ನವದೆಹಲಿ: ದೇಶದಲ್ಲಿ ಕೊರೊನಾ ಚೇತರಿಕೆ ಕಾಣುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ದೇಶದ 216 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. 42 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ಯಾವುದೇ ಹೊಸ ಕೊರೊನಾ ವರದಿಯಾಗಿಲ್ಲ ಎಂದು ಹೇಳಿದ್ದಾರೆ.

ಕಳೆದ 21 ದಿನಗಳಿಂದ ದೇಶದ 28 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕಳೆದ 14 ದಿನಗಳಿಂದ 36 ಜಿಲ್ಲೆಗಳಲ್ಲಿ ಮತ್ತು ಕಳೆದ ಏಳು ದಿನಗಳಿಂದ 46 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ. 29.36ರಷ್ಟು ಇದೆ ಎಂದರು.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,390 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 56,342 ಏರಿಕೆಯಾಗಿದೆ.

Leave a Reply

Your email address will not be published. Required fields are marked *

You May Also Like

ಪಾಕ್ ಪರ ಘೋಷಣೆ ಪ್ರಕರಣ: ಅಮೂಲ್ಯ ಲಿಯೋನಾ ಬಿಡುಗಡೆ

ಬೆಂಗಳೂರು: ಎನ್ ಆರ್ ಸಿ, ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ…

ಸಿಡಿಲು: ಮುಂಡವಾಡದಲ್ಲಿ ಬಣವಿಗೆ ಬೆಂಕಿ..!

ಗದಗ: ಬಣವಿಗೆ ಸಿಡಿಲು ಬಡಿದ ಪರಿಣಾಮ ಮೂರು ಬಣವಿಗಳು ಸಂಪೂರ್ಣ ಭಸ್ಮಗೊಂಡ ಘಟನೆ ಗದಗ ಜಿಲ್ಲೆಯ…

ಕೊರೊನಾ ಮುಕ್ತಿ ಹೊಂದುವ ಕಾಲ ಬರಲಿದೆ…ಹೀಗಂತ ಈ ವೈದ್ಯ ಹೇಳಿದ್ದೇಕೆ?

ದುಬೈ : ಆಗತಾನೆ ಹುಟ್ಟಿದ ಮಗು ವೈದ್ಯರ ಮುಖದಲ್ಲಿದ್ದ ಮಾಸ್ಕ್ ಕಿತ್ತು ಹಾಕಿದೆ. ಈ ಫೋಟೋ ಸೆರೆ ಹಿಡಿದ ವೈದ್ಯರು, ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ತೊಲಗುವ ಸಂದೇಶ ಇದು ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ನೌಕರರಿಗೆ ಶಾಕಿಂಗ್ ನ್ಯೂಸ್: ದಕ್ಷತೆ ಆಧರಿಸಿ ವೇತನ ಕಡಿತ

ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ.