ರೈತರಿಂದ ಗ್ರಾಹಕರಿಗೆ ನೇರ ಮಾರಾಟಕ್ಕೆ ಕ್ರಮ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ

ಗದಗ: ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 5 ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದಕೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರಗೌಡ ಎಚ್. ಪಾಟೀಲ ರೈತರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಕೊರೊನಾ ವೈರಸ್ (ಕೊವಿಡ್-19) ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಕೈಗೊಂಡ ಕ್ರಮದ ಕುರಿತು ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇವಲ ಹಾಪ್ ಕಾಮ್ಸ್ ಮಳಿಗೆ ಮಾತ್ರವಲ್ಲದೇ ರೈತರು ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಇಲಾಖೆ ವತಿಯಿಂದ ಸಹಾಯವಾಣಿ ಸಂಪರ್ಕಿಸಲು ಹೆಲ್ಪ್ ಡೆಸ್ಕ್ ಗಳನ್ನು ರಚಿಸಲಾಗಿದೆ. ಮಾರಾಟಕ್ಕಾಗಿ ಹಸಿರು ಕಾರ್ಡ್ (ಗ್ರೀನ್ ಪಾಸ್) ವಿತರಿಸಲಾಗುತ್ತಿದೆ. ರೈತ ಉತ್ಪಾದಕರ ಸಂಘಗಳಿಂದ ಗ್ರಾಹಕರಿಗೆ ತರಕಾರಿ ಹಾಗೂ ಹಣ್ಣುಗಳನ್ನು ಮೊಬೈಲ್ ವೆಂಡಿಂಗ್ ವ್ಯಾನ್ ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Exit mobile version