ಕೊಪ್ಪಳ: ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೇ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಆದರೆ ಇದೀಗ ಮೂರು ಪಾಸಿಟಿವ್ ದೃಢ ಪಟ್ಟಿದ್ದರಿಂದ ಕೊಪ್ಪಳದಲ್ಲೂ ಕೊರೋನಾ ಸಪ್ಪಳ ಆರಂಭವಾಗಿದೆ.
ಕೊಪ್ಪಳದಲ್ಲಿ ಮೊದಲ ಬಾರಿಗೆ ಮೂವರಿಗೆ ಕೊರೋನಾ ಸೊಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಂದಿದ್ದ 24 ವರ್ಷದ P-1173, 20 ವರ್ಷದ P-1174 ಸೋಂಕು ದೃಢಪಟ್ಟಿದೆ. ಇನ್ನು ಚನ್ನೈನಿಂದ ಬಂದಿದ್ದ 25 ವರ್ಷದ P-1175 ಪಾಸಿಟಿವ್ ಕೇಸ್ ಆಗಿದೆ.
ಇತ್ತಿಚೆಗಷ್ಟೆ ಹೊರ ರಾಜ್ಯದಿಂದ ಬಂದಿದ್ದ ಇವರುಗಳನ್ನು ಕ್ವಾಂರಂಟೇನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗ ಕೊರೋನಾ ಸೋಂಕು ಪಾಸಿಟಿವ್ ಪತ್ತೆಯಾಗಿದೆ. ಸದ್ಯ ಇವರನ್ನು ಸರಕಾರಿ ಕೊವಿಡ್ ಆಸ್ಪತೆಯ ಐಸೋಲೇಷನ್ ನಲ್ಲಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರ ಸಂಪರ್ಕಿತರ ಮಾಹಿತಿ ಪಡೆದು ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜನಪದ ಜನರ ಜೀವನಾಡಿ; ಜನಪದ ಕಲಾವಿದರಿಗೆ ಹೆಚ್ಚಿನ ಗೌರವಗಳು ಸಿಗಬೇಕು: ರವಿಕಾಂತ ಅಂಗಡಿ

ಉತ್ತರಪ್ರಭ ಸುದ್ದಿಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ,…

ಕಂಟೈನ್ಮೆಂಟ್ ಬಿಟ್ಟು ಉಳಿದೆಡೆ ವಹಿವಾಟಿಗೆ ಅವಕಾಶ ನೀಡಬೇಕು

ನವದೆಹಲಿ: ದೇಶದಾದ್ಯಂತ ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಎಲ್ಲ ರೀತಿಯ…

ಬಿಎಸ್‌ವೈ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲ ವಜುಭಾಯಿ ವಾಲಾ

ಮಹಾಮಾರಿ ಕರೊನಾ ವೈರಸ್‌ನಿಂದ ಉಂಟಾದ ಕಠಿಣ ಪರಿಸ್ಥಿತಿನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶ್ವಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.