ಗದಗ: ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 5 ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದಕೊಳ್ಳುವಂತೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರಗೌಡ ಎಚ್. ಪಾಟೀಲ ರೈತರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಕೊರೊನಾ ವೈರಸ್ (ಕೊವಿಡ್-19) ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಕೈಗೊಂಡ ಕ್ರಮದ ಕುರಿತು ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇವಲ ಹಾಪ್ ಕಾಮ್ಸ್ ಮಳಿಗೆ ಮಾತ್ರವಲ್ಲದೇ ರೈತರು ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಇಲಾಖೆ ವತಿಯಿಂದ ಸಹಾಯವಾಣಿ ಸಂಪರ್ಕಿಸಲು ಹೆಲ್ಪ್ ಡೆಸ್ಕ್ ಗಳನ್ನು ರಚಿಸಲಾಗಿದೆ. ಮಾರಾಟಕ್ಕಾಗಿ ಹಸಿರು ಕಾರ್ಡ್ (ಗ್ರೀನ್ ಪಾಸ್) ವಿತರಿಸಲಾಗುತ್ತಿದೆ. ರೈತ ಉತ್ಪಾದಕರ ಸಂಘಗಳಿಂದ ಗ್ರಾಹಕರಿಗೆ ತರಕಾರಿ ಹಾಗೂ ಹಣ್ಣುಗಳನ್ನು ಮೊಬೈಲ್ ವೆಂಡಿಂಗ್ ವ್ಯಾನ್ ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

You May Also Like

ಪೊಲೀಸರಿಗೆ ಸಿಕ್ಕ ನಟ ಸುಶಾಂತ್ ಸಿಂಗ್ ಒಪ್ಪಂದಗಳ ಪ್ರತಿಗಳು!

ನವದೆಹಲಿ: ನಟ ಸುಶಾಂತ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರತಿಗಳನ್ನು ಯಶ್ ರಾಜ್ ಫಿಲ್ಮ್ಸ್ (ವೈಆರ್…

ತಂದೆ ಬರ್ತಡೆಗೆ ಕೇಕ್ ತರಲು ಬಂದವರ ಬೈಕ್ ಜಪ್ತಿ!

ಗದಗ: ಜೂ.1ರವರೆಗೆ ಗದಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದಾಗ್ಯೂ ಜನರು ಮಾತ್ರ ಅನಾವಶ್ಯಕ ಓಡಾಟ ನಿಲ್ಲಿಸುತ್ತಿಲ್ಲ. ತಂದೆಯ ಹುಟ್ಟು ಹಬ್ಬ ಹಿನ್ನೆಲೆ ಕೇಕ್ ತರಲು ಹೊರ ಬಂದವರನ್ನು ತಡೆದ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ.

ಬಂಜಾರ ಭಾಷೆ, ಸಂಸ್ಕೃತಿ ಉಳುವಿಗಾಗಿ ಸಮನ್ವಯ ಮಹಾಸಭೆ

ಉತ್ತರಪ್ರಭ ಸುದ್ದಿ ವಿಜಯಪುರ: ಜಿಲ್ಲೆಯ ಕೋಲ್ಹಾರ ತಾಲೂಕಿನ ಕೂಡಗಿ ತಾಂಡಾದ ಸದಾ ಸಮಾಜದ ಬಗ್ಗೆ ಚಿಂತಿಸುವ…

ಮಾಗಡಿ : ಗ್ರಾಪಂ ಮಾಜಿ ಸದಸ್ಯರ ಬಣವಿಗೆ ಬೆಂಕಿ..!

ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಪರಸಾಪೂರ (ವಾರ್ಡ ನಂ:6) ಗ್ರಾಮದಲ್ಲಿ ಶೇಂಗಾ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಸದಸ್ಯ ಬಸಪ್ಪ ಬೇರಗಣ್ಣವರ ಸದ್ಯ ನಡೆಯುತ್ತಿರುವ ಚುನಾವಣೆಗೆ ಅವರ ಮಗ‌ನನ್ನು ಕಣಕ್ಕೆ ಇಳಿಸಿದ್ದರು.