ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಕ್ಯಾತಿ ತೆಗೆದಿದ್ದಾರೆ.
ಪರಿಣಾಮವಾಗಿ ಭಾರತೀಯ ಸೈನಿಕರಿಗೆ ಗಾಯಗಳಾಗಿವೆ. ಸ್ವತಃ ಭಾರತೀಯ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಉಭಯ ಪಕ್ಷಗಳ ಯೋಧರ ನಡುವೆ ಘರ್ಷಣೆಗಳಾದ ಪರಿಣಾಮ ಸುಮಾರು 150 ಯೋಧರ ನಡುವೆ ಘರ್ಷಣೆ ಉಂಟಾಗಿದೆ.
ಇದಕ್ಕೂ ಮುನ್ನ ಸಿಕ್ಕಿಂ ನ ನಾಕು ಲಾ ಬಳಿಯೂ ಯೋಧರ ನಡುವೆ ಘರ್ಷಣೆಗಳುಂಟಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.