ಆತ್ಮಿಯರೇ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ದಾವಣಗೆರೆಯ ಟಿ.ಆರ್.ಹೇಮಂತ್ ಕುಮಾರ್ ಅವರು. ನ್ಯಾಯಾಂಗ ಇಲಾಖೆಯ ಉದ್ಯೋಗಿಯಾಗಿರುವ ಹೇಮಂತಕುಮಾರ್ ಅವರು ನೆಲ, ಜಲ ಸಂರಕ್ಷಿಸುವ ಮೂಲಕ ಇರುವ ಒಂದೇ ಜನ್ಮವನ್ನು ಸಾರ್ಥಕಗೊಳಿಸುವ ಕುರಿತು ಜೊತೆಗೆ ಸಾರ್ಥಕ ಬದುಕನ್ನು ಹುಡುಕುವ ಸಂದೇಶ ನೀಡಿದ್ದಾರೆ. ನೆಪವಾದ ಕೊರೋನಾ ದಿಂದ ನಾವು ತಿಳಿಯಬೇಕಾದದ್ದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಸಾರ್ಥಕ ಜನ್ಮ

ಇರುವುದೊಂದೇ ಜನ್ಮ ಸಾರ್ಥಕವಾಗಲಿ

ಸ್ವಾರ್ಥತೆಯ ಕರ್ಮ ದೂರವಾಗಲಿ

ನೆಲ, ಜಲ, ಗಾಳಿಯಷ್ಟೇ ಅಲ್ಲ ಬದುಕು

ಅದರಾಚೆಯೂ ಇದೆ ಸ್ವಲ್ಪ ಹುಡುಕು !

ಕೊರೊನೆಯದು ಜಾಡ್ಯವಲ್ಲ, ನೆಪವಷ್ಟೇ!

ನೇಪಥ್ಯ ದಾರಿಗೆ ಎಚ್ಚರಿಕೆಯ ಪರಾಕಾಷ್ಠೆ

ಶಿಕ್ಷಿಸುತ್ತಿಲ್ಲ ಏಕದು ಪ್ರಾಣಿ ಪಕ್ಷಿಗಳನು?

ಕಕ್ಷೆಗಳ ಮೀರದ ನಿರುಪದ್ರವಿಗಳನು

ನೀನೇ ತೋಡಿದ ಖೆಡ್ಡಾ ಮುಚ್ಚಿದೆ ನಿನ್ನನೇ;

ಸೆಡ್ಡು ಹೊಡೆದು ಬೀಗುತಿದೆ ಸುಖಾಸುಮ್ಮನೆ

ಪದೇ ಪದೇ ಕೈಯಿ, ಬಾಯಿ ತೊಳೆದರಾಯಿತೆ?

ಮನಸು ಆಗಲಿ ಸ್ವಚ್ಚ, ಪಾಲಿಸುತ ಭಾವೈಕ್ಯತೆ

ಭಕ್ಷಿಸುತಿರೆ ನೀ ಎಲ್ಲವ ರಕ್ಷಕನ ರೂಪದಿ

ಆವರಿಸಿದೆ ಕರ್ಮ ಫಲ ಕೊರೋನ ತೆರದಿ

ದುಷ್ಟ ಬುದ್ಧಿ ಬಿಡದೇ ನೀ ಮನೆಯಲ್ಲೇ ಇದ್ದರೂ

ಕಷ್ಟವಂತೂ ಅಳಿಯದು; ನಷ್ಟವೆಂದೂ ತಪ್ಪದು;

ತಪ್ಪಲ್ಲ ಈ ದೈಹಿಕ, ಸಾಮಾಜಿಕ ಅಂತರ

ಸೊಪ್ಪು ಹಾಕದಿರೆ ಹಿರಿಯರ ಆದರ್ಶಗಳಿಗೆ

ಉಪ್ಪು ತಿಂದರೂ ನೀರು ಸಿಗದು ನಂತರ

ತೆಪ್ಪಗಾಗಿಸುವುದು ನಿನ್ನ , ಕೊರೊನೆಯ ಬೆಂತರ

ಜಾಗರೂಕನಾಗು; ಆಗು ಹೋಗುಗಳ ನೆನೆಯುತ

ಸಾಗಿಸು ಬದುಕ; ದಾನ ಧರ್ಮಗಳ ಮಾಡುತ

ಭೋಗ ಲಾಲಸೆಗಳಿಗೆ ಮನಕೊಡುವ ಬದಲು

ನಾಗರೀಕನಾಗು ನೀ ಎಲ್ಲಕ್ಕಿಂತ ಮೊದಲು

ಟಿ.ಆರ್.ಹೇಮಂತ್ ಕುಮಾರ್, ದಾವಣಗೆರೆ

1 comment
  1. ಸುಂದರವಾಗಿ ಮೂಡಿ ಬರುತ್ತಿದೆ ನಿಮ್ಮ ಪತ್ರಿಕೆ.
    ಕೊರೊನಾ ಗೀತೆ ಸುಂದರವಾಗಿದೆ.

Leave a Reply

Your email address will not be published. Required fields are marked *

You May Also Like

ರಾಜ ಕಾಲುವೆ ಮತ್ತು ಚರಂಡಿ ಸ್ವಚ್ಛತೆಯ ಕಾರ್ಯದ ಕ್ರಿಯಾ ಯೋಜನೆ ಪ್ರಕಟ

ಗದಗ: ಗದಗ ಬೆಟಗೇರಿ ನಗರದ ವಿವಿಧ ವಾರ್ಡುಗಳಲ್ಲಿರುವ ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿ ಹರಿಯುವ ನಾಲಾ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಮುಂಜಾಗೃತಾ ಕ್ರಮವಾಗಿ ಆಡಳಿತಾಧಿಕಾರಿಗಳ ನಿರ್ದೇಶನದಂತೆ ಜೂನ್ 3 ರಂದು ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಆಯಾ ವಾರ್ಡುಗಳ ಸೂಪರ್‌ವೈಸರ್‌ಗಳ ಸಭೆ ಕರೆದು ಸಭೆಯಲ್ಲಿ ನಗರದ ಮುಖ್ಯ ನಾಲಾಗಳು ದೊಡ್ಡ ಚರಂಡಿಗಳು ಮತ್ತು ಮುಖ್ಯ ರಸ್ತೆಯ ಚರಂಡಿಗಳು ಹಾಗೂ ವಿವಿಧ ವಾರ್ಡಗಳಲ್ಲಿ ಮಳೆಯಿಂದ ತುಂಬಿ ಹರಿಯುವ ಚರಂಡಿಗಳನ್ನು ಸ್ವಚ್ಛತೆ ಮಾಡಿಸುವ ಕುರಿತು ಚರ್ಚಿಸಲಾಯಿತು.

ಗದಗ ಜಿಲ್ಲೆಯಲ್ಲಿ ಒಂದೇ ದಿನ 105 ಬೈಕ್ ಸೀಜ್: 71 ಕೇಸ್ ದಾಖಲು

ಗದಗ: ಜಿಲ್ಲೆಯಾದ್ಯಂತ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದಾಗ್ಯೂ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 105 ವಾಹನಗಳನ್ನು ಸೀಜ್ ಮಾಡಿ, ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಯತೀಶ್ ಎನ್ ತಿಳಿಸಿದ್ದಾರೆ.

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ ದಾವಣಗೆರೆ : ಮದ್ಯ ಪ್ರಿಯರ ಮನವಿಯಂತೆ ನೀನ್ನೆಯಿಂದ ಬಾರ್ ಗಳು…

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..