ಬೆಂಗಳೂರು: ಈಗಾಗಲೇ ಒಂದುವರೆ ತಿಂಗಳಿಂದ ಘೋಷಣೆಯಾಗಿರುವ ಲಾಕ್ ಡೌನ್ ನಿಂದಾಗಿ ಜನರು ತಮ್ಮದೇ ಆದ ಅಭಿರುಚಿಗೆ ತಕ್ಕಂತೆ ಕಾಲ ಕಳೆಯುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಬಹುತೇಕ ಚಾಲ್ತಿಯಲ್ಲಿರು ಧಾರಾವಾಹಿ ಶೂಟಿಂಗ್ ಕಾರ್ಯ ಕೂಡ ನಿಂತಿದೆ. ಇದರಿಂದಾಗಿ ಡಿಡಿ ವಾಹಿನಿ ಮತ್ತೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದು ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೆರೆದಿದೆ.  

ವೀಕ್ಷಕರು ಮನರಂಜನೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಹಳೆಯ ದಾರಾವಾಹಿಯನ್ನು ಮರುಪ್ರಸಾರ ಮಾಡಿದಾಗಲೂ ಕೂಡ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಹಳೆಯ ದಾರಾವಾಹಿಗಳಿಗೆ ಇನ್ನು ಜನಪ್ರೀಯತೆ ಇದೆ ಎಂಬುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಜನರ ಅಭಿರುಚಿ ಅರ್ಥೈಸಿಕೊಂಡ ಡಿಡಿ ವಾಹಿನಿ ಮೂರು ದಶಕಗಳ ಹಿಂದೆ ಪ್ರಸಾರವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿ ತನ್ನ ಮರು ಪ್ರಸಾರ ಮಾಡುತ್ತಿದೆ. ಏಪ್ರಿಲ್ 16ರಂದು ಒಂದೇ ದಿನ ಅಂದಾಜು 7.7 ಕೋಟಿ ವೀಕ್ಷಕರು ರಾಮಾಯಣ ಧಾರಾವಹಿಯನ್ನು ವೀಕ್ಷಿಸಿದ್ದಾರೆ. ಈ ಮೂಲಕ ರಾಮಾಯಣ ದಾರಾವಾಹಿ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ.

ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನ ಪಾತ್ರ ಧರಿಸಿದರೇ ದೀಪಿಕಾ ಚಿಕ್ಲಿಯಾ ಸೀತೆಯಾಗಿ, ಸುನಿಲ್ ಲಹಿರಿ ಲಕ್ಷ್ಮಣನಾಗಿ, ದಾರಾ ಸಿಂಗ್ ಹನುಂತನಾಗಿ, ಲಲಿತಾ ಪವಾರ್‍ ಮಂಥರೆ ಮತ್ತು ಅರವಿಂದ್ ತ್ರಿವೇದಿ ರಾವಣನಾಗಿ ನಟಿಸಿದ್ದಾರೆ. ಮರು ಪ್ರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಪಂಚದಲ್ಲಿಯೇ ಯಾವ ಎಪಿಸೋಡೂ ತಲುಪದಷ್ಟು ವೀಕ್ಷಕರನ್ನು ತಲುಪಿ ಹೊಸ ದಾಖಲೆ ಬರೆದಿದೆ ಎಂದು ದೂರದರ್ಶನ ಟ್ವೀಟ್ ನಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ-ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಹೊಸದಿಲ್ಲಿ: ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ…

ಅನೈತಿಕ ಚಟುವಟಿಕೆ: ಐವರ ಬಂಧನ

ಲಕ್ನೋ : ಸೆಕ್ಸ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಐವರನ್ನು ಬಂಧಿಸಿ, ಐವರನ್ನು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇಹಾತ್ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿಂದು ಕೊರೊನಾ ಪಾಸಿಟಿವ್! 06

ಬಾಗಲಕೋಟೆ: ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 161ಕ್ಕೆ…

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…