ಪೇಶೆಂಟ್ ನಂ.419 ಸೃಷ್ಟಿಸಿದ ಅವಾಂತರಕ್ಕೆ ಇಡೀ ರಾಜ್ಯವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ?

ಬೆಂಗಳೂರು : ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು. ಅಲ್ಲದೇ, ಇಂದು ಆತನ ಬಿಡುಗಡೆ ಕುರಿತು ಕೂಡ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಆತ ಮಧ್ಯರಾತ್ರಿ ಏಕಾಏಕಿ ಹೊಂಗಸಂದ್ರದ ತನ್ನ ಮನೆಯ ಮುಂದೆ ಕಂಡಿದ್ದಾನೆ. ಅದೂ ಆಸ್ಪತ್ರೆಯಲ್ಲಿ ಹಾಕಿರುವ ಬಟ್ಟೆಯ ಸಮೇತ ಆತ ಕಾಣಿಸಿಕೊಂಡಿದ್ದಾನೆ. ಆತನನ್ನು ಕಂಡ ಕೂಡಲೇ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ನಂತರ ಆತನನ್ನು ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಯಿತು.

ಆಸ್ಪತ್ರೆಯ ಸಿಬ್ಬಂದಿ ಮಾತ್ರ ಸದ್ಯ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಉನ್ನತ ಅಧಿಕಾರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಆ ವ್ಯಕ್ತಿಯ ಡಿಸ್ಚಾರ್ಜ್ ಬಗ್ಗೆ ಮಾಹಿತಿ ಕೇಳಿದೆ. ಇದರಿಂದಾಗಿ ಹಲವು ಅನುಮಾನಗಳು ದಾರಿ ಮಾಡಿ ಕೊಡುತ್ತಿವೆ.

ನಿಯಮದಂತೆ ಒಬ್ಬ ವ್ಯಕ್ತಿ ಗುಣಮುಖನಾದರೆ, ಆತನನ್ನು ಆತನ ಮನೆಗೆ ವೈದ್ಯಕೀಯ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಮನೆಗೆ ತಲುಪಿಸಬೇಕು. ಅಲ್ಲದೇ, ಕಡ್ಡಾಯವಾಗಿ ಆ ವ್ಯಕ್ತಿಗೆ 14 ದಿನಗಳ ಕಾಲ ಕ್ವಾರಂಟೈನ್ ವಿಧಿಸಬೇಕು. ಸ್ಥಳೀಯರ ಪ್ರಕಾರ ಹೊಂಗಸಂದ್ರದಲ್ಲಿ ವಾಸವಿರುವ ಈ ವ್ಯಕ್ತಿಗೆ ಸ್ವಂತ ಮನೆಯಿಲ್ಲ.  ಹೀಗಾಗಿ ಆತನನ್ನು ಇಲ್ಲಿಗೆ ಬಿಬಿಎಂಪಿ ಹಾಗೂ ವೈದ್ಯಕೀಯ ಸಿಬ್ಬಂದಿ ಕರೆದುಕೊಂಡು ಬರಲೇಬಾರದು. ಅಲ್ಲದೇ, ಆ ವ್ಯಕ್ತಿ ಐಸಿಯುನಲ್ಲಿನ ಬಟ್ಟೆಯನ್ನೇ ತೊಟ್ಟು ಬಂದಿದ್ದಾನೆ. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Exit mobile version