ಗದಗ: ನಮ್ಮ ಭಾರತ ದೇಶದ ಸಂಸ್ಕಾರ ಸಂಸ್ಕೃತಿಯೇ ವೈರಸ್ ಕಾಟ ಕಡಿಮೆಯಾಗಲು ಕಾರಣವಾಗಿದೆ.
ಆದರೆ ಇಂದು ಕಲಿತವರಿಂದ ಕೆಲ ಆಚರಣೆ ಗಾಳಿಗೆ ತೂರಲಾಗಿದೆ. ಹೀಗಾಗಿ ವೈರಸ್ ಕಾಟದಿಂದ ಸಾಕಷ್ಟು ಜನರು ಸಂಕಷ್ಟು ಎದುರಿಸುವಂತಾಗಿದೆ. ಇಂಥಹ ಸಂಕಷ್ಟ ಸಮಯದಲ್ಲಿ ಎಸ್‌.ಎಸ್..ಪಾಟೀಲ್ ಅಭಿಮಾನಿ ಬಳಗದಿಂದ ಮುಂಡರಗಿ ತಾಲೂಕಿನ ಎಲ್ಲ ಮನೆಗಳಿಗೆ ರೇಷನ್ ಹಾಗೂ ತರಕಾರಿ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಗದುಗಿನ ಜಗದ್ಗುರು ತೋಂಟದ ಸಿದ್ಧರಾಮಶ್ರೀಗಳು ಹೇಳಿದರು.
ಅವರು ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆ ಆಶ್ರಯದಲ್ಲಿ ಮುಂಡರಗಿ ತಾಲೂಕಿನ ಎಲ್ಲ ಮನೆಗಳಿಗೆ ರೇಷನ್ ಹಾಗೂ ತರಕಾರಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ದುಡಿಯುವ ವರ್ಗ ತೀವ್ರ ಸಂಕಷ್ಟಕ್ಕೀಡಾಗಿದೆ.
ಮಾನವೀಯತೆಯನ್ನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮವಾಗಿದ್ದು ಇಂಥ ಸಂದಿಗ್ಧತೆಯಲ್ಲಿ ಜಾತಿ,ಮಥ,ಪಂಥ ಮೀರಿ ಮಾನವೀಯತೆಯನ್ನು ಮೆರೆಯಬೇಕಾದ ಅವಶ್ಯಕತೆ ಇದೆ. ಇಂಥ ಸಂಕಷ್ಟದಲ್ಲೂ ಸಾರಾಯಿ ಅಂಗಡಿ ಪುನ: ಆರಂಭಿಸುವ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿದರು.
ಮದ್ಯ ಮಾರಾಟದಿಂದ ಸರ್ಕಾರಕ್ಕೆ ಎಷ್ಟು ಲಾಭ ಎನ್ನುವದಕ್ಕಿಂತ ಅದರಂದಾಗುವ ಪರಿಣಾಮಗಳಿಗಾಗಿ ಮಾಡುವ ಖರ್ಚಿನ ಬಗ್ಗೆ ಯೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಇನ್ನಾದರೂ ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ‌. ಗಾಂಧಿ ಪ್ರದೇಶದಿಂದ ಬಂದ ಪ್ರಧಾನಿ ಮೋದಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದ್ರು.
ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ಮಾತನಾಡಿ ಕೊರೋನಾದಿಂದಾಗಿ ಕಷ್ಟದಲ್ಲಿರುವವರಿಗೆ ಪರಿಹಾರ ಸಿಗಲಿಲ್ಲ.
ಪಕ್ಷ, ಜಾತಿ ನೋಡಿ ಕಿಟ್ ವಿತರಿಸುವಂತಹ ಘಟನೆಗಳು ನಡೆದಿವೆ. ಹೀಗಾಗಿ ತಾಲೂಕಿನ ಜನರ ಋಣತೀರಿಸಲು ನಮಗೆ ಸಣ್ಣ ಅವಕಾಶ ಸಿಕ್ಕಂತಾಗಿದೆ ಎಂದರು.
ಈಗಾಗಲೇ ಕೊರೋನಾ ವಾರಿಯರ್ಸ್ ಗೆ 4000 ಲೀಟರ್ ಹ್ಯಾಂಡ್ ಸೈನ್ಯಾಟೇಸರ್ ವಿತರಣೆ ಮಾಡಲಾಗಿದ್ದು ಕೊರೋನಾ ಕಾಲದಲ್ಲೂ ಮಾರುಕಟ್ಟೆ ಆರಂಭಿಸಿ ರೈತರಿಗೆ ಉಪಹಾರ ವ್ಯವಸ್ಥೆ ಮಾಡಿ ಮಾರುಕಟ್ಟೆ ಆರಂಭಿಸಿದ್ದೇವೆ.
ಜೊತೆಗೆ ತಾಲೂಕಿನ ರೈತರಿಂದ ಅವರು ಬೆಳೆದ ತರಕಾರಿ ಖರೀದಿಸಿ ಆಹಾರ ಸಾಮಾಗ್ರಿಗಳ ಕಿಟ್ ಜೊತೆಗೆ ತರಕಾರಿ ವಿತರಿಸಲಾಗಿದೆ.
ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ 1000 ಪ್ರೋತ್ಸಾಹದಾಕವಾಗಿ ಅಬನಿಮಾನಿ ಬಳಗದಿಂದ ನೀಡಲಾಗುತ್ತಿದೆ ಎಂದರು.
ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ ತಾಲೂಕಿನ ಜನರಿಗೆ ಕಿಟ್ ವಿತರಿಸುವ ಮೂಲಕ ದಾಸೋಕ ಕಲ್ಪನೆಯನ್ನು ಎಸ್.ಎಸ್.ಪಾಟೀಲ್ ಅಭಿಮಾನಿ ಬಳಗದಿಂದ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ್, ಮಾಜಿ ಸಚಿವ ಎಸ್.ಎಸ್.ಪಾಟೀಲ್ ಮಾತನಾಡಿದರು.
ಈ ವೇಳೆ ಮಾಜಿ ಶಾಸಕ ಡಿ.ಆರ್.ಪಾಟೀಲ್, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ ಪಾಟೀಲ್, ಮಾಜಿ ಶಾಸಕರಾದ ಜಿ.ಎಸ್.ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಟಿ.ಈಶ್ವರ, ರಾಮು ಕಲಾಲ್, ಜಿ.ಎಸ್.ಕೊರ್ಲಹಳ್ಳಿ, ಎಮ್.ಎಸ್.ದೊಡ್ಡಗೌಡ್ರ,
ವಿ.ಎಸ್.ಯರಾಶಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ರಷ್ಯಾ ಪ್ರಧಾನಿಯನ್ನೂ ಬಿಡಲಿಲ್ಲ ಕೊರೊನಾ!

ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೂ ಕೊರೊನಾ ಮಹಾಮಾರಿ ಬೆನ್ನು ಹತ್ತಿದೆ ಎಂದು ತಿಳಿದು ಬಂದಿದೆ.

ಕೊರೊನಾಕ್ಕೆ ಅಕ್ಷರಸಃ ನಲುಗುತ್ತಿದೆ ಬೆಂಗಳೂರು!

ನವದೆಹಲಿ : ಬೆಂಗಳೂರು ನಗರದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿಗರಲ್ಲಿ ಆತಂಕ ಮನೆ ಮಾಡುತ್ತಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್ ಕಾರ್ಡ್ ಮೂಲಕ 5 ಲಕ್ಷ ರೂ ಗಳವರೆಗೂ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಬಹುದು: ಡಾ: ಕೆ.ಸುಧಾಕರ್

ಉತ್ತರಪ್ರಭ ಸುದ್ದಿ ಬಾಗೇಪಲ್ಲಿ: 100 ದಿನಗಳ ಅವಧಿಯಲ್ಲಿ ರಾಜ್ಯದ 5 ಲಕ್ಷ 20 ಸಾವಿರ ನಾಗರೀಕರಿಗೆ…

ಗದಗ ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್ : ಯಾವ ಊರಲ್ಲಿ ಎಷ್ಟು?

ಜಿಲ್ಲೆಯಲ್ಲಿ ರವಿವಾರ ದಿ.26 ರಂದು ಒಟ್ಟು 61 ಕೊವಿಡ್-19 ಸೋಂಕು ಪ್ರಕರಣ ದೃಢಪಟ್ಟಿವೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.