ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎಂಬ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅಲ್ಲದೇ, ಶೀಘ್ರದಲ್ಲಿಯೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಲಿದ್ದು, ಹೆಚ್ಚುವರಿ ಶೈಕ್ಷಣಿಕ ಚಟುವಟಿಕೆಗಳು ಇರುವುದಿಲ್ಲ. ಸೀಮಿತ ಅವಧಿಯಲ್ಲಿ ಯಾವ ಯಾವ ಚಟುವಟಿಕೆಗಳನ್ನು ಕೈಗೊಳ್ಳುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸುರೇಶ್ ಕುಮಾರ್, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದ ಕೂಡಲೇ ಸಿಇಟಿ ಪರೀಕ್ಷೆಗಳನ್ನು ನಡೆಸಿ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

1 comment
Leave a Reply

Your email address will not be published. Required fields are marked *

You May Also Like

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋದಂತೆ ಸರ್ಕಾರ ಬಿಲ್ ಕಟ್ಟಬೇಕಂತೆ!! ಇದು ಜನಪ್ರತಿನಿಧಿಗಳ ಕೊರೊನಾ ಕಥೆ!!

ಬೆಂಗಳೂರು : ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಕಷ್ಟಪಡುತ್ತಿವೆ. ಇದರ ಮಧ್ಯೆಯೇ ಸೋಂಕಿಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರ ಹೊರೆಯೂ ಸರ್ಕಾರದ ಮೇಲೆ ಬಿದ್ದಿದೆ.

ಹೊರ ರಾಜ್ಯಗಳಿಗೆ ಹೋಗಲು -ಬುರವಿಕೆಗೆ ಅನುಮತಿ

ಹೊರ ರಾಜ್ಯಗಳಲ್ಲಿ ಸಿಲುಕಿರುವ ಅಥವಾ ಸ್ವಂತ ರಾಜ್ಯಕ್ಕೆ ಸ್ಥಳಕ್ಕೆ ಹೋಗಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು,ಪ್ರವಾಸಿಗರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರಾಗಿ ದೇವರಾಜ ಉಳೇನೂರು ಆಯ್ಕೆ

ಉತ್ತರಪ್ರಭ ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ…

ಪ್ರಾಣಿಗಳ ಹಸಿವಿಗೆ ಮಿಡಿದ ಪೊಲೀಸರು

ಲಾಕ್ ಡೌನ್ ನಿಂದಾಗಿ ಮೂಕ ಪ್ರಾಣಿಗಳ ಮೂಕ ವೇದನೆ ಯಾರಿಗೆ ಅರ್ಥವಾಗಬೇಕು ಹೇಳಿ? ಆದರೆ ಪೊಲೀಸರು ಪ್ರಾಣಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಃ ಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.