ನ್ಯೂಯಾರ್ಕ್ : ಅಮೆರಿಕದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸಂದರ್ಭದಲ್ಲಿ ಹಾಜರಿದ್ದರು. ಅವರ ಸಮ್ಮುಖದಲ್ಲಿಯೇ ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮ್ ಭಟ್ ಅವರು ವೇದ ಮಂತ್ರ ಪಠಣ, ಯಜುರ್ವೇದ ಮಂತ್ರ ಪಠಣ ನಡೆಸಿದ್ದಾರೆ.
ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ವೇದ ಮಂತ್ರ ಪಠಣ ಅತೀ ಮುಖ್ಯ ಎಂದು ಹೇಳಲಾಗಿದೆ. ಅಲ್ಲದೇ, ದೇಶದ ಶಾಂತಿಗಾಗಿ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. ಸಾಮಾಜಿಕ ಅಂತರ ಕೂಡ ಪಾಲಿಸಲಾಯಿತು.