಟ್ಟಂತಾಗುತ್ತದೆ. ಅದ್ದರಿಂದ ನಾವೆಲ್ಲರೂ ನಮ್ಮನಮ್ಮ ಮನೆಗಳಲ್ಲಿ ವಿದ್ಯುತ್ ಬಳಿಸಲು,ರೈತರು ತಮ್ಮತಮ್ಮ ಹೊಲಗದ್ದೆಗಳಲ್ಲಿ ನೀರನ್ನು ಹಾಯಿಸಲು ಸೌರಶಕ್ತಿ ಬಳಕೆ ಮಾಡಿಕೊಂಡರೆ ಬಹಳಷ್ಟು ಉಪಯುಕ್ತವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಶ್ರೀಮತಿ ಸವಿತಾ ಮೇಟಿ ಹಾಗು ವಿಶೇಷ ಆಮಂತ್ರಿತ ಅತಿಥಿ ಧಾರವಾಡದ ಸಿದ್ದನಗೌಡ ನಾಗನಗೌಡರ ಅವರುಗಳನ್ನು ಸಂಸ್ಥೆ,ಶಾಲೆಯ ಪರವಾಗಿ ಶಾಲು ಹೊದಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೀತಮ್ ರಾಠೋಡ ಪ್ರಥಮ,ಶಿವಪ್ಪ ಯರಝರಿ ದ್ವೀತಿಯ, ಸೌಮ್ಯ ನಲವಡೆ ತೃತೀಯ ಸ್ಥಾನ ಪಡೆದರೆ ಚಿತ್ರಕಲಾ ಸ್ಪಧೆ೯ಯಲ್ಲಿ ವಿಜಯಲಕ್ಷ್ಮಿ ಪಾಟೀಲ ಪ್ರಥಮ, ಸಿಂಚನಾ ಆಲಮಟ್ಟಿ ದ್ವೀತಿಯ, ಜಯಶ್ರೀ ಪವಾರ ತೃತೀಯ ಸ್ಥಾನ ಪಡೆದರು. ವಿಜೇತ ಮಕ್ಕಳಿಗೆ ಕೆ.ಆರ್.ಇ.ಡಿ.ಎಲ್ ವತಿಯಿಂದ ಪ್ರಶಸ್ತಿ ಪ್ರಮಾಣ ಪತ್ರ ಹಾಗು ಎಲ್.ಇ.ಡಿ.ಬಲ್ಪ ಮತ್ತು ಟ್ಯೂಬ್ ಲೈಟ್ ಗಳನ್ನು ವಿತರಿಸಿಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಮಕ್ಕಳಿಗೆ ರುಚಿಕಟ್ಟಾದ ಧಾರವಾಡ ಪೇಡೆಗಳನ್ನು ಅತಿಥಿಗಳೇ ತಂದು ಹಂಚಿದ್ದು ವಿಶೇಷವಾಗಿತ್ತು. ರಸಪ್ರಶ್ನೆ ಕಾರ್ಯಕ್ರಮ ಮಂಗಳವಾರ ನಡೆಯಲಿದೆ.
ದೀವ್ಯಾ ಸಂಗಡಿಗರು ಪ್ರಾಥಿ೯ಸಿದರು. ಗುರುಮಾತೆ ಕವಿತಾ ಮಠದ ಸ್ವಾಗತಿಸಿದರು. ಜಿ.ಆರ್.ಜಾಧವ ನಿರೂಪಿಸಿದರು. ಗುರುಮಾತೆ ಪಲ್ಲವಿ ಸಜ್ಜನ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಕೋಲಾರದ ಸುತ್ತಮುತ್ತ ಆವರಿಸಿದೆ ಕೊರೊನಾ!

ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದಾಗಿ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದಾಗಿ ಜಿಲ್ಲೆಯ ಜನರದಲ್ಲಿ ಆತಂಕ ಮನೆ ಮಾಡಿದ್ದು, ಇಲ್ಲಿ ಕೂಡ ಕೊರೊನಾ ಭಯ ಕಾಡುತ್ತಿದೆ.

ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಅವಶ್ಯವಿದೆ: ಮೋಹನ ಮಾಳಿಶೆಟ್ಟಿ

ಪಂಚಮಸಾಲಿ 2ಎ ಮಿಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಫೆ.21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮೋಹನ ಮಾಳಿಶೆಟ್ಟಿ ಹೇಳಿದರು.

ಗಜೇಂದ್ರಗಡ: ಹಣ ದೋಚಿ ಪರಾರಿಯಾದವರ ಬಂಧನ

ಗಜೇಂದ್ರಗಡ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದವರನ್ನು ಯಾಮಾರಿಸಿ ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದು ರಾಜ್ಯದಲ್ಲಿ 75 ಕೊರೋನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು..?

ಇಂದು ರಾಜ್ಯದಲ್ಲಿ 75 ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕು ತಗುಲಿದವರ ಸಂಖ್ಯೆ 2493 ಆಗಿದೆ.