ಬೆಂಗಳೂರು : ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಕನ್ನಡದ ಹಿರಿಯ ಕವಿ ಕೆ.ಎಸ್.ನಿಸಾರ್ ಅಹ್ಮದ್ ಇಂದು ನಿಧನ ಹೊಂದಿದ್ದಾರೆ. ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ನಿಸಾರ ಅಹ್ಮದ್ ಇಂದು ಕೊನೆ ಉಸಿರೆಳೆದರು.

ಒಟ್ಟು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತರುವ ಮೂಲಕ ಕನ್ನಡ ಸಾಹಿತ್ಯ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದರು. ಹಾಸ್ಯ, ವಿಡಂಬನೆ, ಗಾಂಭಿರ್ಯ, ಸೌಂಧರ್ಯ ಪ್ರಜ್ಞೆ ಇವರ ಕಾವ್ಯಗಳಲ್ಲಿನ ವಿಶೇಷತೆ.

ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿಸಾರ್ ಅಹ್ಮದ್ ಕಾಲೇಜುಗಳಲ್ಲಿ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.. ನಿತ್ಯೋತ್ಸವದ ಕವಿ ಈಗ ನೆನಪು ಮಾತ್ರ ಆದರೆ ಅವರ ಸಾಹಿತ್ಯ ನಿತ್ಯ ನೂತನ.

Leave a Reply

Your email address will not be published. Required fields are marked *

You May Also Like

ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ!

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟವಾಗಿದೆ.

ಕೊಪ್ಪಳದಲ್ಲೂ ಕೊರೋನಾ ಸಪ್ಪಳ: ಮೂರು ಪಾಸಿಟಿವ್ ದೃಢ

ಕೊಪ್ಪಳ: ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೇ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಆದರೆ ಇದೀಗ…

ಅಳಲು ತೊಡಿಕೊಂಡ 9ನೇ ವಾರ್ಡಿನ ನಿವಾಸಿ:ಕುಸಿದ ಬಿದ್ದ ಮನೆಗೆ ತಪ್ಪಿದ ಪರಿಹಾರ

ವರದಿ: ವಿಠಲ ಕೆಳೂತ್ಮಸ್ಕಿ: ಮಳೆಗೆ ಮನೆ ಕಳೆದುಕೊಂಡ ಅರ್ಹ ಪಲಾನುಭವಿಗಳಿಗೆ ಕೊಟ್ಯಾಂತರ ರೂಪಾಯಿ ಪರಿಹಾರ ನೀಡಿದೆ.…

ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ…