ಬಾಲಿವುಡ್ ಖ್ಯಾತ ನಟ ಹಾಗೂ ಬಿಗ್ ಬಿ  ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ಯಾವ ಚಿತ್ರಕರಣ ಅಂತ ಕುತೂಹಲಾನಾ?

ಹೌದು ಇದು ಕೌನ್ ಬನೇಗಾ ಕರೋಡ ಪತಿ ಎನ್ನುವ ಕಿರುತೆರೆಯ ರಿಯಾಲಿಟಿ ಶೋ ಮತ್ತೆ ಆರಂಭವಾಗುವ ಸೂಚನೆ. ಅಮಿತಾಭ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗ ಕರೋಡ್​ ಪತಿ ಕಿರುತೆರೆಯ ಕಾರ್ಯಕ್ರಮ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಕೌನ್ ಬನೇಗಾ ಕರೋಡಪತಿ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಚಿತ್ರೀಕರಣ ಡಿಜಿಟಲೀಕರಣ ಮೂಲಕ ನಡೆಯಲಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದವರನ್ನು ಎರಡನೇ ಹಂತದಲ್ಲಿ ಟೆಲಿಫೋನ್ ಮೂಲಕ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದ ಪ್ರಕ್ರಿಯೆ ಆನ್ ಲೈನ್ ಆಡಿಷನ್ ಮೂಲಕ ನಡೆಯಲಿದೆ. ಅಂತಿಮ ಸುತ್ತು ವೈಯಕ್ತಿಕ ಸಂದರ್ಶನವಾಗಿರಲಿದೆ, ಅದನ್ನು ವಿಡಿಯೊ ಕಾಲ್ ಮೂಲಕ ನಡೆಸಲಾಗುತ್ತದೆ.ಇಡೀ ಆಯ್ಕೆ ಪ್ರಕ್ರಿಯೆಯನ್ನು ಸ್ವತಂತ್ರ ಆಡಿಟ್ ಕೇಂದ್ರ ತಪಾಸಣೆ ಮಾಡಲಿದೆ.

ಸೋನಿ ಎಂಟರ್ಟೈನ್ ಮೆಂಟ್ ಟೆಲಿವಿಷನ್ ನಲ್ಲಿ ಮೇ 9ರಿಂದ ಮೇ 22ರವರೆಗೆ  ಸ್ಪರ್ಧಿಗಳ ದಾಖಲಾತಿ ನಡೆಯಲಿದೆ. ಪ್ರತಿದಿನ ರಾತ್ರಿ ಅಮಿತಾಬ್ ಬಚ್ಚನ್ ಸೋನಿ ಟಿವಿಯಲ್ಲಿ ಪ್ರಶ್ನೆಗಳನ್ನು ಕೇಳಲಿದ್ದು ವೀಕ್ಷಕರು ಎಸ್ ಎಂಎಸ್ ಅಥವಾ ಸೋನಿ ಲೈವ್ ಮೂಲಕ ಉತ್ತರಿಸಲಿದ್ದಾರೆ.

Leave a Reply

Your email address will not be published.

You May Also Like

ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಲಸಿಕೆ ಬಗ್ಗೆ ಮುಖ್ಯ ಮಾಹಿತಿ

ಬೆಂಗಳೂರು: ಈಗಾಗಲೇ ರಾಜ್ಯದ ಬಹುತೇಕರು ಅದ್ಯಯನ ಅಥವಾ ಉದ್ಯೋಗಕ್ಕಾಗಿ ವಿದೇಶಗಳನ್ನೆ ನೆಚ್ಚಿಕೊಂಡಿದ್ದಾರೆ. ಈ ಉದ್ದೇಶದಿಂದ ವಿದೇಶಕ್ಕೆ ತೆರಳುವವರು, ಜೂನ್.1 ರಿಂದ ಕೋವಿಡ್ ಲಸಿಕೆ ಪಡೆಯಬಹುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…

ಮದ್ಯದ ಅಮಲಿನಲ್ಲಿ ಮಡದಿಯ ಕೊಲೆ!

ಮದ್ಯದ ಮತ್ತಿನಲ್ಲಿ ಪತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ನೆಲಮಂಗಲ ಸಮೀಪದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.

ಗರ್ಭಿಣಿ ಪತ್ನಿ, ಮಗುವನ್ನು ಬಂಡಿಯಲ್ಲಿ ಕೂರಿಸಿಕೊಂಡು 700 ಕಿ.ಮೀ ನಡೆದ ಪತಿ!

ಇಲ್ಲೊಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.