ಹಳೆಯ ಧಾರಾವಾಹಿಗಳಿಗೆ ಮೊರೆ: ದಾಖಲೆ ಸೇರಿದ ರಾಮಾಯಣ ಧಾರಾವಾಹಿ

ಬೆಂಗಳೂರು: ಈಗಾಗಲೇ ಒಂದುವರೆ ತಿಂಗಳಿಂದ ಘೋಷಣೆಯಾಗಿರುವ ಲಾಕ್ ಡೌನ್ ನಿಂದಾಗಿ ಜನರು ತಮ್ಮದೇ ಆದ ಅಭಿರುಚಿಗೆ ತಕ್ಕಂತೆ ಕಾಲ ಕಳೆಯುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಬಹುತೇಕ ಚಾಲ್ತಿಯಲ್ಲಿರು ಧಾರಾವಾಹಿ ಶೂಟಿಂಗ್ ಕಾರ್ಯ ಕೂಡ ನಿಂತಿದೆ. ಇದರಿಂದಾಗಿ ಡಿಡಿ ವಾಹಿನಿ ಮತ್ತೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದು ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೆರೆದಿದೆ.  

ವೀಕ್ಷಕರು ಮನರಂಜನೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಹಳೆಯ ದಾರಾವಾಹಿಯನ್ನು ಮರುಪ್ರಸಾರ ಮಾಡಿದಾಗಲೂ ಕೂಡ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಹಳೆಯ ದಾರಾವಾಹಿಗಳಿಗೆ ಇನ್ನು ಜನಪ್ರೀಯತೆ ಇದೆ ಎಂಬುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಜನರ ಅಭಿರುಚಿ ಅರ್ಥೈಸಿಕೊಂಡ ಡಿಡಿ ವಾಹಿನಿ ಮೂರು ದಶಕಗಳ ಹಿಂದೆ ಪ್ರಸಾರವಾಗಿದ್ದ ರಮಾನಂದ ಸಾಗರರ ರಾಮಾಯಣ ಧಾರಾವಾಹಿ ತನ್ನ ಮರು ಪ್ರಸಾರ ಮಾಡುತ್ತಿದೆ. ಏಪ್ರಿಲ್ 16ರಂದು ಒಂದೇ ದಿನ ಅಂದಾಜು 7.7 ಕೋಟಿ ವೀಕ್ಷಕರು ರಾಮಾಯಣ ಧಾರಾವಹಿಯನ್ನು ವೀಕ್ಷಿಸಿದ್ದಾರೆ. ಈ ಮೂಲಕ ರಾಮಾಯಣ ದಾರಾವಾಹಿ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ.

ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನ ಪಾತ್ರ ಧರಿಸಿದರೇ ದೀಪಿಕಾ ಚಿಕ್ಲಿಯಾ ಸೀತೆಯಾಗಿ, ಸುನಿಲ್ ಲಹಿರಿ ಲಕ್ಷ್ಮಣನಾಗಿ, ದಾರಾ ಸಿಂಗ್ ಹನುಂತನಾಗಿ, ಲಲಿತಾ ಪವಾರ್‍ ಮಂಥರೆ ಮತ್ತು ಅರವಿಂದ್ ತ್ರಿವೇದಿ ರಾವಣನಾಗಿ ನಟಿಸಿದ್ದಾರೆ. ಮರು ಪ್ರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಪಂಚದಲ್ಲಿಯೇ ಯಾವ ಎಪಿಸೋಡೂ ತಲುಪದಷ್ಟು ವೀಕ್ಷಕರನ್ನು ತಲುಪಿ ಹೊಸ ದಾಖಲೆ ಬರೆದಿದೆ ಎಂದು ದೂರದರ್ಶನ ಟ್ವೀಟ್ ನಲ್ಲಿ ತಿಳಿಸಿದೆ.

Exit mobile version