ಗದಗ: ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 5 ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದಕೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರಗೌಡ ಎಚ್. ಪಾಟೀಲ ರೈತರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಕೊರೊನಾ ವೈರಸ್ (ಕೊವಿಡ್-19) ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಕೈಗೊಂಡ ಕ್ರಮದ ಕುರಿತು ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇವಲ ಹಾಪ್ ಕಾಮ್ಸ್ ಮಳಿಗೆ ಮಾತ್ರವಲ್ಲದೇ ರೈತರು ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಇಲಾಖೆ ವತಿಯಿಂದ ಸಹಾಯವಾಣಿ ಸಂಪರ್ಕಿಸಲು ಹೆಲ್ಪ್ ಡೆಸ್ಕ್ ಗಳನ್ನು ರಚಿಸಲಾಗಿದೆ. ಮಾರಾಟಕ್ಕಾಗಿ ಹಸಿರು ಕಾರ್ಡ್ (ಗ್ರೀನ್ ಪಾಸ್) ವಿತರಿಸಲಾಗುತ್ತಿದೆ. ರೈತ ಉತ್ಪಾದಕರ ಸಂಘಗಳಿಂದ ಗ್ರಾಹಕರಿಗೆ ತರಕಾರಿ ಹಾಗೂ ಹಣ್ಣುಗಳನ್ನು ಮೊಬೈಲ್ ವೆಂಡಿಂಗ್ ವ್ಯಾನ್ ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

You May Also Like

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪಗಳಾದರೆ ಸಂಸ್ಥೆಯ ಮುಖ್ಯಸ್ಥರೆ ಹೊಣೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ಲೋಪ ಅಥವಾ ದೂರುಗಳು ಕಂಡುಬಂದಲ್ಲಿ…

ಜಿಲ್ಲೆಯಲ್ಲಿ ಮೂವರಿಗೆ ಸೋಂಕು ದೃಢ

ಜಿಲ್ಲೆಯಲ್ಲಿ ಶುಕ್ರವಾರ ಮೂರು ಕೊರೊನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿದ್ದು, ನಾಲ್ವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…

ಕೃಷ್ಣೆಯ ಒಡಲಿಗೆ ಸಿಎಂ ಬಾಗಿನ ಅರ್ಪಣೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಸುಕು ಮುಸುಕು.ಕೂಲ್ ಥಂಢಾ ಸಂಭ್ರಮದ ವಾತಾವರಣ. ಹೂ, ಸಸ್ಯ ಗುಚ್ಚುಗಳ ಸೊಬಗು. ತಳಿರು…