ನವದೆಹಲಿ: ನಟ ಸುಶಾಂತ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರತಿಗಳನ್ನು ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಮುಂಬಯಿ ಪೊಲೀಸರಿಗೆ ಸಲ್ಲಿಸಿದೆ.

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಬಾಂದ್ರದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಪತ್ರ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಬಳಿಕ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಸಿನಿಮಾ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಯಶ್ ರಾಜ್ ಫಿಲ್ಮ್ಸ್ ಗೆ ಜೂ.18 ರಂದು ಸೂಚನೆ ನೀಡಿದ್ದರು. ಹೀಗಾಗಿ ಯಶ್ ರಾಜ್ ಫಿಲ್ಸ್ಮ್ ಪ್ರತಿಗಳನ್ನು ನೀಡಿದೆ.

ಸುಶಾಂತ್ ಸಿಂಗ್ ರಜಪೂತ್ ಸಹಿ ಮಾಡಿರುವ ಒಪ್ಪಂದದ ಪತ್ರ ವೈಆರ್ ಎಫ್ ನಿಂದ ಲಭ್ಯವಾಗಿದೆ ಎಂದು ಅಭಿಷೇಕ್ ತ್ರಿಮುಖೆ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಝೋನ್-IX ಹೇಳಿದ್ದಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು, ಸುಶಾಂತ್ ಕುಟುಂಬ ಸದಸ್ಯರು, ಸುಶಾಂತ್ ನ ಆಪ್ತ ಗೆಳತಿ ರೆಹಾ ಚಕ್ರವರ್ತಿ, ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಬ್ರಾ ಸೇರಿದಂತೆ 15 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಸ್ತಿ ಕಲಹ: ಪತ್ನಿ ಎದುರೆ ಪತಿಯ ಹತ್ಯೆ!

ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಮೇ. 15ರಂದು ಈ ಕೊಲೆ ನಡೆದಿದ್ದು, ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಮೇಶ್ ಬಾಳಗಿ (39) ಕೊಲೆಯಾದ ವ್ಯಕ್ತಿ. ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ನಟಿ ನಯನತಾರಾ ಅವರ ಮತ್ತೊಂದು ಲವ್ ಸ್ಟೋರಿ ಇದು!!

ನಟಿ ನಯನತಾರಾ ಲವ್ ಸ್ಟೋರಿಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ತಮ್ಮ ಹಿಂದಿನ ಲವ್ ಸ್ಟೋರಿಗಳನ್ನು ಮರೆತು ಇದೀಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಸರ್ಕಾರದ ಲೆಕ್ಕದಲ್ಲಿ ರಾಜ್ಯದಲ್ಲಿ ಸೋಂಕಿಗೆ ಒಳಗಾದವರು ಎಷ್ಟು ಜನ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ವೈರಸ್ ಗೆ ಸುಮಾರು 2 ಕೋಟಿ ಜನರಿಗೆ ತಗುಲಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.