ಬೆಂಗಳೂರು : ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು. ಅಲ್ಲದೇ, ಇಂದು ಆತನ ಬಿಡುಗಡೆ ಕುರಿತು ಕೂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಆತ ಮಧ್ಯರಾತ್ರಿ ಏಕಾಏಕಿ ಹೊಂಗಸಂದ್ರದ ತನ್ನ ಮನೆಯ ಮುಂದೆ ಕಂಡಿದ್ದಾನೆ. ಅದೂ ಆಸ್ಪತ್ರೆಯಲ್ಲಿ ಹಾಕಿರುವ ಬಟ್ಟೆಯ ಸಮೇತ ಆತ ಕಾಣಿಸಿಕೊಂಡಿದ್ದಾನೆ. ಆತನನ್ನು ಕಂಡ ಕೂಡಲೇ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ನಂತರ ಆತನನ್ನು ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಯಿತು.

ಆಸ್ಪತ್ರೆಯ ಸಿಬ್ಬಂದಿ ಮಾತ್ರ ಸದ್ಯ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಉನ್ನತ ಅಧಿಕಾರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಆ ವ್ಯಕ್ತಿಯ ಡಿಸ್ಚಾರ್ಜ್ ಬಗ್ಗೆ ಮಾಹಿತಿ ಕೇಳಿದೆ. ಇದರಿಂದಾಗಿ ಹಲವು ಅನುಮಾನಗಳು ದಾರಿ ಮಾಡಿ ಕೊಡುತ್ತಿವೆ.

ನಿಯಮದಂತೆ ಒಬ್ಬ ವ್ಯಕ್ತಿ ಗುಣಮುಖನಾದರೆ, ಆತನನ್ನು ಆತನ ಮನೆಗೆ ವೈದ್ಯಕೀಯ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಮನೆಗೆ ತಲುಪಿಸಬೇಕು. ಅಲ್ಲದೇ, ಕಡ್ಡಾಯವಾಗಿ ಆ ವ್ಯಕ್ತಿಗೆ 14 ದಿನಗಳ ಕಾಲ ಕ್ವಾರಂಟೈನ್ ವಿಧಿಸಬೇಕು. ಸ್ಥಳೀಯರ ಪ್ರಕಾರ ಹೊಂಗಸಂದ್ರದಲ್ಲಿ ವಾಸವಿರುವ ಈ ವ್ಯಕ್ತಿಗೆ ಸ್ವಂತ ಮನೆಯಿಲ್ಲ.  ಹೀಗಾಗಿ ಆತನನ್ನು ಇಲ್ಲಿಗೆ ಬಿಬಿಎಂಪಿ ಹಾಗೂ ವೈದ್ಯಕೀಯ ಸಿಬ್ಬಂದಿ ಕರೆದುಕೊಂಡು ಬರಲೇಬಾರದು. ಅಲ್ಲದೇ, ಆ ವ್ಯಕ್ತಿ ಐಸಿಯುನಲ್ಲಿನ ಬಟ್ಟೆಯನ್ನೇ ತೊಟ್ಟು ಬಂದಿದ್ದಾನೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಮಾರ್ಗಸೂಚಿ ಪಾಲಿಸಲು ಕೇಂದ್ರದಿಂದ ರಾಜ್ಯಗಳಿಗೆ ತಾಕೀತು!

ದೇಶದಲ್ಲಿ ಕೊರೊನಾ ಸೋಂಕು ರೋಗ ನಿಯಂತ್ರಿಸಲು ಎಲ್ಲ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಸರ್ಕಾರ, ರಾಜ್ಯಗಳಿಗೆ ಮತ್ತೆ ಸೂಚಿಸಿದೆ.

ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ

ಗದಗ : ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷದ ಮೇಲ್ಪಟ್ಟ ಸಹ…

ಅಪಘಾತ – 23 ವಲಸೆ ಕಾರ್ಮಿಕರ ಸಾವು!

ಲಕ್ನೋ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಘಟನೆಗಳು ಇನ್ನೂ ನಿಂತಿಲ್ಲ. ಎರಡು…

ನಾಳೆಯಿಂದ ಹಜರತ್ ಮಾಬೂಬ್ ಸುಬಾನಿ ದರ್ಗಾ

ಉತ್ತರಪ್ರಭ ಸುದ್ದಿ, ಆಲಮಟ್ಟಿ: ಪಟ್ಟಣದ ರೇಲ್ವೆ ಸ್ಟೇಷನ್ ರಸ್ತೆಯ ಹಜರತ್ ಮಾಬೂಸುಭಾನಿ ದರ್ಗಾ ಗಂಧ ಹಾಗೂ…